ಕಾವೇರಿ: ಫೆ 7ರಿಂದ ಪಾದಯಾತ್ರೆಗೆ ಯಡಿಯೂರಪ್ಪ ಸಜ್ಜು

kjp-yeddyurappa-padayatre-to-protest-cauvery-ordinance
ಮೈಸೂರು, ಫೆ.5: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಅತ್ತ ಸುಪ್ರೀಂಕೋರ್ಟಿನಲ್ಲಿ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿರುವುದರಿಂದ ಅದನ್ನು ಪ್ರತಿಭಟಿಸಿ ಕೆಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.

'ನದಿ ನೀರು ಹಂಚಿಕೆ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ತಾಕೀತು ಮಾಡಿರುವುದು ಮರಣಶಾಸನವೇ ಸರಿ' ಎಂದು ಮಾಜಿ ಪ್ರಧಾನಿ ದೇವೇಗೌಡರು ಸಾರಿರುವ ಸಂದರ್ಭದಲ್ಲಿ 'ಇದೇ ಫೆ. 7ರಿಂದ ಮೈಸೂರಿನಿಂದ ಮಂಡ್ಯ ಮೂಲಕ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತೇನೆ' ಎಂದು ಯಡಿಯೂರಪ್ಪ ಇಂದು ಬೆಳಗ್ಗೆ ಮೈಸೂರಿನಲ್ಲಿ ಘೋಷಿಸಿದ್ದಾರೆ.

ಕಾವೇರಿ ನೀರಿಗಾಗಿ ಪಕ್ಷಾತೀತವಾಗಿ ನಡೆಯುವ ಬಿಎಸ್ ವೈ ಪಾದಯಾತ್ರೆಯು ಫೆಬ್ರವರಿ 7 ರಂದು ಬೆಳಗ್ಗೆ 8 ಗಂಟೆಗೆ ಮೈಸೂರಿನಿಂದ ಆರಂಭವಾಗಿ ಫೆ. 14ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ.

'ಕೇಂದ್ರ ಸರಕಾರ ತಮಿಳುನಾಡಿನ ರಕ್ಷಣೆಗೆ ಮುಂದಾಗಿದೆ. ಹಾಗಾಗಿ, ಅಧಿಸೂಚನೆ ಹೊರಡಿಸದಂತೆ ಆಗ್ರಹಿಸಿ ಕಾವೇರಿ ತಟದ ರೈತರು, ಬೆಂಗಳೂರಿನ ಕುಡಿಯುವ ನೀರು ಸಂರಕ್ಷಣೆಗಾಗಿ ಪಕ್ಷಾತೀತವಾಗಿ ಈ ಪಾದಯಾತ್ರೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ಅವರು ಪಾದಯಾತ್ರೆ ವೇಳೆ ತಮ್ಮ KJP ಪಕ್ಷದ ಬಾವುಟವನ್ನು ಸುತರಾಂ ಬಳಸುವುದಿಲ್ಲ' ಎಂದು ಹೇಳಿದ್ದಾರೆ.

ಅಂದಹಾಗೆ, ಈಗ್ಗೆ 2-3 ತಿಂಗಳ ಹಿಂದೆಯೂ ಕಾವೇರಿ ವಿವಾದ ಪ್ರಕೋಪಕ್ಕೆ ಹೋದಾಗ ಬೆಂಗಳೂರಿನಲ್ಲಿದ್ದ ಯಡಿಯೂರಪ್ಪನವರು ಮಂಡ್ಯದವರೆಗೂ ಪಾದಯಾತ್ರೆ ನಡೆಸುವುದಾಗಿ ಪ್ರಕಟಿಸಿದ್ದರು. ಆದರೆ ಅದ್ಯಾಕೋ ಅಂದು ಅವರು ಪಾದಯಾತ್ರೆ ಕಾರ್ಯಕ್ರಮದಿಂದ ಹೆಜ್ಜೆ ಹಿಂದಿಕ್ಕಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+