ಎಚ್ ಎಂಟಿ ಡೀಲ್: ಕೃಷ್ಣ, ಡಿಕೆಶಿಗೆ ಲೋಕಾಯುಕ್ತ ಭೀತಿ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವೆ ಮೋಟಮ್ಮ, ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್‌ರಾವ್ ದೇಶ್‌ಮುಖ್ ಕುಟುಂಬ ಸದಸ್ಯರು ಸೇರಿದಂತೆ 36 ಜನರ ವಿರುದ್ಧ
ದೂರು ದಾಖಲಾಗಿದೆ.
ಈ ಸಂಬಂಧ ದೂರು ಪಡೆದ ನ್ಯಾಯಾಧೀಶ ಎನ್. ಕೆ.ಸುಧೀಂದ್ರರಾವ್ ಅವರು, ಎಚ್‌ಎಂಟಿಯಿಂದ ಮಾರಾಟವಾದ ಭೂಮಿಯ ದಾಖಲೆ ಪತ್ರಗಳನ್ನು ದೃಢೀಕರಿಸಿ ಸಲ್ಲಿಸುವಂತೆ ಸೂಚನೆ ನೀಡಿ ಮಾರ್ಚ್ 4ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಎಸ್ಸೆಂ ಕೃಷ್ಣ ಪ್ರತಿಕ್ರಿಯೆ: 'ನಾನು ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಕಂಪನಿಗೆ ಹಲವು ಬಾರಿ ಹೋಗಿರುವುದು ನಿಜ. ವಿದೇಶಿ ಗಣ್ಯರು ಬಂದಾಗ ಅವರ ಜೊತೆ ಭೇಟಿ ನೀಡಿದ್ದೇನೆ. ಯಾರೋ ಕಾರ್ಪೊರೇಟರ್ ರಮೇಶ್ ಅಂತೆ ಭೂ ಹಗರಣದ ಆರೋಪ ಹೊರೆಸಿ ದೂರು ನೀಡಿದ್ದಾರೆ. ಈ ಬಗ್ಗೆ ನನ್ನ ಲಾಯರ್ ಗೆ ಹೇಳಿದ್ದೇನೆ. ದೆಹಲಿ ಕೋರ್ಟ್ ನಲ್ಲಿ ಈ ಬಗ್ಗೆ ಪ್ರಶ್ನಿಸುತ್ತೇವೆ ಎಂದು ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರು ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಅವರಿಗೆ ಕಳೆದ ರಾತ್ರಿ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಭೂ ಹಗರಣ ಕುರಿತು ಬಿಬಿಎಂಪಿ ಸದಸ್ಯ ಎನ್. ಆರ್.ರಮೇಶ್ ಮಂಗಳವಾರ(ಫೆ.12) ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದೂರು ದಾಖಲಿಸಿದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಧಿಕಾರವಧಿಯಲ್ಲಿ ತಮ್ಮ ಅಳಿಯ ಸಿದ್ದಾರ್ಥ, ಮಾಜಿ ಸಚಿವರಾದ ಡಿ,ಕೆ. ಶಿವಕುಮಾರ್, ಮೋಟಮ್ಮ ಅವರಿಗೆ ಕಾನೂನು ಬಾಹಿರವಾಗಿ ಹೆಚ್‌ಎಂಟಿ ಕಾರ್ಖಾನೆಗೆ ಸೇರಿದ 202 ಎಕರೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಸೂರು