ಜಗನ್ ರೆಡ್ಡಿ 122 ಕೋ.ರೂ. ಆಸ್ತಿ ಇಡಿ ಪಾಲಾಯ್ತು

ಅಕ್ರಮ ಆಸ್ತಿ ಪ್ರಕರಣದಲ್ಲಿನ ಕಂಡು ಬಂದುರುವ ಅಕ್ರಮ ಹಣ ಲೇವಾದೇವಿಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಹಣ ವರ್ಗಾವಣೆ ತಡೆ ಪ್ರಾಧಿಕಾರವು (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯ ಈ ಹಿಂದೆ ಜಗನ್‌ಗೆ ಸೇರಿದ್ದ 51 ಕೋಟಿ ರೂ. ಮತ್ತು 71ಕೋಟಿ ರೂ.ಗಳ ಎರಡು ಆಸ್ತಿಯನ್ನು ಜಪ್ತಿ ಮಾಡಿಕೊಂಡಿದ್ದಕ್ಕೆ ಅನುಮೋದನೆ ನೀಡಿ ಈ ಎರಡೂ ಆಸ್ತಿಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದೆ.
ಹಣ ಲೇವಾದೇವಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಳೆದ ವರ್ಷ ಜಗನ್‌ಗೆ ಸೇರಿದ ದುಬೈ ಮೂಲದ ಎಮ್ಮಾರ್ ಪ್ರಾಪರ್ಟಿ ಮತ್ತು ಜಗತಿ ಪಬ್ಲಿಕೇಶನ್ ಸೇರಿದಂತೆ ವಿವಿಧ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳಲು ನೋಟಿಸ್ ನೀಡಿತ್ತು.
ಜಾರಿ ನಿರ್ದೇಶನಾಲಯ ಕೈಗೊಂಡಿರುವ ಈ ಕ್ರಮದಿಂದ ಜಗನ್ ಅವರು ತಮ್ಮ ಮೇಲೆ ದಾಖಲಾಗಿರುವ ಎರಡು ಪ್ರಕರಣ ಇತ್ಯರ್ಥವಾಗುವವರೆಗೂ ಈ ಆಸ್ತಿ ಮೇಲೆ ಅವರಿಗೆ ಯಾವುದೇ ಅಧಿಕಾರವಿರುವುದಿಲ್ಲ. ಆದರೆ ಜಗತಿ ಪಬ್ಲಿಕೇಶನ್ ಸಂಸ್ಥೆಯ ಅಧೀನದಲ್ಲಿರುವ ಸಾಕ್ಷಿ ಮಾಧ್ಯಮದ ದೈನಂದಿನ ವಹಿವಾಟಿಗೆ ತಡೆಯಿರುವುದಿಲ್ಲ. ಈ ಮಧ್ಯೆ, ಇದರಿಂದ ಉಂಟಾಗುವ ಯಾವುದೇ ಲಾಭ-ನಷ್ಟ ಕೇಂದ್ರ ಸರಕಾರದ ಲೆಕ್ಕಕ್ಕೆ ಸೇರುತ್ತದೆ.












Click it and Unblock the Notifications