ಯಡಿಯೂರಪ್ಪ ಹಾಗೂ ಅನಂತು ನಡುವೆ ಸೋಮಣ್ಣ
ಬೆಂಗಳೂರು, ಮಾ.18: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಸಂಸದ ಅನಂತಕುಮಾರ್ ನಡುವೆ ಹುಲ್ಲು ಕಡ್ಡಿ ಹಾಕಿದರೂ ಸಾಕು ಬೆಂಕಿ ಹತ್ತಿಕೊಳ್ಳುತ್ತದೆ ಎಂಬಂತಹ ಪರಿಸ್ಥಿತಿ ಇರುವಾಗ " ಇಬ್ಬರೂ ನಮ್ಮವರೇ ನನಗೆ ಇಬ್ಬರೂ ನಾಯಕರೇ" ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಬಿಜೆಪಿ ಬಿಟ್ಟು ಬೇರೆ ಬೇರೆ ಪಕ್ಷ ಕಟ್ಟಿಕೊಂಡಿರುವವರನ್ನು ಮತ್ತೊಮ್ಮೆ ಬಿಜೆಪಿಗೆ ಕರೆ ತರಲು ಚಿಂತನೆ ನಡೆದಿದೆಯಂತೆ. ಮರಳಿ ಬಿಜೆಪಿಗೆ ಬನ್ನಿ ಅಭಿಯಾನದ ಆರಂಭ ವಿ ಸೋಮಣ್ಣ ಅವರಿಂದಲೆ ಆಗಿದೆ ಎನಿಸುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದೆಂದಿಗೂ ನನ್ನ ನಾಯಕ. ಆದರೆ ಮುಂದಿನ ಚುನಾವಣೆಯಲ್ಲಿ ನಾನು ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನನ್ನ ಮತ್ತು ಯಡಿಯೂರಪ್ಪರ ಬಾಂಧವ್ಯ, ಸ್ನೇಹಕ್ಕೆ ಎಂದೂ ಧಕ್ಕೆ ಬಂದಿಲ್ಲ. ಯಡಿಯೂರಪ್ಪರಿಗೆ ಸ್ವಲ್ಪ ಸಂಯಮ ಕಡಿಮೆ. ವಯಸ್ಸಿಗೆ ತಕ್ಕ ಸಂಯಮ ಇಲ್ಲ. ಆತುರವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ರಾಜ್ಯದಲ್ಲಿ ದೇವೇಗೌಡರನ್ನು ಬಿಟ್ಟರೆ ಬಿಎಸ್ ಯಡಿಯೂರಪ್ಪ ಅವರೇ ಪ್ರಮುಖ ನಾಯಕರು ಎಂಬುದರಲ್ಲಿ ಸಂಶಯ ಬೇಡ.
ನಾನು ಬಿಜೆಪಿಗೆ ಸೇರಲು ಅನಂತ್ ಕುಮಾರ್ ಮತ್ತು ಬಿಎಸ್‌ವೈ ಕಾರಣ. ಈಗಲೂ ಬಿಎಸ್‌ವೈರನ್ನು ಪಕ್ಷಕ್ಕೆ ಮರಳಲು ಮನವಿ ಮಾಡುತ್ತಿದ್ದೇನೆ ಎಂದು ಸೋಮಣ್ಣ ಅವರು ತಮ್ಮ ಮಾತಿನ ಅಸಲಿ ರಾಗ ಹೊರ ಬಿಟ್ಟರು.
ಬಿಜೆಪಿ ಮುಖಂಡರ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಅಬಕಾರಿ ಸಚಿವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ, ಚುನಾವಣೆಯಲ್ಲಿ ನಾಯಕತ್ವದ ಕೊರತೆ ಮತ್ತು ಪಕ್ಷದ ಕೆಲವು ನ್ಯೂನತೆಗಳಿಂದ ಸೋಲು ಅನುಭವಿಸಲಾಗಿದೆ. ಇನ್ಮುಂದೆ ಆ ರೀತಿ ಆಗುವುದಿಲ್ಲ ಎಂದರು.
ಸಚಿವ ವಿ.ಸೋಮಣ್ಣ ಅವರ ಕಾಂಗ್ರೆಸ್ ಸೇರ್ಪಡೆಯನ್ನು ಬೆಂಗಳೂರಿನ ಬಹುತೇಕ ಶಾಸಕರು ಸ್ವಾಗತಿಸಿದ್ದರು. ಆದರೆ, ಅವರ ಪ್ರತಿಸ್ಪರ್ಧಿ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ಅವರು ಸಹಜವಾಗಿ ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಿತ ಬೆಲೆಯಲ್ಲಿ ಹಿತವಾದ ಮನೆ: ಮಂಗಳೂರಿನ ಕೋಟೆಕಾರ್ (ದೇರಳಕಟ್ಟೆ ಬಳಿ)ನಲ್ಲಿ ಸುಮಾರು 2 ಎಕರೆ ಪ್ರದೇಶದಲ್ಲಿ 45 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುವ 216 ಫ್ಲಾಟ್‌ಗಳನ್ನೊಳಗೊಂಡ ವಸತಿ ಸಮು ಚ್ಚಯವನ್ನು ಸುಮಾರು 14 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಕುಡುಪು ಪ್ರದೇಶದಲ್ಲಿಯೂ 69 ಮನೆಗಳನ್ನು ನಿರ್ಮಿಸಲಾಗುವುದು ಎಂದು ಸೋಮಣ್ಣ ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲೂ 1500 ಕೋ.ರೂ. ವೆಚ್ಚದಲ್ಲಿ ವಸತಿ ಸಮುಚ್ಚಯ ಹಾಗೂ ಬಡಾವಣೆಯನ್ನು ಅಭಿವೃದ್ಧಿ ಪಡಿಸುವ ಯೋಜನೆಯ ಪ್ರಸ್ತಾಪವಿದೆ ಎಂದು ಹೇಳಿದರು.












Click it and Unblock the Notifications