ಕೆಜೆಪಿ ನಾಯಕ ಯಡಿಯೂರಪ್ಪ ಮತ್ತೆ ಬಿಜೆಪಿ ತೆಕ್ಕೆಗೆ

ಎದುರಿಗೆ ಚುನಾವಣೆಗಳನ್ನಿಟ್ಟುಕೊಂಡು ಈ ಗೊಂದಲಕಾರಿ ಹೇಳಿಕೆಯನ್ನು ಯಾತಕ್ಕಾಗಿ ನೀಡಿದ್ದಾರೋ ಸ್ವತಃ ರಾಜನಾಥರೇ ಬಿಡಿಸಿ ಹೇಳಬೇಕು. ಅದೂ ಈಗ ಎದುರಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಬಳಿಕ ಯಡಿಯೂರಪ್ಪ ಅವರ ಕೆಜೆಪಿ ಮತ್ತು ತಮ್ಮ ಅಧ್ಯಕ್ಷತೆಯಲ್ಲಿರುವ ಬಿಜೆಪಿ ಒಂದಾಗುತ್ತದೆ ಎಂಬುದು ರಾಜನಾಥರ ಒತ್ತಾಸೆ ಇರುವಂತಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂಬುದು ರಾಜನಾಥ್ ಸಿಂಗ್ ಅವರ ಅನುಭವಕ್ಕೆ ಬಂದಂತಿದ್ದು, 'ಯಡಿಯೂರಪ್ಪ ಅವರಿಗಾಗಿ ನಾವು ಕಾಯುತ್ತೇವೆ. ನಂತರವಷ್ಟೇ ಮುಂದುವರಿಯುತ್ತೇವೆ' ಎಂದು ರಾಜನಾಥ್ ಹೇಳಿರುವುದಾಗಿ ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಮಾಜಿ ಸಿಎಂ ಯಡಿಯೂರಪ್ಪ ಜತೆಗೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸುತ್ತಿರುವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸುಳಿವು ನೀಡಿದ್ದಾರಾದರೂ ರಾಜ್ಯ ಮಟ್ಟದಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ.












Click it and Unblock the Notifications