ಸಾಯಿಬಾಬಾ ದೇಗುಲ ಮೊದಲ ಟಾರ್ಗೆಟ್ ಆಗಿತ್ತು

Hyderabad Twin Blasts- plan was to bomb Dilsuknagar Sai Baba temple
ಹೈದರಾಬಾದ್, ಫೆ.23: ಗುರುವಾರದ ಅವಳಿ ಸ್ಫೋಟದ ಸುತ್ತಮುತ್ತ ಮತ್ತಷ್ಟು ಬೆಳಕು ಚೆಲ್ಲಲಾಗಿದೆ. ಕೆಲವೊಂದು ಆತಂಕಕಾರಿ ಮಾಹಿತಿಗಳು ಹೊರಬೀಳುತ್ತಿವೆ. ಈ ಮಧ್ಯೆ, ಸ್ಫೋಟದ ಸ್ಥಳದಲ್ಲಿ ಎಲ್ಲ ಸಿಸಿಟಿವಿಗಳೂ ಕಟ್ಟಾಗಿರಲಿಲ್ಲ. 2 ಕಾರ್ಯನಿರವಹಿಸುತ್ತಿದ್ದವು ಎಂಬ ಸಮಾಧಾನಕರ ಸುದ್ದಿ ಬಂದಿದೆ.

ಆ ಎರಡೂ ಸಿಸಿಟಿವಿಗಳು ಈಗ ನಿರ್ಣಾಯಕವಾಗಿದ್ದು, ಪಾತಕ ಕೃತ್ಯದ ಹೀನಸುಳಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಹೈದರಾಬಾದ್ ಪೊಲೀಸರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಸಿಸಿಟಿವಿಯಲ್ಲಿ ಸ್ಫೋಟದ ಕೆಲವೇ ಕ್ಷಣಗಳ ಮುನ್ನ ದಿಲ್ ಸುಖ್ ನಗರದಲ್ಲಿ ಸೈಕಲ್ ಬಾಂಬ್ ನಿಲ್ಲಿಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿವೆ.

ಈ ಮಧ್ಯೆ, ದಿಲ್ ಸುಖ್ ನಗರದಲ್ಲಿರುವ ಶಿರಡಿ ಸಾಯಿ ಬಾಬಾ ದೇಗುಲ ಮೊದಲ ಭಯೋತ್ಪಾದಕರ ಮೂಲ ಟಾರ್ಗೆಟ್ ಆಗಿತ್ತು ಎಂಬ ಆತಂಕಕಾರಿ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆದರೆ ಅಂತಿಮ ಘಳಿಗೆಯಲ್ಲಿ ಟಾರ್ಗೆಟ್ ಬದಲಾಯಿಸಲಾಗಿದೆ. 2002ರ ನವೆಂಬರಿನಲ್ಲಿ ಇದೇ ಶಿರಡಿ ಸಾಯಿ ಬಾಬಾ ದೇಗುಲದ ಬಳಿ ಚಿಕ್ಕ ಬಾಂಬ್ ದಾಳಿ ನಡೆದಿತ್ತು. ಅದರಲ್ಲಿ ಇಬ್ಬರು ಮೃತಪಟ್ಟಿದ್ದರು. 22 ಮಂದಿ ಗಾಯಗೊಂಡಿದ್ದರು.

ಆದರೆ ಇಲ್ಲೊಂದು ಅನುಮಾನ ಕಾಡುತ್ತಿದೆ. ಪೊಲೀಸರು ಈಗ ಹೇಳುತ್ತಿರುವುದು ಉಗ್ರರು ಸಿಸಿಟಿವಿಯನ್ನು ಕಟ್ ಮಾಡಿದ್ದರು ಎಂದು. ಆದರೆ ಸಾಯಿ ಬಾಬಾ ದೇವಸ್ಥಾನದಲ್ಲಿ ಬಿಗಿ ಭದ್ರತೆಯಿದೆ ಎಂದು ಅಷ್ಟೊಂದು ಕ್ಷಿಪ್ರವಾಗಿ ಉಗ್ರರು ಪಕ್ಕದ ಸ್ಥಳಕ್ಕೆ ಬಂದು, ಅಲ್ಲಿ ಸಿಸಿಟಿವಿಗಳನ್ನು ಕಟ್ ಮಾಡಿ, ಬಾಂಬಿಟ್ಟು... ಏನೋ ಇದೆಲ್ಲ ಹೇಗಾಯಿತು ಎಂಬುದು ಅರ್ಥವಾಗುತ್ತಿಲ್ಲ.

ಅದೇನೇ ಇರಲಿ... ಉಗ್ರರು ಯಾಕೆ ಹೀಗೆ ಪ್ಲಾನ್ ಬದಲಿಸಿದ್ದರು ಅಂದರೆ ನಗರದ ಪೊಲೀಸ್ ಆಯುಕ್ತ ಅನುರಾಗ್ ಶರ್ಮಾ ಅವರು ಗುರುವಾರ ಸಂಜೆ ಇದೇ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರು ದಿಢೀರನೆ ಭೇಟಿ ನೀಡಿದ ವೇಳೆ ಬಂದೋಬಸ್ತ್ ವ್ಯಾಪಕವಾಗಿತ್ತು. ಇದರಿಂದ ಉಗ್ರರು ಕಂಗಾಲಾಗಿದ್ದರು. ಹಾಗಾಗಿ ಕೊನೆಕ್ಷಣದಲ್ಲಿ ಸ್ಫೋಟದ ಸ್ಥಳವನ್ನು ಬದಲಿಸಿದ್ದರು.

ಇಲ್ಲಾಂದಿದ್ರೆ ಸದಾ ಭಕ್ತಾಧಿಗಳಿಂದ ಗಿಜಿಗುಡವ ಸಾಯಿ ಬಾಬಾ ದೇಗುಲದಲ್ಲಿ ದೊಡ್ಡ ರಕ್ತಪಾತವೇ ನಡೆದುಹೋಗುತ್ತಿತ್ತು. ಕನಿಷ್ಠ 50 ಮಂದಿ ಪ್ರಾಣ ತೆರಬೇಕಿತ್ತು. ದೇವಸ್ಥಾನದ ಬಳಿ 3 ಬಾಂಬುಗಳನ್ನು ಸ್ಫೋಟಿಸಲು ಯೋಜಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+