ಮಹಾರಾಜರ ಆಡಳಿತಾವಧಿಯಲ್ಲಿ ರೈತರಿಂದ ಉಚಿತವಾಗಿ 631 ಎಕರೆ ಪಡೆಯಲಾಗಿತ್ತು. ಬಳಿಕ ರಾಜ್ಯ ಭೂಸ್ವಾಧೀನ ಕಾಯ್ದೆ ಅನ್ವಯ ಕೇಂದ್ರ ಮತ್ತು ರಾಜ್ಯಸರ್ಕಾರದ ಅನುಮತಿ ಪಡೆಯದೆ 3 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 202 ಎಕರೆ ಪ್ರದೇಶವನ್ನು ಖಾಸಗಿ ವ್ಯಕ್ತಿಗಳಿಗೆ ತುಂಡು ತುಂಡಾಗಿ ಮಾರಾಟ ಮಾಡಲಾಗಿದೆ. ಈ ಹಗರಣದಲ್ಲಿ ಕೇಂದ್ರ ಸಚಿವರಾದ ಜಯಪಾಲರೆಡ್ಡಿ ಹಾಗೂ ಮಹಾರಾಷ್ಟ್ರ ವಿಲಾಸ್‌ರಾವ್ ದೇಶ್‌ಮುಖ್ ಅವರು ಕೈಜೋಡಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಣಕಾಸಿನ ವ್ಯವಹಾರ ತನಿಖೆಯಾಗಲಿ ಎಚ್‌ಎಂಟಿಯ ಆಸ್ತಿಯ ಕಾನೂನು ಬಾಹಿರವಾಗಿ ಮಾರಾಟವಾದ ಭೂಮಿ ಲಾಭವನ್ನು ಶೋಭಾ ಡೆವಲಪರ್‍ಸ್, ಧವನಮ್ ಜ್ಯುವೆಲರ್‍ಸ್, ಭಾವನ ಜ್ಯುವೆಲರ್‍ಸ್‌ನ ಪಡೆದುಕೊಂಡಿದ್ದಾರೆ. ಅಲ್ಲದೆ, ಸ್ಕಂಧ ಡೆವಲಪರ್‍ಸ್, ಟಾಟಾ ಬಿಲ್ಡರ್‍ಸ್‌ಗೂ ಪಾಲು ಹೋಗಿದೆ. ಹಾಗಾಗಿ ಇದರ ಸಂಪೂರ್ಣ ಹಣಕಾಸಿನ ವ್ಯವಹಾರವನ್ನು ತನಿಖೆ ಮಾಡುವಂತೆ ದೂರುದಾರ ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ.
ಸಾಲಕ್ಕೆ ಲೆಕ್ಕವಿಲ್ಲ:ಎಚ್‌ಎಂಟಿ ಕಾರ್ಖಾನೆಯ ಅಧ್ಯಕ್ಷ ಜಾವೇದ್ ಅಧಿಕಾರದಲ್ಲಿದ್ದ ವೇಳೆ ಯುಕೋ ಬ್ಯಾಂಕ್‌ನಿಂದ 350 ಕೋಟಿ ರೂಪಾಯಿಯನ್ನು ಕಾರ್ಖಾನೆಯ ಹೆಸರಿನಲ್ಲಿ ಸಾಲ ಪಡೆದುಕೊಂಡಿದ್ದಾರೆ. ಬಳಿಕ ಸಾಲದ ಹಣವನ್ನು ಖರ್ಚು ಮಾಡಿದ್ದಕ್ಕೆ ದಾಖಲೆ ಪತ್ರಗಳು ಮಾತ್ರ ಇಲ್ಲದಂತಾಗಿದೆ.
ಈ ಸಂಬಂಧ ದೂರು ಪಡೆದ ಕೇಂದ್ರ ಸರ್ಕಾರ ಜಾವೇದ್‌ಗೆ ಕೇವಲ 1ಲಕ್ಷ ರೂ. ದಂಡ ವಿಧಿಸಿ ಕೈತೊಳೆದುಕೊಂಡಿದೆ. ಹಾಗಾಗಿ 350 ಕೋಟಿ ರೂ. ಸಾಲದ ಮೊತ್ತ ಏನಾಯಿತು ಎಂಬ ಮಾಹಿತಿಯ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ಹೇಳಲಾಗಿದೆ. [ಎಚ್ಎಂಟಿ ಸಮಾಧಿ ಮೇಲೆ ಕಾಂಗ್ರೆಸ್ಸಿಗರ ದುಡ್ಡಿನ ಸೌಧ]
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications