Get Updates
Get notified of breaking news, exclusive insights, and must-see stories!

ಗಾಯಕಿ ರಮ್ಯಾ ವಸಿಷ್ಠ ವಿರುದ್ಧ ಎಫ್ಐಆರ್ ದಾಖಲು

FIR filed against Singer Ramya Vasishta
ಬೆಂಗಳೂರು, ಮಾ.24: ಗಾಯಕಿ ರಮ್ಯಾ ವಸಿಷ್ಠ ಅವರು ತಮ್ಮ ಪತಿ ರಾಜೇಶ್ ಕೃಷ್ಣನ್ ಅವರಿಗೆ ಪುರುಷತ್ವ ಇಲ್ಲ ಎಂದು ಮದುವೆಯನ್ನು ಅಸಿಂಧುಗೊಳಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಹಾಕಿರುವ ಕಥೆ ಎಲ್ಲರಿಗೂ ತಿಳಿದಿದೆ. ಈಗ ರಮ್ಯಾ ವಸಿಷ್ಠ ಅವರ ಮೇಲೆ ಬಸವೇಶ್ವರನಗರ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಆದರೆ, ಇದು ಮೇಲ್ನೋಟಕ್ಕೆ ಬೇರೆ ಪ್ರಕರಣದಂತೆ ಕಂಡು ಬಂದರೂ ಈ ಕೇಸಿಗೂ ಕೃಷ್ಣನ್ ಪುರುಷತ್ವ ಕೇಸಿಗೂ ಲಿಂಕ್ ಇದೆ. ರಮ್ಯಾ ಹಾಗೂ ಅವರ ಗೆಳತಿ ಉಷಾ ವಿರುದ್ಧ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದೂರು ದಾಖಲಾಗಿದೆ.

ಏನಿದು ದೂರು ?: ರಮ್ಯಾ ಹಾಗೂ ಅವರ ಗೆಳತಿ ಉಷಾ ಅವರು ನಮ್ಮ ಮನೆಗೆ ನುಗ್ಗಿ ದಾಂಧಲೆ ನಡೆಸಿದರು. ಕೊಲೆ ಬೆದರಿಕೆ ಒಡ್ಡಿದ್ದಾರೆ. ಮನೆಯಲ್ಲಿದ್ದ ನಗ ನಾಣ್ಯ ದೋಚಿದರು. ಬೆದರಿಕೆ ಹಾಕಿ ನನ್ನನ್ನು ಹಾಗೂ ನನ್ನ ಪತ್ನಿಯನ್ನು ರೂಮಿನಲ್ಲಿ ಕೂಡಿ ಹಾಕಿದರು. ಖಾಲಿ ಪೇಪರ್ ಮೇಲೆ ಸಹಿ ಹಾಕುವಂತೆ ಒತ್ತಾಯಿಸಿದರು ಒಪ್ಪದಿದ್ದಾಗ, ಅತ್ಯಾಚಾರ ಯತ್ನ ದೂರು ದಾಖಲಿಸುವ ಬೆದರಿಕೆ ಒಡ್ಡಿದರು. ಸುಮಾರು 3 ಲಕ್ಷ ರು ನಗದು ದೋಚಿಕೊಂಡು ಹೋಗಿದ್ದಾರೆ ಎಂದು ಪ್ರಹ್ಲಾದ್ ಶೆಟ್ಟಿ ದೂರಿನಲ್ಲಿ ಹೇಳಿದ್ದಾರೆ.

ರಾಜೇಶ್ ಅವರಿಗೆ ಪುರುಷತ್ವವಿಲ್ಲ ಎಂದು ನೀವು ವಿವಾಹಕ್ಕೆ ಮೊದಲೇ ಹೇಳಿಲ್ಲ. ಈ ಹಿಂದೆಯೇ ನೀವು ಈ ಬಗ್ಗೆ ನಮಗೆ ತಿಳಿಸಬೇಕಿತ್ತು. ಪುರುಷತ್ವದ ಬಗ್ಗೆ ಅಂದೇ ಹೇಳಿದ್ದರೆ ಇಂದು ನನ್ನ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಇದರ ತಪ್ಪಿಗೆ ನೀವು 10 ಲಕ್ಷ ನೀಡಬೇಕು ಎಂದು ರಮ್ಯಾ ವಸಿಷ್ಠ ಬೆದರಿಕೆ ಹಾಕಿದ್ದಾರೆ ಎಂದು ಪ್ರಹ್ಲಾದ್ ದೂರಿದ್ದಾರೆ.

