ಜಯನಗರದಲ್ಲಿ ಬೃಹತ್ ಗಡಿಯಾರ ಗೋಪುರ

Biggest clock tower '
ಬೆಂಗಳೂರು, ಫೆ.16: ರಾಜಧಾನಿಯ ಗಡಿಯಾರ ಗೋಪುರಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ನಗರದ ಯಡಿಯೂರು ವಾರ್ಡ್ ನ ಸೌತ್ ಎಂಡ್ ವೃತ್ತದಲ್ಲಿ ಸ್ವೀಡನ್ ಮಾದರಿಯ 'ಅಂಬರ ಚುಂಬನ' ಗಡಿಯಾರ ಗೋಪುರ ಶನಿವಾರ ಉದ್ಘಾಟನೆಯಾಗಿದೆ. ಇದರಿಂದಾಗಿ ಜಯನಗರದ ನಿವಾಸಿಗಳಿಗೆ ಪ್ರತಿ ಗಂಟೆಗೊಮ್ಮೆ ಶಂಖನಾದ ಮತ್ತು ಗಂಟೆಯ ಶಬ್ದ ಕೇಳಿದಲಿದೆ.

ಅಂಬರ ಚುಂಚನ ಗಡಿಯಾರ ಗೋಪುರವನ್ನು ಸಂಸದ ಅನಂತ್ ಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಗರದಲ್ಲಿ ಅನೇಕ ಲ್ಯಾಂಡ್ ಮಾರ್ಕ್ ಗಳಿವೆ. ಸೌತ್ ಎಂಡ್ ವೃತ್ತದ ಲ್ಯಾಂಡ್ ಮಾರ್ಕ್ ಇನ್ನುಮುಂದೆ ಅಂಬರ ಚುಂಬನ ಗಡಿಯಾರ ಗೋಪುರ ಎಂದು ಬದಲಾಗಬೇಕು ಎಂದು ಕರೆ ನೀಡಿದರು.

ಗಡಿಯಾರ ಗೋಪುರ ಯಡಿಯೂರು ವಾರ್ಡ್ ನ ಬಿಬಿಎಂಪಿ ಸದಸ್ಯ ಎನ್.ಆರ್.ರಮೇಶ್ ಅವರ ಕನಸಿನ ಕೂಸು. ಸುಮಾರು 90 ಲಕ್ಷ ರೂ.ವೆಚ್ಚದಲ್ಲಿ ಗೋಪುರ ನಿರ್ಮಾಣ ಮಾಡಲಾಗಿದೆ. ಉಪಮುಖ್ಯಮಂತ್ರಿ ಆರ್.ಅಶೋಕ್, ಬಿಬಿಎಂಪಿ ಮೇಯರ್ ಡಿ.ವೆಂಕಟೇಶಮೂರ್ತಿ, ಆಯುಕ್ತ ಸಿದ್ಧಯ್ಯ, ಗೋಪುರದ ರೂವಾರಿ ಎನ್.ಆರ್.ರಮೇಶ್ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಗೋಪುರದ ವಿಶೇಷತೆಗಳು : 61 ಅಡಿ ಎತ್ತರದ ಮೂರು ಕಂಬಗಳ ಮೇಲೆ ನಿಂತಿರುವ ಅಂಬರ ಚುಂಬನ ಗೋಪುರ ನಿರ್ಮಾಣವಾಗಿದೆ. ಗೋಪುರದ ಮೇಲೆ 8 ಅಡಿ ಎತ್ತರದ ಮೂರು ಗಡಿಯಾರಗಳಿವೆ. ಮೂರು ಕಂಬಗಳನ್ನು ಹಸಿರು ಬಣ್ಣದ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಪ್ರತಿ ಗಂಟೆಗೊಮ್ಮೆ ಗೋಪುರ 20 ಸೆಕೆಂಡ್ ಗಳ ಕಾಲ ಶಂಖನಾದ ಮೊಳಗಿಸುತ್ತದೆ. ನಂತರ ಎಷ್ಟು ಸಮಯವಾಗಿದೆಯೋ ಅಷ್ಟು ಗಂಟೆಯ ಶಬ್ದ ಹೊರಡಿಸಲಿದೆ.

ಸಂಪೂರ್ಣ ಸೋಲಾರ್ ಶಕ್ತಿಯ ಮೂಲಕ ಮೂರು ಗಡಿಯಾರಗಳು ಕಾರ್ಯನಿರ್ವಹಿಸಲಿವೆ. ಅಂಬರ ಚುಂಬನದ ಶಂಖನಾದ ಮತ್ತು ಗಂಟೆಗಳ ಶಬ್ದ ಸುಮಾರು 3 ಕಿ.ಮೀ.ಗಳವರೆಗೆ ಕೇಳಿಬರಲಿದೆ. ಪ್ರತಿದಿನ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೆ ಗಡಿಯಾರ ಗೋಪುರ ಕಾರ್ಯನಿರ್ವಹಿಸಲಿದೆ.

ಗಡಿಯಾರ ಏಳುದಿನಕ್ಕೆ ಪ್ರತ್ಯೇಕ ಬಣ್ಣಗಳಲ್ಲಿ ಕಾಣುವಂತೆ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಸೋಮವಾರ-ಬಿಳಿ, ಮಂಗಳವಾರ- ಕೆಂಪು, ಬುಧವಾರ-ಹಸಿರು, ಗುರುವಾರ-ಹಳದಿ, ಶುಕ್ರವಾರ-ತಿಳಿನೀಲಿ,ಶನಿವಾರ- ಗಾಢ ನೀಲಿ, ರವಿವಾರ-ಗುಲಾಬಿ ಬಣ್ಣಗಳಲ್ಲಿ ಗಡಿಯಾರ ಕಂಗೊಳಿಸಲಿದೆ.

ಸ್ವೀಡನ್ ಗೂ ಸೆಡ್ಡು : ಅಂಬರ ಚುಂಬನ ಗಡಿಯಾರ ಗೋಪುರ ನಿರ್ಮಾಣಕ್ಕೆ ಸ್ವೀಡನ್ ನಲ್ಲಿಯ ಗೋಪುರ ಸ್ಫೂರ್ತಿಯಾಗಿದ್ದರೂ, ಅದಕ್ಕೆ ಇದು ಸೆಡ್ಡು ಹೊಡೆದಿದೆ. ಸ್ವೀಡನ್ ಗೋಪುರ ಕೇವಲ 41 ಅಡಿ ಎತ್ತರವಿದ್ದು, ಎರಡು ಕಂಬಗಳ ಮೇಲೆ ನಿಂತಿದೆ. ಆದರೆ, ಅಂಬರ ಚುಂಬನ ಮೂರು ಕಂಬಗಳ ಮೇಲೆ ನಿಂತಿದ್ದು, 61 ಅಡಿ ಎತ್ತರವಿದೆ.

ಉದ್ಯಾನ ನಗರಿಯ ಇತರ ಗೋಪುರಗಳು : ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ, ಮೇಯೋಹಾಲ್ ಮುಭಾಂಗ, ಸಿಟಿ ರೈಲು ನಿಲ್ದಾಣ, ಇಂದಿನಿಂದ ಸೌತ್ ಎಂಡ್ ವೃತ್ತದಲ್ಲಿ ಅಂಬರ ಚುಂಬನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+