ಬಂದ್ ತೀವ್ರತೆ ಕ್ಷೀಣ; ಎಂದಿನಂತೆ ಜನಜೀವನ

Karnataka bandh- Bharat bandh Feb 21 intensity weakens
ಕರ್ನಾಟಕ, ಫೆ.21: ನಾನಾ ಬೇಡಿಕೆಗಳನ್ನು ಮುಂದಿಟ್ಟು ಅನೇಕ ಕಾರ್ಮಿಕ ಸಂಘಟನೆಗಳು ನಿನ್ನೆ ಮತ್ತು ಇಂದು ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರದ ಕಾವು ಕಡಿಮೆಯಾಗಿದ್ದು, ಜನಜೀವನ ಎಂದಿನಂತೆ ಸಹಜವಾಗಿದೆ. ಇದರಿಂದ ಬಂದ್ ಕರೆ ನೀಡಿದ್ದವರು ಮಾತ್ರ ತಲೆ ಮೇಲೆ ಕೈಹೊತ್ತು, ಛೇ ಯಾಕೆ ಹೀಗಾಯ್ತು ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ.

ಬಂದ್/ಮುಷ್ಕರದ ಬಿಸಿ ನಿನ್ನೆ ಆರಂಭದಲ್ಲಿತ್ತಾದರೂ ಕ್ರಮೇಣ ಕಡಿಮೆಯಾಗುತ್ತಾ ಯಾರಿಗೂ ಅದರಲ್ಲಿ ಆಸಕ್ತಿಯೇ ಇಲ್ಲವೇನೋ ಎಂಬಂತಾಗಿ ಹೋಗಿದೆ. ನಿನ್ನೆಯೇ ಅನೇಕ ಮಂದಿ ಕೆಲಸಕ್ಕೂ ಮರಳಿದ್ದಾರೆ.

ರಾಜಧಾನಿಯಲ್ಲಿ ನಿನ್ನೆಯಂತೆ ಬಿಎಂಟಿಸಿ, ಕೆಎಸ್ಆರ್ ಟಿಸಿ ಸೇವೆ ಅಬಾಧಿತವಾಗಿ ಮುಂದುವರಿದಿದೆ. ಆಟೋ, ಕ್ಯಾಬ್ ಗಳು ಅಲ್ಲಲ್ಲಿ ಓಡಾಡುತ್ತಿವೆ.

ಶಾಲಾ, ಕಾಲೇಜಿಗೆ ಮಾತ್ರ ಇಂದೂ ರಜೆ ಮುಂದುವರಿದಿದೆ. ಸರಕಾರ ಮಾತ್ರ ತನ್ನ ಶಾಲಾ-ಕಾಲೇಜಿಗೆ ರಜೆಯಿಲ್ಲವೆಂದು ಘೋಷಿಸಿದೆಯಾದರೂ ಇಂದು ವಿದ್ಯಾರ್ಥಿಗಳು ಸರಕಾರಿ ಶಾಲೆಗಳತ್ತ ಹೆಜ್ಜೆ ಹಾಕುವುದು ಅನುಮಾನ. ಅದು ಬಿಟ್ಟರೆ ಬ್ಯಾಂಕ್, ಅಂಚೆ ಕಚೇರಿ, ಸರಕಾರಿ ಕಚೇರಿಗಳೂ ಉಳಿದೆಲ್ಲ ಆಡಳಿತಯಂತ್ರ ಸಹಜವಾಗಿ ಕಾರ್ಯನಿರ್ವಹಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+