ಕರಾವಳಿ ಮೂಲದ ಪ್ರಹ್ಲಾದ್ ಶೆಟ್ಟಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಬಸವೇಶ್ವರ ನಗರ ಪೊಲೀಸರು ಐಪಿಸಿ ಸೆಕ್ಷನ್ 161,134,448,341,504,342 ಹಾಗೂ 506 ಅನ್ವಯ ಎಫ್ ಐಆರ್ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ರಮ್ಯಾ ಅವರನ್ನು ಬಂಧಿಸುವ ಸಾಧ್ಯತೆಯಿರುವುದರಿಂದ ಆಕೆ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿತ್ತು.

ಪ್ರತ್ಯಕ್ಷವಾದ ರಮ್ಯಾ: ಕ್ರಿಮಿನಲ್ ದೂರು ದಾಖಲಾದ ಸುದ್ದಿ ಹೊರ ಬೀಳುತ್ತಿದ್ದಂತೆ ಸುವರ್ಣ ಸುದ್ದಿ ವಾಹಿನಿ ಸ್ಟುಡಿಯೋದಲ್ಲಿ ಪ್ರತ್ಯಕ್ಷವಾದ ರಮ್ಯಾ ಅವರು, ನಾನು ತಲೆ ಮರೆಸಿಕೊಂಡಿಲ್ಲ. ನಾನು ಪ್ರಹ್ಲಾದ್ ಶೆಟ್ಟಿ ಅವರಿಗೆ ಬೆದರಿಕೆ ಒಡ್ಡಿಲ್ಲ ಅವರ ಹಣ ದೋಚಿಲ್ಲ. ಬದಲಿಗೆ ಅವರೇ ಲಕ್ಷಾಂತರ ರು ವಂಚಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ರಮ್ಯಾ ವಸಿಷ್ಠ ಹಾಗೂ ರಾಜೇಶ್ ವಿವಾಹವಾಗುವುದನ್ನು ನಿಶ್ಚಯ ಮಾಡಿಕೊಂಡ ನಂತರ (2 ವರ್ಷದ ಹಿಂದೆ), ಮಂಜುನಾಥ ನಗರ ನಿವಾಸಿ ಹಾಗೂ ಧಾರ್ಮಿಕ ಸಂಯೋಜಕ ಪ್ರಹ್ಲಾದ್ ಶೆಟ್ಟಿ ಅವರ ಬಳಿ ಹೋಗಿದ್ದರು. ಶಾಸ್ತ್ರ ನೋಡಿ, ಹೋಮ ಮಾಡುವಂತೆ ಮನವಿ ಮಾಡಿದರು. ಅದರಂತೆ ಪ್ರಹ್ಲಾದ್ ಅವರು ತಮಗೆ ಪರಿಚಯವಿದ್ದ ಶೇಷಾದ್ರಿ ಅವರ ಬಳಿ ಕಳುಹಿಸಿದರು. ಶೇಷಾದ್ರಿ ಅವರು ರಾಯಚೂರು ಸಮೀಪದಲ್ಲಿರುವ ಧಾರ್ಮಿಕ ಕೈಂಕರ್ಯಕ್ಕೆಂದೇ ಮೀಸಲಿರುವ ದೇವಸ್ಥಾನವೊಂದರಲ್ಲಿ ಹೋಮ ಮಾಡಿದರು. ನಂತರ ರಮ್ಯಾ-ರಾಜೇಶ್ ಅವರ ವಿವಾಹ ಕೊಲ್ಲೂರಿನಲ್ಲಿ 2011ರಲ್ಲಿ ನೆರವೇರಿತ್ತು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+