ಇಸ್ಲಾಂ ನಾಯಕನಿಗೆ ಗಲ್ಲು, ಹಿಂದೂ ದೇಗುಲ ಧ್ವಂಸ

1971ರ ಯುದ್ಧಾಪರಾಧದ ಪ್ರಕರಣಗಳಿಗೆ ಸಂಬಂಧಿಸಿ ಇಸ್ಲಾಮಿ ಪಕ್ಷದ ಉಪಾಧ್ಯಕ್ಷ ಸಯೀದ್ ಸೇರಿ ಹಲವು ಮುಖಂಡರಿಗೆ ಢಾಕಾ ನ್ಯಾಯಾಲಯ ಫೆ.28ರಂದು ಮರಣದಂಡನೆ ವಿಧಿಸಿತ್ತು. ಇದನ್ನು ಖಂಡಿಸಿ ಹಿಂಸಾಚಾರಕ್ಕಿಳಿದಿದ್ದ ಪಕ್ಷದ ಕಾರ್ಯಕರ್ತರು ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಬಾಂಗ್ಲಾದೇಶ ಪೂಜಾ ಉಡ್ಜಾಪನ್ ಪರಿಷತ್ ಹೇಳಿದೆ.
ದಾಳಿಯ ಹಿಂದೆ ಜಮಾತ್- ಇ- ಇಸ್ಲಾಮಿ ಹಾಗೂ ಅದರ ವಿದ್ಯಾರ್ಥಿ ಘಟಕ ಛಾತ್ರ ಶಿಬಿರ್‌ನ ಕೈವಾಡ ಇದೆ ಎಂದು ಪರಿಷತ್‌ನ ಉಪಾಧ್ಯಕ್ಷ ಕಝಲ್ ದೇಬ್‌ನಾಥ್ ಆರೋಪಿಸಿದ್ದಾರೆ. ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಯುತ್ತಿದ್ದರೂ ಪೊಲೀಸರು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ನೊಖಾಲಿ, ಸತ್ಖಿರಾ, ಸಿರಾಗಂಜ್ ಜಿಲ್ಲೆಗಳಲ್ಲಿ ದುಷ್ಕರ್ಮಿಗಳಿಗೆ ಹಿಂದೂಗಳ ಮೇಲೆ ಮುಕ್ತವಾಗಿ ದಾಳಿ ನಡೆಸಿದ್ದಾರೆ. ಇಸ್ಲಾಮಿ ಛಾತ್ರಾ ಶಿಬಿರ್ ನ ಕಾರ್ಯಕರ್ತರನ್ನು ಹತ್ತಿಕ್ಕುವಲ್ಲಿ ಸರ್ಕಾರ ವಿಫಲವಾಗಿದೆ.
ಆದರೆ, ಜಮಾತ್ ಮುಖಂಡರು ಮಾತ್ರ ದಾಳಿಯಲ್ಲಿ ತಮ್ಮ ಕೈವಾಡವನ್ನು ನಿರಾಕರಿಸಿದ್ದಾರೆ. ಬದಲಾಗಿ ಆಡಳಿತಾರೂಢ ಅವಾಮಿ ಲೀಗ್ ಮುಖಂಡರತ್ತ ಅವರು ಬೊಟ್ಟು ಮಾಡಿದ್ದಾರೆ. ವಿದೇಶಾಂಗ ಸಚಿವ ದಿಪು ಮೊನಿ ಮಾತ್ರ ಹಿಂದೂಗಳ ಮೇಲಿನ ದಾಳಿಗೆ ಜಮಾತ್ ಪಕ್ಷವೇ ಕಾರಣ ಎಂದು ಆರೋಪಿಸಿದ್ದರು.
ಬಾಂಗ್ಲಾದೇಶದ 153 ಮಿಲಿಯನ್ ಜನಸಂಖ್ಯೆಯಲ್ಲಿ ಶೇ.8 ರಿಂದ 10 ಸಂಖ್ಯೆಯಷ್ಟಿರುವ ಹಿಂದೂಗಳು ಜಾತ್ಯತೀತ ಪಕ್ಷವೆಂದು ಕರೆಸಿಕೊಳ್ಳುವ ಅವಾಮಿ ಲೀಗ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ರಾಜಕೀಯವಾಗಿ ಕೂಡಾ ಹಿಂದೂ ಗಳಿಗೆ ಯಾವುದೇ ಮಾನ್ಯತೆ ಸಿಗದೆ ನಿರಂತರ ಹಿಂಸೆಗೊಳಗಾಗಿದ್ದಾರೆ.
ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಶೋಧಕ ಅಬ್ಬಾಸ್ ಫೈಜ್ ಅವರು ಹಿಂದೂಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿದ್ದು, ಜನಾಂಗೀಯ ದ್ವೇಷದಿಂದ ದೇಶ ಹತ್ತಿ ಉರಿಯದಂತೆ ತಡೆಯಬೇಕು ಎಂದು ಸರ್ಕಾರಕ್ಕೆ ಕೋರಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications