ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್‌ ಫೋನುಗಳ ರೋಮಿಂಗ್‌ ಶುಲ್ಕ ರದ್ದು

By Mahesh
|
Google Oneindia Kannada News

Mobile roaming: Sibal promises free roaming by October
ನವದೆಹಲಿ, ಮಾ.8: ಮುಂದಿನ ಅಕ್ಟೋಬರ್‌ ತಿಂಗಳೊಳಗೆ ಮೊಬೈಲ್‌ ಫೋನುಗಳ ರೋಮಿಂಗ್‌ ಶುಲ್ಕವನ್ನು ರದ್ದುಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೂರಸಂಪರ್ಕ ಸಚಿವ ಕಪಿಲ್‌ ಸಿಬಲ್‌ ಹೇಳಿದ್ದಾರೆ.

ಉಚಿತ ರೋಮಿಂಗ್‌ ನೀಡುವ ಕುರಿತು ಚರ್ಚಾಪತ್ರವೊಂದನ್ನು ಟ್ರಾಯ್ ಪ್ರಾರಂಭಿಸಿದೆ. ಟ್ರಾಯ್ ಶಿಫಾರಸುಗಳು ಬಂದ ಬಳಿಕ ಅಕ್ಟೋಬರ್‌ಗಿಂತ ಮುಂಚಿತವಾಗಿ ಉಚಿತ ರೋಮಿಂಗ್‌ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತೇವೆ ಎಂದು ನ್ಯಾಶನಲ್‌ ಇಂಟರ್‌ನೆಟ್‌ ರಿಜಿಸ್ಟ್ರಿ ಕಾರ್ಯಕ್ರಮದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

ಕಳೆದ ಡಿಸೆಂಬರ್‌ನಲ್ಲಿ ಟ್ರಾಯ್ ಮೊಬೈಲ್‌ ಸೇವಾದಾರ ಕಂಪೆನಿಗಳು ಹಾಗೂ ಸಂಬಂಧಿಸಿ ಇತರರಿಂದ ರೋಮಿಂಗ್‌ ಶುಲ್ಕ ರದ್ದುಪಡಿಸುವ ಕುರಿತು ಮತ್ತು ರಾಷ್ಟ್ರೀಯ ರೋಮಿಂಗ್‌ ಸೇವೆಯ ಶುಲ್ಕಕ್ಕೆ ಸಂಬಂಧಿಸಿ ಸಲಹೆ ಸೂಚನೆಗಳನ್ನು ಆಹ್ವಾನಿಸಿದೆ.

ಉಚಿತ ರೋಮಿಂಗ್‌ ಸೌಲಭ್ಯ ಒದಗಿಸಿದರೆ ಇದರಿಂದಾಗುವ ನಷ್ಟವನ್ನು ಭರ್ತಿ ಮಾಡಿಕೊಳ್ಳುವ ಮಾರ್ಗೋಪಾಯ, ರೋಮಿಂಗ್‌ನಲ್ಲಿರುವಾಗ ವಿಡಿಯೊ ಕರೆಗಳ ಮತ್ತು ಎಸ್‌ಎಂಎಸ್‌ಗಳ ಶುಲ್ಕ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ಸಲಹೆ ಮತ್ತು ಸೂಚನೆಗಳನ್ನು ನೀಡಲು ಟ್ರಾಯ್ ಸೂಚಿಸಿದೆ. ಪ್ರಸ್ತುತ ರೋಮಿಂಗ್‌ ಕರೆಗಳಿಗಾಗಿ ಸೇವಾದಾರ ಕಂಪೆನಿಗಳು ಟರ್ಮಿನೇಶನ್‌ ಚಾರ್ಜ್‌, ಇಂಟರ್‌ಕನೆಕ್ಟ್ ಚಾರ್ಜ್‌ ಮತ್ತಿತರ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

ರೋಮಿಂಗ್ ಉಚಿತ :
ದೇಶದ ಯಾವುದೇ ಭಾಗದಲ್ಲಿ ಸೇವಾ ಸಂಸ್ಥೆ ಬದಲಿಸಿದರೂ, ಮೊಬೈಲ್ ಸಂಖ್ಯೆ ಬದಲಿಸುವ ಅಗತ್ಯ ಇರದ (ಎಂಎನ್‌ಪಿ) ಸೌಲಭ್ಯ ಒದಗಿಸಲು ಕೇಂದ್ರದ ಯುಪಿಎ ಸರ್ಕಾರ ಉದ್ದೇಶಿಸಿದೆ. ದೇಶವ್ಯಾಪಿ 'ಎಂಎನ್‌ಪಿ' ಸೌಲಭ್ಯ,'ಒಂದು ದೇಶ- ಒಂದು ಲೈಸೆನ್ಸ್', 'ಒಂದು ದೇಶ ಉಚಿತ ರೋಮಿಂಗ್' ಸೌಲಭ್ಯ ಜಾರಿಗೆ ತರಲಾಗುವುದು ಇದರಿಂದ ಎಸ್ ಟಿಡಿ ಕರೆಗಳ ಅಂತರ ಕಡಿಮೆಯಾಗಲಿದೆ. ಈ ನೀತಿ ಅಳವಡಿಕೆಗೆ ಕೆಲ ಕಾಲ ಬೇಕಾಗುತ್ತದೆ ಎಂದು ಸಚಿವ ಕಪಿಲ್ ಹೇಳಿದ್ದಾರೆ.

ಬ್ರಾಡ್‌ಬ್ಯಾಂಡ್ ಸೇವೆಗೆ ಬದ್ಧ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲ ನಾಗರಿಕರು ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ಬೇಡಿಕೆ ಆಧಾರದ ಮೇಲೆ ಪಡೆಯಬಹುದು. ಕನಿಷ್ಠ 2 Mbps ಡೌನ್ ಲೋಡ್ ಸ್ಪೀಡ್ ಇರುವ ಇಂಟರ್ನೆಟ್ ಜಾಲ ದೇಶದ ಮೂಲೆ ಮೂಲೆಗೂ ಹಬ್ಬಲಿದೆ. ಈ ನೀತಿ ಎಲ್ಲೆಡೆ ತಕ್ಷಣಕ್ಕೆ ಜಾರಿಗೆ ಬರಲಿದೆ. ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಇದೆ ಎಂದರೆ 2mbps ಸ್ಪೀಡ್ ಇರಲೇಬೇಕು. [ ಹೊಸ ದೂರಸಂಪರ್ಕ ನೀತಿಯ ಮುಖ್ಯಾಂಶಗಳು ಇಲ್ಲಿದೆ]

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Telecom Minister Kapil Sibal on Thursday said the government will try to start national free roaming for customers before October. TRAI (Telecom Regulatory Authority of India) has floated a consultation paper on it (national free roaming).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X