ತಮಿಳುನಾಡಿಗೆ ನೀರು ಬಿಡಲು ಸುಪ್ರೀಂ ಸೂಚನೆ

ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ತೀರ್ಪಿನ ವಿರುದ್ಧ ಎಲ್ಲ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ರಾಜ್ಯ ಸರ್ಕಾರ ಸಹ ತೀರ್ಪು ಹೊರಡಿಸದಂತೆ ಕೇಂದ್ರಕ್ಕೆ ಮನವಿ ಮಾಡಿತ್ತು.
ಆದರೆ ಕಳೆದ ಐದು ವರ್ಷಗಳಿಂದ ತೀರ್ಪು ಪ್ರಕಟಿಸಿದೆ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ಸುಪ್ರೀಂ ಕೋರ್ಟ್ ಕಿಡಿ ಕಾರಿದೆ.
2 ಟಿಎಂಸಿ ಬಿಡುಗಡೆಗೆ ಆದೇಶ: ಇದೇ ವೇಳೆ ತಮಿಳುನಾಡಿಗೆ ಎರಡು ಟಿಎಂಸಿ ನೀರು ಬಿಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಪೀಠ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿನ ನೀರಿನ ಅಗತ್ಯತೆಗಳ ಬಗ್ಗೆ ಎರಡು ದಿನದಲ್ಲಿ ವರದಿ ನೀಡುವಂತೆ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಸೂಚಿಸಿದೆ.
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸಾಂಬಾ ಬೆಳೆದ ಮೂರು ಜಿಲ್ಲೆಗಳಲ್ಲಿ ನೀರಿನ ಅವಶ್ಯಕತೆ ಕುರಿತು ಅಧ್ಯಯನ ನಡೆಸಲು ತ್ರಿಸದಸ್ಯ ಸಮಿತಿ ರಚಿಸುವಂತೆ ಆದೇಶಿಸಿದೆ.
ಫೆ.6ರೊಳಗೆ ಸಮಿತಿ ವರದಿ ಸಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಈ ತ್ರಿಸದಸ್ಯ ಅಧ್ಯಯನ ಸಮಿತಿ ತಂಜಾವೂರು, ನಾಗಪಟ್ಟಣಂ, ತಿರುವಾಯೂರ್ ಜಿಲ್ಲೆಗಳಲ್ಲಿ ಸಮಿತಿ ಅಧ್ಯಯನ ನಡೆಸಲಿದೆ.
ತ್ರಿಸದಸ್ಯ ಅಧ್ಯಯನ ಸಮಿತಿ ವರದಿ ಆಧರಿಸಿ ಮೆಟ್ಟೂರು ಜಲಾಶಯಕ್ಕೆ ನೀರು ಬೀಡುವಂತೆ ಕರ್ನಾಟಕಕ್ಕೆ ಸೂಚಿಸಿಲಾಗುವುದು. ಅಲ್ಲಿವರೆಗೆ ಸಾಂಬಾ ಬೆಳೆಗಳಿಗೆ ಮೆಟ್ಟೂರು ಜಲಾಶಯದಿಂದಲೇ ನೀರು ಬಳಸಿಕೊಳ್ಳುವಂತೆ ತಮಿಳುನಾಡಿಗೆ ಕೋರ್ಟ್ ಸೂಚಿಸಿದೆ.
ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪಿನ ಪ್ರಕಾರ, ಕರ್ನಾಟಕ 182, ತಮಿಳುನಾಡು 192, ಕೇರಳ-30, ಪಾಂಡಿಚೇರಿ-7 ಟಿಎಂಸಿ ನೀರು ಹಂಚಿಕೆಯಾಗಲಿದೆ.
ಕಾವೇರಿ ನದಿ ಪ್ರಾಧಿಕಾರ ಈ ಹಿಂದೆ ಸೆ.19,2012ರಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಪ್ರತಿನಿತ್ಯ 9,000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶಿಸಿತ್ತು. ಕರ್ನಾಟಕದಲ್ಲಿನ ಕುಡಿಯುವ ನೀರಿಗೆ ಅಭಾವ ಇದೆ ಎಂದು ಜ.30 ರಂದು ಸುಪ್ರೀಂಕೋರ್ಟಿಗೆ ಕರ್ನಾಟಕ ಮನವರಿಕೆ ಮಾಡಿಕೊಟ್ಟಿತ್ತು.












Click it and Unblock the Notifications