75ರ ಹರೆಯ 'ಕಾಮ'ಪೂಜಾರಿ ಬಂಧನ

ಪುಟ್ಟ ಬಾಲಕಿಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸುತ್ತಿದ್ದ ಈ ಪೂಜಾರಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಪೊಲೀಸರಿ ಕ್ರಮ ಜರುಗಿಸಿರಲಿಲ್ಲ. ಗಿಟ್ಟಿಖಾದನ್ ಪೊಲೀಸ್ ಠಾಣೆ ಮೇಲೆ ಮುಗಿ ಬಿದ್ದ ಸಾರ್ವಜನಿಕರು, ಮಹಿಳಾ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ಬೆಚ್ಚಿದ ಆರಕ್ಷಕರು ಕೊನೆಗೂ ಆರೋಪಿ ಬಾಬುಲಾಲ್ ದ್ವಿವೇದಿಯನ್ನು ಬಂಧಿಸಿದ್ದಾರೆ.
ಇತ್ತೀಚೆಗೆ 5 ಹಾಗೂ 7 ವರ್ಷದ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಅಲ್ಲದೆ ಕಳೆದ ವಾರ ಬಾಲಕಿಯನ್ನು ಲೈಂಗಿಕವಾಗಿ ಕಾಡುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಾರ್ವಜನಿಕರಿಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದಿದ್ದ. 75 ವರ್ಷದ ವ್ಯಕ್ತಿಯನ್ನು ಹೊಡೆದು ಸಾಯಿಸಲು ಮನಸ್ಸು ಬಾರದ ಕಾರಣ, ಪೊಲೀಸರಿಗೆ ಒಪ್ಪಿಸಲಾಗಿತ್ತು. ಆದರೆ, ಪೊಲೀಸರ ಕೈ ಬಿಸಿ ಮಾಡಿ ಹೇಗೊ ಹೊರ ಬಂದಿದ್ದ.
ಆದರೆ, ನಾಲ್ಕು ದಿನ ನಂತರ ಮತ್ತೊಮ್ಮೆ ಇದೇ ರೀತಿ ಕೃತ್ಯ ಎಸಗಿದ ಆರೋಪ ದ್ವಿವೇದಿ ಕೇಳಿ ಬಂದಿತ್ತು. ವಿದ್ಯಾರ್ಥಿಯೊಬ್ಬಳು ತನಗಾದ ಲೈಂಗಿಕ ಹಲ್ಲೆಯನ್ನು ತನ್ನ ಟೀಚರ್ ಗೆ ವಿವರಿಸಿದ್ದಾಳೆ. ನಂತರ ವಿದ್ಯಾರ್ಥಿಯ ಪೋಷಕರನ್ನು ಕರೆಸಿಕೊಂಡು ವಿಷಯ ತಿಳಿಸಲಾಗಿದೆ.
ನಂತರ ಸಂತ್ರಸ್ತರ ಗುಂಪು ದೇಗುಲದ ಟ್ರಸ್ಟಿಗಳಿಗೆ ದೂರು ನೀಡಿದ್ದಾರೆ. ಆದರೆ, ಟ್ರಸ್ಟ್ ನವರು ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ, ಸಾರ್ವಜನಿಕರ ಬೆಂಬಲ ಪಡೆದ ಸಂತ್ರಸ್ತರು ಗಿಟ್ಟಿಖಾದನ್ ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕಿದ್ದಾರೆ.
ಪ್ರಸಾದ ನೀಡುತ್ತೇನೆ ಬಾ ಎಂದು 7 ವರ್ಷ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ದೇಗುಲದ ಗರ್ಭಗುಡಿಗೆ ಕರೆಸಿಕೊಂಡಿದ್ದಾನೆ. ಆಕೆಗೆ ಮಂಕುಬೂದಿ ಎರೆಚಿ ಮೈಕೈ ಸವರಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ. ಇಷ್ಟೇ ಅಲ್ಲದೆ, ಅನೇಕ ಮಹಿಳೆಯರಿಗೆ ಕಾಟ ಕೊಟ್ಟಿರುವ ದ್ವಿವೇದಿ, ಪೂಜೆ ನೆಪದಲ್ಲಿ ಹಣ ಕೀಳುತ್ತಿದ್ದ ಎಂಬ ಆರೊಪವೂ ಇದೆ.
ಸ್ಥಳೀಯ ಮೇಯರ್ ಹಾಗೂ ಬಿಜೆಪಿ ಕಾರ್ಪೊರೇಟರ್ ಮಯಾತಾಯಿ ಇವ್ನಾರೆ ಅವರು ಪೊಲೀಸರು ತಕ್ಷಣದ ಕ್ರಮ ಜರುಗಿಸಬೇಕು. ರೇಪ್ ಕೇಸ್ ಹಾಕಿ ಆತನನ್ನು ಹೊರ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ, ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅತ್ಯಾಚಾರ ನಡೆಸಿದ ಕುರುಹುಗಳು ಕಂಡು ಬಂದಿಲ್ಲ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಸಿಎಂ ಬಹಾದೂರ್ ಹೇಳಿದ್ದಾರೆ. ಸದ್ಯಕ್ಕೆ ದ್ವಿವೇದಿ ಜೈಲಿನಲ್ಲಿದ್ದಾನೆ.












Click it and Unblock the Notifications