ಉಡುಪಿ ಕೃಷ್ಣ ಮಠ ಮುಜರಾಯಿ ವ್ಯಾಪ್ತಿಗೆ, ಸಿದ್ದರಾಮಯ್ಯ

ಒಂದು ವೇಳೆ ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ನಾನು ಒಂದು ವೇಳೆ ಮುಖ್ಯಮಂತ್ರಿಯಾದರೆ ನನ್ನ ಮೊದಲ ಆದ್ಯತೆ ಉಡುಪಿಯ ಕೃಷ್ಣ ಮಠವನ್ನು ಮುಜರಾಯಿ ವ್ಯಾಪ್ತಿಗೆ ತರುವುದು ಎಂದು ಉಡುಪಿಯ ಅಷ್ಠಮಠಾಧೀಶರುಗಳಿಗೆ ಕಿರಿಕಿರಿಯಾಗುವ ಸುದ್ದಿಯನ್ನು ಸಿದ್ದರಾಮಯ್ಯ ತಲುಪಿಸಿದ್ದಾರೆ.
ಈ ಹಿಂದಿನಿಂದಲೂ ಉಡುಪಿ ಕೃಷ್ಣ ಮಠವಲ್ಲ, ಅದು ಉಡುಪಿ ಕೃಷ್ಣ ದೇವಾಲಯವೆಂದು ವಾದಿಸಿಕೊಂಡು ಬರುತ್ತಿರುವ ಸಿದ್ದರಾಮಯ್ಯ ತನ್ನ ಮನದಾಳದ ಮಾತನ್ನು ಹೊರಗೆಡವಿದ್ದಾರೆ.
ಇದು ಯಾವುದೇ ಮಾಧ್ಯಮಗಳಿಗೆ ಸಿದ್ದು ನೀಡಿದ ಹೇಳಿಕೆ ಅಲ್ಲದಿದ್ದರೂ ಉಡುಪಿಯ ಯುವ ಕಾಂಗ್ರೆಸ್ ಮುಖಂಡರಲ್ಲಿ ಈ ಮಾತನ್ನು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.
ಉಡುಪಿಯ ಕೃಷ್ಣ ದೇವಾಲಯವನ್ನು ಖಾಸಗಿ ಮಠಕ್ಕೆ ಒಪ್ಪಿಸಿ ಬಿಜೆಪಿ ಸಕಾ೯ರ ಕಾನೂನುಬಾಹಿರ ಕೆಲಸ ಮಾಡಿದೆ. 1961ರ ಸುಪ್ರೀಂ ಕೋಟಿ೯ನ ತೀಪಿ೯ನಂತೆ ಕೃಷ್ಣ ಮಠವನ್ನು ಸಾವ೯ಜನಿಕ ದೇವಾಲಯ ಎಂದು ಘೋಷಿಸಲಾಗಿದೆ.
ಸಾವ೯ಜನಿಕ ದೇವಾಲಯ ಎಂದರೇ ಸಕಾ೯ರಕ್ಕೆ ಮುಜರಾಯಿ ಇಲಾಖೆಗೆ ಸೇರಿದ್ದು ಎಂದರ್ಥ. ಆದ್ದರಿಂದ ಕೃಷ್ಣಮಠವನ್ನು ಖಾಸಗಿ ಆಡಳಿತದಿಂದ ಬಿಡಿಸಿ ಸುಪ್ರೀಂಕೋಟಿ೯ನ ತೀಮಾ೯ನದಂತೆ ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂದು ಸಿದ್ದರಾಮಯ್ಯ ಬಹಳಷ್ಟು ಬಾರಿ ಈ ಹಿಂದೆ ಆಗ್ರಹಿಸಿದ್ದರು.












Click it and Unblock the Notifications