'ದೇವರ ದುಡ್ಡು' ಭಾಜಪದ ಸದ್ಯದ ಟ್ರಂಪ್ ಕಾರ್ಡ್

2008ರಿಂದ ಇಲ್ಲಿವರೆಗೂ ಬಿಜೆಪಿ ಸರ್ಕಾರ ತನ್ನ ಅಧಿಕಾರ ಅವಧಿಯಲ್ಲಿ ಯಾವ ಯಾವ ಕ್ಷೇತ್ರಗಳಿಗೆ, ಜಿಲ್ಲೆ, ತಾಲೂಕುಗಳಿಗೆ ಆದ್ಯತೆ ನೀಡಿದೆ. ಮಠ ಮಾನ್ಯಗಳಿಗೆ ನೀಡಿದ ಅನುದಾನ ಎಷ್ಟಾಗಿದೆ ಎಂಬ ಲೆಕ್ಕಾಚಾರದಲ್ಲಿ ಕರ್ನಾಟಕ ಬಿಜೆಪಿ ತೊಡಗಿದೆ. ಕಳೆದ ನಾಲ್ಕು ವರ್ಷಗಳಿಂದ ಮಠಗಳಿಗೆ ನೀಡಿರುವ 'ದೇವರ ದುಡ್ಡು' ಕನಿಷ್ಠವೆಂದರೂ 500 ಕೋಟಿ ರು ದಾಟುತ್ತಿದೆ. ಇದನ್ನು ಟ್ರಂಪ್ ಕಾರ್ಡ್ ಆಗಿ ಬಳಸಲು ಬಿಜೆಪಿ ರಣತಂತ್ರ ರೂಪಿಸಿದೆ.

ಇತ್ತೀಚೆಗೆ ಜಗದೀಶ್ ಶೆಟ್ಟರ್ ಮಂಡಿಸಿದ ಬಜೆಟ್ ಈ ಹಿಂದೆ ಸದಾನಂದ ಗೌಡರು ಹಾಗೂ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ಟಿಗಿಂತ ಭಿನ್ನವಾಗಿರಲಿಲ್ಲ. ಮಠ ಮಾನ್ಯಗಳಿಗೆ, ಧಾರ್ಮಿಕ ಮಂದಿರಗಳಿಗೆ ಯಥೇಚ್ಛವಾಗಿ ಅನುದಾನ ನೀಡಲಾಗಿತ್ತು. ಬಜೆಟ್ ಮಂಡನೆ ನಂತರವೂ ನೂರೈವತ್ತು ಕೋಟಿ ಎತ್ತಿ ಕೊಟ್ಟಿದ್ದರು.

ಮಣ್ಣಿನ ಮಕ್ಕಳಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿದ ಅಂದಿನ ಸಿಎಂ ಯಡಿಯೂರಪ್ಪ ರೈತರೇ ನಾಡಿನ ಬೆನ್ನಲುಬು ಎಂದರೂ ನೀಡಿದ್ದೆಲ್ಲ ಮಠಗಳಿಗೆ ಹೋಗುತ್ತಿತ್ತು. ಸಾಲದ್ದಕ್ಕೆ ಪರರಾಜ್ಯದ ದೇಗುಲಗಳಿಗೂ ಎತ್ತಿ ಎತ್ತಿ ಕೊಟ್ಟರು. ಹೀಗೆ ಎತ್ತಿ ಎತ್ತಿ ಕೊಟ್ಟ ಉದಾಹರಣೆಗಳನ್ನು ಹೆಕ್ಕಿ ಇಲ್ಲಿ ಹಾಕಲು ಕಾರಣವೂ ಇದೆ.

ಸ್ಥಳೀಯ ಸಂಸ್ಥೆ ಚುನಾವಣೆ ಮುಂದಿಟ್ಟುಕೊಂಡು ನೀತಿ ಸಂಹಿತೆ ಜಾರಿ ಇರುವಾಗಲೇ ಮಠ ಮಾನ್ಯಗಳಿಗೆ ಭೂಮಿ ನೀಡಿಕೆ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ. ಇದು ಮುಂಬರುವ ವಿಧಾನಸಭೆಗೂ ಅಡ್ಡಿಯಾಗುವ ಲಕ್ಷಣಗಳಿದೆ. ಆದರೂ, ಬಿಜೆಪಿ ಮಾತ್ರ ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಶರಣಾಗಿದೆ.

