ಕೊಡಗು ಕೆಎಸ್ಆರ್ ಟಿಸಿ ಬಸ್‌ನಲ್ಲಿ ಸ್ಫೋಟಕ ಪತ್ತೆ
ಕೊಡಗು,
ಫೆ.27: ಹೈದರಾಬಾದ್ ಬಾಂಬ್ ಸ್ಫೋಟದ ತನಿಖೆ ನಡೆಯುತ್ತಿರುವಾಗಲೇ ಕೊಡಗು ಜಿಲ್ಲೆ ಸೋಮವಾರ ಪೇಟೆಯಲ್ಲಿ ಸರ್ಕಾರಿ ಬಸ್ ನಲ್ಲಿ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿವೆ. ಕೂಡಲೇ ಎಚ್ಚೆತ್ತುಕೊಂಡ ಬಸ್ ಚಾಲಕ ಮತ್ತು ನಿರ್ವಾಹಕ ಸ್ಫೋಟಕವನ್ನು ಹೊರಗೆಸೆದಿದ್ದು, ಉಂಟಾಗಬಹುದಾಗಿದ್ದ ಭಾರೀ ಅನಾಹುತವನ್ನು ತಡೆದಿದ್ದಾರೆ. id="toptextpromo">ಹರಿಹರದಿಂದ
ಮಡಿಕೇರಿಗೆ ತೆರಳುತ್ತಿದ್ದ ಬಸ್ ನಲ್ಲಿ ಪಟ್ರೋಲ್ ಬಾಂಬ್ ಮಾದರಿಯ ಎರಡು ಸ್ಪೋಟಕಗಳು ಪತ್ತೆಯಾಗಿವೆ. ಬಸ್ ನಲ್ಲಿ ಪೆಟ್ರೋಲ್ ವಾಸನೆ ಹರಡಿದ್ದರಿಂದ ಅನುಮಾನಗೊಂಡ ನಿರ್ವಾಹಕ ತಪಾಸಣೆ ನಡೆಸಿದಾಗ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟಕ ಇರುವುದು ತಿಳಿದು ಬಂದಿತು. id='are-slot-1' class='oiad oi-axt oiadv'> id='top-searched-articles'>ತಕ್ಷಣ
ಜಾಗೃತನಾದ ಅವರು ಎರಡು ಸ್ಫೋಟಕಗಳನ್ನು ಬಸ್ ನಿಂದ ಹೊರಗೆ ಎಸೆದಿದ್ದಾರೆ. ಸೋಮವಾರ ಪೇಟೆ ಬಸ್ ನಿಲ್ದಾಣದ ಹಿಂಭಾಗದಲ್ಲೇ ಪೊಲೀಸ್ ಠಾಣೆಯಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸುತ್ತಿದ್ದಾರೆ. ಬಸ್ ನಲ್ಲಿ ಪ್ರಯಾಣಿಕರಂತೆ ಬಂದ ದುಷ್ಕರ್ಮಿಗಳು ಸ್ಫೋಟಕಗಳನ್ನು ಇಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.











Click it and Unblock the Notifications