ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪಗೆ ವಿಶ್
ವಿರೋಧ ಪಕ್ಷಗಳ ಆರೋಪ, ಹತ್ತು ಹಲವು ಹಗರಣಗಳನ್ನೆಲ್ಲ ಮೆಟ್ಟಿನಿಂತು ಸ್ವಂತ ಬಲದಿಂದ ರಾಜ್ಯದ ಜನತೆಯ ನಂಬಿಕೆಯನ್ನು ಗಳಿಸಿದ ಛಲಗಾರ ಬಿ.ಎಸ್.ಯಡಿಯೂರಪ್ಪ. ಅವರು ಫೆ.27,2013ಕ್ಕೆ 71ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಹದಿಮೂರನೇ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ವಿರೋಧಿಗಳ, ಹಿತಶತ್ರುಗಳ ನಿರೀಕ್ಷೆಗೆ ವಿರುದ್ಧವಾಗಿ ಮತ್ತು ಸಮಸ್ತ ಕನ್ನಡಿಗರ ನಿರೀಕ್ಷೆಗೂ ಮೀರಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಯಡಿಯೂರಪ್ಪ ಈಗ 'ಜನರೇ ಹೈಕಮಾಂಡ್' ಎಂಬ ಮಂತ್ರ ಜಪಿಸುತ್ತಿದ್ದಾರೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಬಳಿಕ ಬಿಜೆಪಿಯ ಮತ್ತಷ್ಟು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಕೆಜೆಪಿ ಪ್ರಣಾಳಿಕೆಯನ್ನು ಪ್ರಕಟಿಸುವುದಿಲ್ಲ.ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾವೇರಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಹಾಗಾಗಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕರ್ನಾಟಕ ಜನತಾ ಪಕ್ಷ ಎಂಬ ಪ್ರಾದೇಶಿಕ ಪಕ್ಷದ ಅಡಿಯಲ್ಲಿ ಯಡಿಯೂರಪ್ಪ ಗೆಲ್ಲುತ್ತಾರೋ ಸೋಲುತ್ತಾರೋ ಅದು ಭವಿಷ್ಯದ ಮಾತು. ಕಾಂಗ್ರೆಸ್‌ನ ಭದ್ರಕೋಟೆಯನ್ನು ಭೇದಿಸಿ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಭಾರತೀಯ ಅಧಿಪತ್ಯ ಸ್ಥಾಪಿಸಲು ಯಡಿಯೂರಪ್ಪ ಯಶಸ್ವಿಯಾಗಿದ್ದು ಸಣ್ಣ ವಿಷಯವಲ್ಲ.
ರಾಜನಂತಲ್ಲ ಒಬ್ಬ ಸೇವಕನಂತೆ ಜನತೆಯ ಸೇವೆ ಮಾಡುವುದಾಗಿ ಯಡಿಯೂರಪ್ಪ ನಮ್ರತೆಯಿಂದ ಹೇಳುತ್ತಿದ್ದ ಮಾತು ಎಷ್ಟರಮಟ್ಟಿಗೆ ನಿಜವಾಗಿದೆ ಎಂಬುದು ಜನತೆ ಚೆನ್ನಾಗಿ ಗೊತ್ತಿದೆ. ಮುಂಬರುವ ಚುನಾವಣೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಹಾಗೂ ಸ್ವತಃ ಯಡಿಯೂರಪ್ಪ ಅವರ ಇಮೇಜಿಗೆ ದೊಡ್ಡ ಸವಾಲಾಗಿದೆ.ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಬೆಳೆದು ಬಂದ ಹಾದಿಯ ಹಿನ್ನೋಟ ಇಲ್ಲಿದೆ.

