ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮೆ: KV ವಿದ್ಯಾರ್ಥಿಗಳು ನಿಜಕ್ಕೂ ಭಾಗ್ಯವಂತರು!

By Srinath
|
Google Oneindia Kannada News

All India Kendriya Vidyalaya students to get life insurance
ಬೆಂಗಳೂರು, ಮಾ.8: ನಿಮ್ಮ ಮಕ್ಕಳೂ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆಯೇ? ಹಾಗಾದರೆ ಅವರು ನಿಜಕ್ಕೂ ಭಾಗ್ಯಶಾಲಿಗಳೇ ಬಿಡಿ. ಏಕೆಂದರೆ ಇಲ್ಲಿ ಶಿಕ್ಷಣ ಅಗ್ಗವಾಗಿರುವುದರ ಜತೆಗೆ ಗುಣಮಟ್ಟದ್ದೂ ಆಗಿದೆ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದ ವಿಷಯವೇ.

ಆದರೆ, ಇದರ ಜತೆಗೆ ಈಗ ಮತ್ತೊಂದು ಟ್ಯಾಗ್ ಸೇರಿಕೊಂಡಿದೆ. ಏನಪಾ ಅಂದರೆ, ಇಲ್ಲಿ ಓದುತ್ತಿರುವ ಎಲ್ಲ ಮಕ್ಕಳಿಗೆ ಇನ್ಮುಂದೆ ವಿಮೆ ಸೌಲಭ್ಯ ಕಲ್ಪಿಸಲಾಗುವುದು. ಇದರಲ್ಲಿ ಅಪಘಾತ ವಿಮೆಯೂ ಅಡಕವಾಗಿದೆ. ಇದು ದೇಶಾದ್ಯಂತ ಇರುವ ಎಲ್ಲ Kendriya Vidyalaya Sangathan (KVS) ಶಾಲೆಗಳಿಗೂ ಅನ್ವಯವಾಗಲಿದೆ.

ಅಂದಹಾಗೆ ದೇಶದಲ್ಲಿ ಒಟ್ಟು 1,086 KV ಶಾಲೆಗಳು ಇವೆ. 11 ಲಕ್ಷ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅಷ್ಟೂ ಮಕ್ಕಳಿಗೆ ವಾರ್ಷಿಕ 4 ಕೋಟಿ ಪ್ರೀಮಿಯಂ ತುಂಬಿ KVS ಆಡಳಿತ ಮಂಡಳಿಯೇ (ಅಂದರೆ ಕೇಂದ್ರ ಸರಕಾರ) ಅವರನ್ನೆಲ್ಲಾ ವಿಮಾ ವ್ಯಾಪ್ತಿಗೆ ತಂದಿದೆ. ಈ ವಿಮಾ ಪಾಲಿಸಿಯು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ.

ಪ್ರತಿ ವಿದ್ಯಾರ್ಥಿಗೆ ಅಪಘಾತ ವಿಮೆ ಪರಿಹಾರ ಮಿತಿ ತಲಾ 2 ಲಕ್ಷ ರೂಪಾಯಿ ಇದ್ದರೆ ಮರಣಾ ನಂತರದ ಪರಿಹಾರ ಮೊತ್ತ 3 ಲಕ್ಷ ರೂ. ಇರುತ್ತದೆ. ಈ ವಿಮಾ ಸೌಲಭ್ಯ ಸಂಪೂರ್ಣವಾಗಿ ಉಚಿತವಲ್ಲದಿದ್ದರೂ ವಿದ್ಯಾರ್ಥಿಗಳು ತಲಾ 70-100 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಸಂಬಂಧ KVS ನಾನಾ ವಿಮಾ ಕಂಪನಿಗಳ ಜತೆ ಮಾತುಕತೆ ನಡೆಸಿದೆ.

ಇತರೆ ಸರಕಾರಿ/ಖಾಸಗಿ ಶಿಕ್ಷಣ ಸಂಸ್ಥೆಗಳೂ ಈ ವಿಮಾ ಸೌಲಭ್ಯವನ್ನು ಜಾರಿಗೆ ತರಲು ಮನಸು ಮಾಡುವುದೇ? ಹಣವೆಂದರೆ ಬಾಯ್ಬಿಡುವ, ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿರುವ ಸಂಸ್ಥೆಗಳೂ ಇದರ ಬಗ್ಗೆ ಆಲೋಚಿಸುವಂತಾಗಲಿ.

English summary
All India Kendriya Vidyalaya students to get life insurance. Kendriya Vidyalaya Sangathan (KVS) will set apart Rs 4 crore as annual premium for insurance for its 11 lakh-odd students in the 1,086 schools across the country from next accademic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X