ಮಂಗಳೂರು: ಛೇ, ಸಾವು ಹೀಗೂ ಬರುತ್ತದಾ?

ಕೊಣಾಜೆಯ ಕೈರಂಗಲಾ ಗ್ರಾಮದಲ್ಲಿ ಆನೆಗುಂಡಿ ಸಮೀಪ ಕೃಷಿಕ ಆನಂದ ಮೂಲ್ಯ ಅವರ ತೋಟದಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ. ಏನಾಯಿತೆಂದರೆ ಆನಂದ್ ತೋಟದಲ್ಲಿ ಹಳೆಯದಾದ ತೆಂಗಿನ ಮರವೊಂದಿತ್ತು. ಅದು ಪೂರ್ತಿ ಒಣಗಿಹೋಗಿತ್ತು.
ಆದರೆ ಆನಂದ್ ಆ ಮರಕ್ಕೆ ಕರಿ ಮೆಣಿಸಿನ ಬಳ್ಳಿಗಳನ್ನು ಹಬ್ಬಿಸಿದ್ದರು. ಸರಿ ನಿನ್ನೆ ಭಾನುವಾರ ಕರಿಮೆಣಸು ಕೀಳೋಣವೆಂದು ಒಣಕಲು ಮರಕ್ಕೆ ಏಣಿ ಹಾಕಿ ಹತ್ತಿದ್ದಾರೆ. ಆದರೆ ಭಾರಕ್ಕೆ ಆ ಮರ ಬಿದ್ದುಹೋಗಿದೆ. ಹಾಗೆ ಬಿದ್ದ ಮರವು ಕೆಳಗೆ ಆಟವಾಡುತ್ತಿದ್ದ ಆನಂದ್ ಅವರ ಆರು ವರ್ಷದ ಪುತ್ರ ವಿಷ್ಣುಪ್ರಸಾದ್ ಮೇಲೆ ಬಿದ್ದಿದೆ. ಮಗುವಿಗೆ ಆ ಹೊಡೆತ ತಾಳಲಾಗಿಲ್ಲ. ಅದು ತೀವ್ರವಾಗಿ ಗಾಯಗೊಂಡಿದೆ.
ತಕ್ಷಣ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆ ವೇಳೆಗಾಗಲೆ ಮಗುವಿನ ಪ್ರಾಣಪಕ್ಷಿ ಹಾರಿಹೋಗಿದೆ.












Click it and Unblock the Notifications