ಹ್ಯಾಪಿ ಬರ್ಥಡೇ ಯಡಿಯೂರಪ್ಪ
ಯಡಿಯೂರಪ್ಪನವರ ರಾಜಕೀಯ ಜೀವನ ಹುಟ್ಟಿಕೊಂಡಿದ್ದೇ ರೈತ ಹೋರಾಟದಿಂದ. ಯಡಿಯೂರಪ್ಪ ಸವೆಸಿದ ಹಾದಿ ಹೋರಾಟದಿಂದ ಕೂಡಿದೆ. ಸತತ ನಾಲ್ಕು ದಶಕಗಳಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಮಂಡ್ಯ ಜಿಲ್ಲೆಯ ಬೂಕನಕೆರೆ ಎಂಬ ಕುಗ್ರಾಮದ ಬಡ ರೈತ ಕುಟುಂಬದಲ್ಲಿ ಜನಸಿದ ಯಡಿಯೂರಪ್ಪ ದಿಢೀರ್ ನಾಯಕರಾದವರಲ್ಲ. ಯಾವುದೇ ಗಾಡ್ ಫಾದರ್ ಇಲ್ಲದೇ ಸ್ವಂತ ಪರಿಶ್ರಮ ಮೇಲೆ ಹಂತಹಂತವಾಗಿ ಬೆಳೆದು ಬಂದ ಧೀಮಂತ ನಾಯಕ. ಹಳ್ಳಿಯಿಂದಲೇ ಹೋರಾಟ ಆರಂಭಿಸಿ ರಾಜಕೀಯ ನೆಲೆಗಟ್ಟನ್ನು ಕಂಡುಕೊಂಡವರು.

ಹ್ಯಾಪಿ ಬರ್ಥಡೇ ಯಡಿಯೂರಪ್ಪ
ಕಾರ್ಯಕರ್ತರ ಅಪನಂಬಿಕೆ, ಹಿಂದಿನಿಂದ ಚೂರಿ ಹಾಕುವ ನಾಯಕರ ಧೋರಣೆಗೆ ಬೇಸತ್ತು ಒಮ್ಮೆ ಪಕ್ಷ ತೊರೆಯಲೂ ಸಿದ್ಧರಾಗಿದ್ದರು. ಆದರೆ, ವರಿಷ್ಠರು ಅವರ ನಾಯಕತ್ವಕ್ಕೆ ಮನ್ನಣೆ ನೀಡುವುದಾಗಿ ವಾಗ್ದಾನ ನೀಡಿದ್ದರಿಂದ ಮತ್ತೆ ಪಕ್ಷದತ್ತ ಮುಖ ತಿರುಗಿಸಿದರು. ಸಂಘ ಪರಿವಾರದ ಶಿಸ್ತಿನ ಸಿಪಾಯಿಯಾದ ಇವರು, ಅಂದಿನಿಂದ ಇಂದಿನವರೆಗೂ ಪರಿವಾರದ ವಿಶ್ವಾಸವನ್ನು ಉಳಿಸಿಕೊಂಡು ಬಂದಿದ್ದರು.

ಹ್ಯಾಪಿ ಬರ್ಥಡೇ ಯಡಿಯೂರಪ್ಪ
ಪಕ್ಷ ಸಂಘಟನೆಯಲ್ಲಿ ನಿಪುಣರಾದ ಯಡಿಯೂರಪ್ಪ, ಹೋರಾಟದಲ್ಲಿ ಎತ್ತಿದ ಕೈ. ಭಾಷಣಕ್ಕೆ ನಿಂತರೆ ಗುಡುಗು ಸಿಡಿಲುಗಳ ಮೇಳೈಕೆ. ಇಂತಹ ಯಡಿಯೂರಪ್ಪ ಧೃತಿಗೆಡದೆ 80ರ ದಶಕದಲ್ಲಿ ಎರಡು ಶಾಸಕರಿದ್ದ ಪಕ್ಷವನ್ನು ಹಂತಹಂತವಾಗಿ ಬೆಳೆಸುತ್ತಾ ಇಂದು 110 ಶಾಸಕರ ಪಕ್ಷವಾಗಿ ಮಾಡಿದ್ದು ಕಡಿಮೆ ಸಾಧನೆ ಏನಲ್ಲ

