ಯಡಿಯೂರಪ್ಪಗೆ ಶನಿವಾರ ಅಭಿನಂದನೆ: ಲೋಕೇಶ್ವರ

fecititation-to-kjp-yeddyurappa-feb-2-tiptur-lokeshwar
ತಿಪಟೂರು, ಜ.31: ಮಾಜಿ ಪೊಲೀಸ್ ಅಧಿಕಾರಿ, ತಾಲೂಕಿನ ಹಾಲಿ ಕೆಜೆಪಿ ಮುಖಂಡ ಲೋಕೇಶ್ವರ ಅವರ ನೇತೃತ್ವದಲ್ಲಿ ಇದೇ ಶನಿವಾರ (ಫೆ.2) ಸಂಜೆ ಕೆಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಅವರನ್ನು ತಾಲೂಕಿನ ಜನತೆ ಪರವಾಗಿ ಅಭಿನಂದಿಸಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ತಿಪಟೂರು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಕೋಟ್ಯಂತರ ರೂ ಮೌಲ್ಯದ ಹತ್ತಾರು ಯೋಜನೆಗಳನ್ನು ಮಂಜೂರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಫೆ. 2ರಂದು ನಗರದ ಹಾಲ್ಕುರಿಕೆ ರಸ್ತೆ ಸುಜ್ಞಾನ ಶಾಲೆ ಪಕ್ಕದ ಮೈದಾನದಲ್ಲಿ ಬೃಹತ್‌ ಸಾರ್ವಜನಿಕ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಇನ್ಸ್ ಪೆಕ್ಟರ್ ಲೋಕೇಶ್ವರ ತಿಳಿಸಿದ್ದಾರೆ.

ಯಡಿಯೂರಪ್ಪ ಅವರು ರಾಜ್ಯದ ಚುಕ್ಕಾಣಿ ಹಿಡಿದಿದ್ದ ಮೂರುವರೆ ವರ್ಷದ ಅವಧಿಯಲ್ಲಿ ಅನುಷ್ಠಾನಗೊಳಿಸಿದ ಜನಪರ ಅಭಿವೃದ್ಧಿ ಯೋಜನೆಗಳು ರಾಜ್ಯಕ್ಕೆ ಹತ್ತಾರು ವಿಭಾಗದಲ್ಲಿ ಪ್ರಥಮ ಸ್ಥಾನ ತಂದು ಕೊಟ್ಟಿತು. ತಿಪಟೂರು ತಾಲೂಕಿನ ಅಭಿವೃದ್ಧಿಗೂ ಸಹ ಅವರ ಅಧಿಕಾರದ ಅವಧಿಯಲ್ಲಿ ಮಹತ್ವದ ಯೋಜನೆಗಳು ಮಂಜೂರಾದವು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೇಶ್ವರ ಅವರು ಹೇಳಿದರು.

ಶೋಭಾ ಕರಂದ್ಲಾಜೆ ಉಪಸ್ಥಿತಿ: ಈ ಸಮಾರಂಭದಲ್ಲಿ ತಾಲೂಕಿನ ಮಠಾಧೀಶರು, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಜಿಎಸ್ ಬಸವರಾಜು, ಕೆಜೆಪಿ ರಾಜ್ಯ ಮುಖಂಡ ಧನಂಜಯ ಕುಮಾರ್‌, ಪ್ರಧಾನ ಕಾರ್ಯದರ್ಶಿ ಎಂಡಿ ಲಕ್ಷ್ಮಿನಾರಾಯಣ್‌, ಕೆಜೆಪಿ ಜಿಲ್ಲಾಧ್ಯಕ್ಷ ಹೆಬ್ಟಾಕ ರವಿ, ಜ್ಯೋತಿ ಗಣೇಶ್‌, ತಾಲೂಕಿನ ಮಾಜಿ ಶಾಸಕರಾದ ಬಿ ನಂಜಾಮರಿ, ಎಸ್‌ಪಿ ಗಂಗಾಧರಪ್ಪ, ಟಿಜಿ ತಿಮ್ಮೇಗೌಡ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+