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಬಜೆಟ್ ಮಿತಿ 1 ಲಕ್ಷ ಕೋಟಿ ರು ದಾಟಿಸಿದ ಸಾಧನೆ ಜೊತೆಗೆ ಕೃಷಿ ಬಜೆಟ್ ಬಿಜೆಪಿಯ ಮುಖ್ಯ ಸಾಧಕವಾಗಿತ್ತು. ಜೊತೆಗೆ ವಾಜಪೇಯಿ ಆರೋಗ್ಯ ಶ್ರೀ, ಭಾಗ್ಯಲಕ್ಷ್ಮಿ ಯೋಜನೆ, ಯಡಿಯೂರಪ್ಪ ಅವರ ಸೈಕಲ್ ಯೋಜನೆ, ಸಂಧ್ಯಾ ಸುರಕ್ಷಾ, ವೃದ್ಧರು ಅಬಲೆಯರಿಗೆ ಮಾಸಿಕ ಪಿಂಚಣಿ ಎಲ್ಲವೂ ಬಿಜೆಪಿಗೆ ಜನರ ಮುಂದೆ ಮುಖ ತೋರಿಸಲಿಕ್ಕೆ ಸಾಕಾಗಿತ್ತು.

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಆದರೆ, ಅನೇಕ ಯಶಸ್ವಿ ಯೋಜನೆಗಳು ಶ್ರೀಮಾನ್ ಯಡಿಯೂರಪ್ಪ ಅವರ ಕಾಲದಲ್ಲಿ ಅನುಷ್ಠಾನಗೊಂಡಿದ್ದರಿಂದ ಬಿಜೆಪಿ ಕರ್ನಾಟಕ ಈಗ ಇಬ್ಬಂದಿಗೆ ಬಿದ್ದಿದೆ. ಚುನಾವಣೆ ಪ್ರಚಾರದ ವೇಳೆ ಯಡಿಯೂರಪ್ಪ ಅವರ ಹೆಸರು ಹೇಳುವಂತಿಲ್ಲ. ಯೋಜನೆ ಹೆಸರು ಹೇಳಿದರೆ ಜನಕ್ಕೆ ಯಡಿಯೂರಪ್ಪ ಅವರ ಹೆಸರು ನೆನಪಾಗುವಂತಾಗಿರುವುದು ಬಿಜೆಪಿ ಕೊಂಚ ಹಿನ್ನಡೆಯಾಗಿದೆ. ಜನರಿಗೆ ಸದಾನಂದ ಗೌಡರ ಸೌಮ್ಯ ಸ್ವಭಾವಕ್ಕೆ ಎಲ್ಲೆಡೆ ಮಾರ್ಕ್ಸ್ ಸಿಕ್ಕರೂ, ಶೆಟ್ಟರ್ ಮೌನ ಪ್ರಧಾನಿ ಎಂಎಂ ಸಿಂಗ್ ನೆನಪಿಸುತ್ತಿದೆ.

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಹೀಗಾಗಿ ಮಠ ಮಾನ್ಯಗಳಿಗೆ ನೀಡಿದ ದೇಣಿಗೆಯನ್ನು ಮತಗಳಾಗಿ ಪರಿವರ್ತಿಸುವಂತೆ ಮಠಾಧೀಶರಿಗೆ ಬಿಜೆಪಿ + ಆರೆಸ್ಸೆಸ್ ಮನವಿ ಸಲ್ಲಿಸಿದೆ. ಇದು ಎಂದಿನ ಕ್ರಮವಾದರೂ ಈ ಬಾರಿ ಬಿಜೆಪಿಗೆ ಇದೇ ಮುಖ್ಯ ವಾಹಿನಿಯಾಗಿದೆ. ಇದಕ್ಕಾಗೆ ದೇವರು ದಿಂಡರು ಅಷ್ಟಾಗಿ ನಡೆದುಕೊಳ್ಳದ ಜಗದೀಶ್ ಶೆಟ್ಟರ್ ಅವರು ಕೂಡಾ ಮೊನ್ನೆ ಮುಕ್ತಾಯವಾದ ಟಿ. ನರಸೀಪುರದ ಕುಂಭಮೇಳ ಸೇರಿದಂತೆ ಮಠ ಮಾನ್ಯಗಳಿಗೆ ಅಡ್ಡ ಬೀಳುತ್ತಿದ್ದಾರೆ. ಥೇಟ್ ಯಡಿಯೂರಪ್ಪ ಅವರ ಕಾಪಿ.

