ವೈದ್ಯರ ಮುಷ್ಕರ ತಾತ್ಕಾಲಿಕವಾಗಿ ವಾಪಸ್

ರೋಗಿಗಳ ಹಿತದೃಷ್ಟಿಯಿಂದ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ವೈದ್ಯಧಿಕಾರಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ರವೀಂದ್ರ ತಿಳಿಸಿದ್ದಾರೆ. ಮುಷ್ಕರ ಹಿಂಪಡೆದ ಹಿನ್ನೆಲೆಯಲ್ಲಿ ವೈದ್ಯರು ಕೆಲಸಕ್ಕೆ ಹಾಜರಾಗಲಿದ್ದು, ವೈದ್ಯಕೀಯ ಸೌಲಭ್ಯ ಸಿಗದೆ ಪರದಾಡುತ್ತಿರುವ ರೋಗಿಗಳಿಗೆ ಅನುಕೂಲವಾಗಲಿದೆ.
ರೋಗಿಗಳ ಹಿತದೃಷ್ಟಿಯಿಂದ ಮುಷ್ಕರ ವಾಪಸ್ ಪಡೆಯಲು ಪದಾಧಿಕಾರಿಗೊಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಫೆ.11ರಂದು ಡಾ.ರವೀಂದ್ರ ಹೇಳಿಕೆ ನೀಡಿದ್ದರು. ವಿಕಾಸಸೌಧದಲ್ಲಿ ಸೋಮವಾರ ಮುಷ್ಕರ ನಿರತ ವೈದ್ಯರು ಮತ್ತು ಸರ್ಕಾರದ ನಡುವಿನ ಮಾತುಕತೆ ವಿಫಲವಾಗಿತ್ತು.
ವೈದ್ಯರೊಂದಿಗಿನ ಮಾತುಕತೆ ಮುರಿದು ಬಿದ್ದ ನಂತರ ಸರ್ಕಾರ ವೈದ್ಯರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಿದೆ. ಮುಷ್ಕರ ಕೈ ಬಿಟ್ಟು ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಕರೆ ನೀಡಿದ್ದರು.












Click it and Unblock the Notifications