ಕಾಂಗ್ರೆಸ್: 4 ಪಕ್ಷೇತರರಿಗೆ ಅಭಯ ಹಸ್ತ; ಟಿಕೆಟಿಗೂ ಅಸ್ತು

High Command green signals 4 Independent MLAs joining Congress,
ನವದೆಹಲಿ, ಮಾ.14: ನಾಲ್ವರು ಪಕ್ಷೇತರ ಶಾಸಕರನ್ನು ತನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಜತೆಗೆ, ಅವರಿಗೆಲ್ಲ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲು ಸಹ ಹೈಕಮಾಂಡ್ ಅಸ್ತು ಅಂದಿದೆ.

ಜತೆಗೆ, ಸಿಪಿ ಯೋಗೀಶ್ವರ್ ಅವರಿಗೂ ಅಭಯ ಹಸ್ತ ದೊರೆತಿದ್ದು, ಚುನಾವಣೆ ಟಿಕೆಟ್ ಲಭಿಸಿದೆ. ಆದರೆ ಆಸ್ನೋಟಿಕರ್ ಮತ್ತು ರಾಜೂಗೌಡ ಅವರ ಸ್ಥಿತಿ ಅತಂತ್ರವಾಗಿದೆ.

ಇದೇ ವೇಳೆ, ಹಿರಿಯ ಪೊಲೀಸ್ ಅಧಿಕಾರಿ ಶಂಕರ ಬಿದರಿ ಅವರು ತೇರದಾಳ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸುವುದಕ್ಕೂ ಹೈಕಮಾಂಡ್ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ

ಮೂರು ದಿನದಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರು ಈ ಸಂಬಂಧ ಇಂದು ಪಕ್ಷದ ಹೈಕಮಾಂಡ್ ಜತೆ ಅಂತಿಮ ಸುತ್ತಿನ ಮಾತುಕತೆ ನಡೆಸಿ, ಪಕ್ಷೇತರರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ನಾಲ್ವರು ಪಕ್ಷೇತರರು ಯಾರು?
ನಿರೀಕ್ಷೆಯಂತೆ, ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಪಕ್ಷೇತರ ಶಾಸಕ ಶಿವರಾಜ್ ತಂಗಡಗಿ, ನರೇಂದ್ರಸ್ವಾಮಿ, ವೆಂಕಟರಮಣಪ್ಪ ಮತ್ತು ಡಿ ಸುಧಾಕರ್ ಇನ್ನು ಕಾಂಗ್ರೆಸ್ ಜತೆ ಗುರಿತಿಸಿಕೊಳ್ಳಲಿದ್ದಾರೆ.

ಈ ಮಧ್ಯೆ, ಒಂದೇ ಸಮನೆ ಕಾಂಗ್ರೆಸ್ ಬಾಗಿಲು ಬಡಿಯುತ್ತಿರುವ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕೆಲ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಬಗ್ಗೆ ಸಹ ಇನ್ನೂ ಹೈಕಮಾಂಡ್ ನಿರ್ಧರಿಸಿಲ್ಲ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+