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಬಿಎಸ್ ವೈ ಕೊಟ್ಟಿದ್ದು: 1. 446 ದೇಗುಲಗಳ ವಸತಿ ವ್ಯವಸ್ಥೆ, ಮೂಲ ಸೌಕರ್ಯಕ್ಕೆ 20 ಕೋಟಿ ರು, ಮೇಲುಕೋಟೆಗೆ 10 ಕೋಟಿ, ಕೊಡಗು ಕಳಂಚೇರಿ ಮಠ,ಹಾಸನಾಂಬ ದೇಗುಲ, ಬೀದರ್ ಚನ್ನವೀರ ಆಶ್ರಮ,ಕಾಡಸಿದ್ದೇಶ್ವರ ಮಠ 1 ಕೋಟಿ ರು, ರುದ್ರಭೂಮಿ ನಿರ್ವಹಣೆಗೆ 10 ಕೋಟಿ, ಪಂಚಮಸಾಲಿ ಮಠಕ್ಕೆ 2 ಕೋಟಿ, ಗವಿಸಿದ್ದೇಶ್ವರ ಮಠಕ್ಕೆ 50 ಲಕ್ಷ ಹೊರ ರಾಜ್ಯದ ಛತ್ರಕ್ಕೆ 10 ಕೋಟಿ ಕ್ರಿಶ್ಚಿಯನ್ ಪಂಗಡ ಅಭಿವೃದ್ಧಿಗೆ 50 ಕೋಟಿ (ವಿವರ ಅಪೂರ್ಣ)

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಡಿವಿಎಸ್ : ವಿಶ್ವಕರ್ಮ ಸಮುದಾಯ ಟ್ರಸ್ಟ್ ,ಬಲಿಜ ಸಮುದಾಯ, ಗುಲ್ಬರ್ಗಾ ವಿವಿ ಹಡಪದ ಅಧ್ಯಯನ ಪೀಠ, ಹೊಸದುರ್ಗದ ಉಪ್ಪಾರ ಜನಾಂಗ, ವಿಶ್ವಗಾಣಿಗರ ಕೇಂದ್ರ,ಕನಕ ಸ್ಮಾರಕ ಭವನ, ಹೇಮಾ ವೇಮಾ ಸದ್ಭಾವನಾ ಪೀಠ ಹಿರೇ ಹೊಸಹಳ್ಳಿ ಭವನ, ಕೊರಟಗೆರೆ ಅನ್ನಪೂರ್ಣೇಶ್ವರಿ ಟ್ರಸ್ಟ್ ದೇಗುಲ, ಶಂಕರಾಚಾರ್ಯ ಮಹಾಸಂಸ್ಥಾನ,ಅಂಬಿಗರ ಚೌಡಯ್ಯ ಭವನ, ಮೈಸೂರು ಸಂದೇಶ ಭವನ, ಜೇವರ್ಗಿ ಮರುಳ ಶಂಕರ ಪೀಠ, ನೆಲಮಂಗಲದ ಮಹಾಲಕ್ಷ್ಮಿ ಟ್ರಸ್ಟ್, ತಿಗಳ ಸಮಾಜ, ತೊಗಟವೀರ ಕ್ಷತ್ರಿಯ ಸಂಘಟನೆ, ರಾಜ್ಯ ಮಡಿವಾಳ ಸಮಾಜ, ತಿಪಟೂರು ತಾಲ್ಲೂಕಿನ ಕಾಡಸಿದ್ಧೇಶ್ವರ ಶ್ರೀ ಮಠಕ್ಕೆ ತಲಾ 1 ಕೋಟಿ ರು (ವಿವರ ಅಪೂರ್ಣ)