ಹ್ಯಾಪಿ ಬರ್ಥಡೇ ಯಡಿಯೂರಪ್ಪ
ಬಿಜೆಪಿ ಜತೆಗೆ ಜೆಡಿಎಸ್ ಸರ್ಕಾರ ರಚಿಸಲು ಮುಂದಾಗಿದ್ದು, ಅಪವಿತ್ರ ಮೈತ್ರಿ ಯಡಿಯೂರಪ್ಪ ಜೀವನದಲ್ಲಿ ಕಪ್ಪುಚುಕ್ಕೆಯೂ ಹೌದು, ಬ್ಲೆಸಿಂಗ್ ಇನ್ ಡಿಸ್ಗೈಸ್ ಕೂಡ ಹೌದು. ಜೆಡಿಎಸ್ ಬಿಜೆಪಿಗೆ ಕೈಕೊಡದಿದ್ದರೆ ಬಿಜೆಪಿ ಪರ ಗಾಳಿ ಬೀಸುತ್ತಲೂ ಇರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಆದರೆ, ಆ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ನೀಡಿದ ಅನೇಕ ಜನಪರ ಕಾರ್ಯಕ್ರಮಗಳಿಂದ ಯಡಿಯೂರಪ್ಪ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡರು.

ಹ್ಯಾಪಿ ಬರ್ಥಡೇ ಯಡಿಯೂರಪ್ಪ
ಯಡಿಯೂರಪ್ಪ ಅಲಂಕರಿಸಿದ ಹುದ್ದೆಗಳು:
1975 : ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ, 1977ರಲ್ಲಿ ಅಧ್ಯಕ್ಷ.
1980 : ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ.
1983 : ಮಾಜಿ ಸಚಿವ ವೆಂಕಟಪ್ಪ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ
1985 : 88 ವರೆಗೆ ಬಿಜೆಪಿ ಜಿಲ್ಲಾಧ್ಯಕ್ಷ, 1988 ರಲ್ಲಿ ರಾಜ್ಯಾಧ್ಯಕ್ಷ, 1992 ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ
1994 : ವಿಧಾನಸಭೆ ಪ್ರತಿಪಕ್ಷದ ನಾಯಕ

ಹ್ಯಾಪಿ ಬರ್ಥಡೇ ಯಡಿಯೂರಪ್ಪ
1999 : ಮತ್ತೆ ರಾಜ್ಯಾಧ್ಯಕ್ಷ, 2000 ರಲ್ಲಿ ಮೇಲ್ಮನೆ ಸದಸ್ಯ
2004 : ಐದನೇ ಬಾರಿಗೆ ವಿಧಾನಸಭೆ ಪ್ರವೇಶ, ಇನ್ನೊಮ್ಮೆ ಪ್ರತಿಪಕ್ಷದ ನಾಯಕ
2006 : ಸಮ್ಮಿಶ್ರ ಸರ್ಕಾರ ರಚನೆ, ಉಪಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆಗಳ ನಿರ್ವಹಣೆ
2007 : ನವೆಂಬರ್ 12 ರಿಂದ 17ರ ವರೆಗೆ 7 ದಿನ ಮಾತ್ರ ಮುಖ್ಯಮಂತ್ರಿಯಾಗಿ ಪದವಿ ಅಲಂಕರಿಸಿದ್ದರು.

ಹ್ಯಾಪಿ ಬರ್ಥಡೇ ಯಡಿಯೂರಪ್ಪ
2008 : ಮೇ 30ರ ಶುಕ್ರವಾರ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
ನಂತರ ಸದಾನಂದ ಗೌಡರಿಗೆ ಸಿಎಂ ಪಟ್ಟ ಒಲಿದಿದ್ದು, ಬಂಡಾಯವೆದ್ದು ಜಗದೀಶ್ ಶೆಟ್ಟರ್ ರನ್ನು ಕುರ್ಚಿಯಲ್ಲಿ ಕೂರಿಸಿದ್ದು ಸಾಧನೆಗಿಂತ ವೈಫಲ್ಯ ಎನ್ನಬಹುದು, ಬಿಜೆಪಿಯಿಂದ ಹೊರ ಬಿದ್ದ ಮೇಲೆ ಕರ್ನಾಟಕ ಜನತಾ ಪಕ್ಷ ಸ್ಥಾಪನೆ, ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಘೋಷಣೆ

ಹ್ಯಾಪಿ ಬರ್ಥಡೇ ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದ ಬಡ ರೈತ ಕುಟುಂಬದ ಸಿದ್ಧಲಿಂಗಪ್ಪ ಪುಟ್ಟಮ್ಮ ದಂಪತಿಗಳಿಗೆ 1943ರಲ್ಲಿ ಜನಿಸಿದರು. ತಾಯಿ ಪುಟ್ಟಮ್ಮ ಅವರನ್ನು ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಕಳೆದುಕೊಂಡ ಯಡಿಯೂರಪ್ಪ ತಂದೆಯ ಮಮತೆಯಲ್ಲಿ ಬೆಳೆದವರು.

