ಬೆಂಗಳೂರು: ಕೆನ್ನೆಗೆ ಬಾರಿಸಿ ಪತ್ನಿಯ ಸಾಯಿಸಿದ ಅಜ್ಞಾನಿ

Bangalore scientist Dharmesh Kumar slaps wife and she dies
ಬೆಂಗಳೂರು, ಮಾರ್ಚ್ 12: ವಿಜ್ಞಾನಿಯೊಬ್ಬ ತನ್ನ ಪತ್ನಿಯ ಕೆನ್ನೆಗೆ ಬಾರಿಸಿ, ಹತ್ಯೆಗೈದ ಘಟನೆ ಎಚ್‌ಎಸ್‌ಎರ್ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಮುಂಬೈನ ಮಹಾಲಕ್ಷ್ಮೀ (37) ಕೊಲೆಯಾದ ಮಹಿಳೆ.

ಈಕೆಯ ಪತಿ 38 ವರ್ಷದ ಧರ್ಮೇಶ್ ಕುಮಾರ್ ಆರೋಪಿ. ಈತ ಶೆಲ್ ಗ್ಲೋಬಲ್ ಸಲ್ಯೂಷನ್ಸ್ ಕಂಪನಿಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಮಹಾಲಕ್ಷ್ಮೀ ಖಾಸಗಿ ಶಾಲೆಯೊಂದರಲ್ಲಿ ಮಾಂಟೊಸ್ಸೆರಿ ಶಿಕ್ಷಕಿಯಾಗಿದ್ದರು.

2005ರಲ್ಲಿ ಪ್ರೀತಿಸಿ ವಿವಾಹವಾಗಿದ್ದ ದಂಪತಿಗೆ ನಾಲ್ಕು ವರ್ಷದ ಗಂಡು ಮಗುವಿದೆ. ಕೆಲ ವರ್ಷಗಳ ಕಾಲ ವಿದೇಶಗಳಲ್ಲಿದ್ದ ದಂಪತಿ 2008ರಲ್ಲಿ ಬೆಂಗಳೂರಿಗೆ ಬಂದು ವಾಸವಾಗಿದ್ದರು.

ಏನಾಯಿತೆಂದರೆ ಸರ್ಜಾಪುರ ರಸ್ತೆಯ ಇಬ್ಬಲೂರು ಜಂಕ್ಷನ್ ಬಳಿಯ 'ಮಂತ್ರಿ ಸರೋವರ್ ಅಪಾರ್ಟ್‌ಮೆಂಟಿನಲ್ಲಿ' ವಾಸವಿದ್ದ ದಂಪತಿಯ ನಡುವೆ ಭಾನುವಾರ ರಾತ್ರಿ 10.30ರ ಸುಮಾರಿಗೆ ಜಗಳ ನಡೆದಿದೆ. ಈ ವೇಳೆ ಧರ್ಮೇಶ್ ಪತ್ನಿ ಕೆನ್ನೆಗೆ ಬಲವಾಗಿ ಹೊಡೆದ ಪರಿಣಾಮ ಸೋಫಾ ಮೇಲೆ ಕುಸಿದು ಬಿದ್ದಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ಪತ್ನಿಯನ್ನು ಧರ್ಮೇಶ್ ಸಮೀಪದ ಗ್ರೀನ್ ವ್ಯೂ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಬಳಿಕ ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆಗೆ ತೆರಳುವ ವೇಳೆಗೆ ಮಹಾಲಕ್ಷ್ಮೀ ಮೃತಪಟ್ಟಿದ್ದರು. ಘಟನೆಯ ವೇಳೆ ಧರ್ಮೇಶ್ ತಾಯಿ ಕೊಠಡಿಯಲ್ಲಿ ಮಲಗಿದ್ದರು ಎನ್ನಲಾಗಿದೆ.

ಭಾನುವಾರ ರಾತ್ರಿ ಧರ್ಮೇಶ್ ಮೊಬೈಲಿಗೆ ಕರೆ ಮಾಡಿದ ಅವರ ಸೋದರಿ ಕರೆ ಮಾಡಿ, ತಾನು ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿಸಿದ್ದರು. ನಾದಿನಿ ಮನೆಗೆ ಬರುವುದಕ್ಕೆ ಮಹಾಲಕ್ಷ್ಮೀ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಆಗ ದಂಪತಿ ಮಧ್ಯೆ ನಡೆದ ಜಗಳವೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಎಚ್‌ಎಸ್‌ಆರ್ ಬಡಾವಣೆ ಪೊಲೀಸರು ಆರೋಪಿ ಧರ್ಮೇಶ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+