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಶೆಟ್ಟರ್: ಅಂದಾಜು ಒಟ್ಟು 135 ಕೋಟಿ, ಲಿಂಗಾಯತ ಮಠಗಳಿಗೆ ಭಾರೀ ಅನುದಾನ, ಉತ್ತರ ಕರ್ನಾಟಕದ ಮೇಲೆ ಕಣ್ಣು, ದಾವಣಗೆರೆ ವಿರಕ್ತ ಮಠ ಜೀರ್ಣೋದ್ಧಾರಕ್ಕೆ 5 ಕೋಟಿ * ಮುಳಗುಂದದ ಶಿವಯೋಗಿ ಮಠಕ್ಕೆ 2 ಕೋಟಿ * ಹಿರೇಕೆರೂರಿನ ಸರ್ವಜ್ಞ ಪೀಠಕ್ಕೆ 1 ಕೋಟಿ * ಮಡಿವಾಳ ಮಾಚಯ್ಯ ಜನ್ಮಸ್ಥಳ ಅಭಿವೃದ್ಧಿಗೆ, ಸುತ್ತೂರಿನ ವಿಜ್ಞಾನ ಕೇಂದ್ರಕ್ಕೆ 5 ಕೋಟಿ..ಇತ್ಯಾದಿ

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಸದ್ಯಕ್ಕೆ ಬಿಜೆಪಿಯ ಟ್ರಂಪ್ ಕಾರ್ಡ್ ಮಠಕ್ಕೆ ನೀಡಿದ ಹಣ ಮತಗಳಲ್ಲಿ ಪರಿವರ್ತನೆ ಮುಳುವಾಗಿದೆ. ರೈತರಿಗೆ ಭೂಮಿ ನೀಡದೆ ಮಠಗಳಿಗೆ ಭೂಮಿ ನೀಡಲು ನಾಚಿಕೆಯಾಗುವುದಿಲ್ಲವೇ ಎಂದು ಸರ್ಕಾರವನ್ನು ಹೈಕೋರ್ಟ್ ನ್ಯಾ ರಾಮಮೋಹನ್ ರೆಡ್ಡಿ ಪ್ರಶ್ನಿಸಿದ್ದಾರೆ.. ಮೈಸೂರಿನ ರೈತರು ಹಾಕಿದ ಪಿಟೀಷನ್ ಬಿಜೆಪಿ ಚುನಾವಣಾ ತಂತ್ರವನ್ನೇ ಅಲುಗಾಡಿಸುವಂತಿದೆ.

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಬಿಜೆಪಿ ಶರಣು

ಮಠಗಳಿಗೆ ನೀಡಿರುವ 500 ಕೋಟಿ ರು ಸಾರ್ವಜನಿಕರ ತೆರಿಗೆ ದುಡ್ಡು, ಸರ್ಕಾರ ತನ್ನ ಜೇಬಿನಿಂದ ನೀಡಿಲ್ಲ ಎಂದು ನ್ಯಾ. ರೆಡ್ಡಿ ಗುಡುಗಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕೊಟ್ಟು ತಲೆ ಮೇಲೆ ಕೈಹೊತ್ತು ಕೂತ ಮೈಸೂರಿನ ಅನ್ನದಾತ ಸೇರಿದಂತೆ ರಾಜ್ಯದ ರೈತರೇ ಬಿಜೆಪಿ ಭವಿಷ್ಯ ಬರೆಯಬಲ್ಲರು. ಮಂತ್ರದಿಂದ ಮತಗಳಿಸಲು ಹೊರಟ ಬಿಜೆಪಿಯನ್ನು ತಿಮ್ಮಪ್ಪನೇ ಕಾಪಾಡಬೇಕು. ಸ್ಸಾರಿ.. ತಿಮ್ಮಪ್ಪ ಆಂಧ್ರದ ಪೇಟೆಂಟ್.. ಮಂತ್ರಾಲಯದ ರಾಯರೋ, ಧರ್ಮಸ್ಥಳದ ಮಂಜುನಾಥನೇ ದಿಕ್ಕು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+