ಹ್ಯಾಪಿ ಬರ್ಥಡೇ ಯಡಿಯೂರಪ್ಪ
ಬಿ.ಎ. ಪದವಿಯನ್ನು ಮಂಡ್ಯದಲ್ಲಿ ಪೂರೈಸಿದರು. ಕೆಲಸ ಅರಸಿ ಶಿಕಾರಿಪುರಕ್ಕೆ ಬಂದು ವೀರಭದ್ರ ಶಾಸ್ತ್ರೀ ಅವರ ರೈಸ್ ಮಿಲ್ ನಲ್ಲಿ ಗುಮಾಸ್ತನ ಕೆಲಸಕ್ಕೆ ಸೇರಿಕೊಂಡರು. ಕೊನೆಗೆ ಶಾಸ್ತ್ರೀ ಅವರ ಪುತ್ರಿ ಮೈತ್ರಾದೇವಿ ಅವರನ್ನು ವರಿಸಿ ಮಾವನ ಮನೆಯಲ್ಲಿ ನೆಲೆಸಿದರು.
ಯಡಿಯೂರಪ್ಪ ಅವರಿಗೆ ಇಬ್ಬರು ಪುತ್ರರು(ರಾಘವೇಂದ್ರ, ವಿಜಯೇಂದ್ರ), ಹಾಗೂ ಮೂವರು ಪುತ್ರಿಯರು (ಅರುಣಾದೇವಿ, ಪದ್ಮಾವತಿ ಮತ್ತು ಉಮಾದೇವಿ). 2004ರಲ್ಲಿ ಪತ್ನಿ ಮೈತ್ರಾದೇವಿಯವರು ಆಕಸ್ಮಿಕವಾಗಿ ನೀರಿನ ತೊಟ್ಟಿಯಲ್ಲಿ ಬಿದ್ದು ತೀರಿಕೊಂಡರು. ಬಿಜೆ ಪುಟ್ಟಸ್ವಾಮಿ, ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ಭಾರತಿ ಶೆಟ್ಟಿ, ಬಸವರಾಜ್ ಬೊಮ್ಮಾಯಿ ಅತ್ಯಾಪ್ತರು.

ಹ್ಯಾಪಿ ಬರ್ಥಡೇ ಯಡಿಯೂರಪ್ಪ
ಗೋಲಿಬಾರ್ ನಲ್ಲಿ ರೈತನೊಬ್ಬ ಮೃತಪಟ್ಟ ಹಾವೇರಿಯಲ್ಲೇ ಉದಯವಾದ ಹೊಸ ಪ್ರಾದೇಶಿಕ ಪಕ್ಷದ ಚುಕ್ಕಾಣಿ ಹಿಡಿದಿರುವ ಯಡಿಯೂರಪ್ಪ ಅವರ ಸುತ್ತ ಇನ್ನೂ ಅನೇಕ ಹಗರಣಗಳ ಬಲೆ ಇದ್ದೇ ಇದೆ. ಡಿ ನೋಟಿಫಿಕೇಷನ್, ಸ್ವಜನಪಕ್ಷಪಾತ, ಭೂ ಹಗರಣಗಳ ಜೊತೆ ಯಡಿಯೂರಪ್ಪ ಅವರ ಸಿಡುಕು ಕಂಡರೆ ಜನ ಮುಖ ಬೇರೆಡೆ ತಿರುಗಿಸುತ್ತಾರೆ. ಕೆಜೆಪಿ ಅಳಿವು ಉಳಿವಿನೊಂದಿಗೆ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.












Click it and Unblock the Notifications