ಚುನಾವಣೆ ಕಾಲೇ... ಜಿಲ್ಲಾಧಿಕಾರಿಗಳ ಎತ್ತಂಗಡಿ

ನಿನ್ನೆ ಮಂಗಳವಾರ ರಾತ್ರಿ ಶಾಸಕರ ರಾಜೀನಾಮೆ ಬೆನ್ನಲ್ಲೇ ರಾಜ್ಯದ 11 ಐಎಎಸ್ ಅಧಿಕಾರಿಗಳನ್ನು ಸಿಎಂ ಶೆಟ್ಟರ್ ಸರಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಮುಖ್ಯವಾಗಿ, ಶಿವಮೊಗ್ಗ ಮತ್ತು ಮೈಸೂರು ಜಿಲಾಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
ಶಿವಮೊಗ್ಗ ಡಿಸಿ ಎತ್ತಂಗಡಿ: ಶಿವಮೊಗ್ಗ ಜಿಲ್ಲಾಧಿಕಾರಿ ಎಂವಿ ವೇದಮೂರ್ತಿ ಅವರನ್ನು ವರ್ಗಾವಣೆಗೊಳಿಸಿ, ಶಿವಮೊಗ್ಗಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿಫುಲ್ ಬನ್ಸಾಲ್ ಅವರನ್ನು ನೇಮಕ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ ರಾಮೇಗೌಡ ನೇಮಕವಾಗಿದೆ.
ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಎನ್ ನರಸಿಂಹರಾಜುಲು ಅವರನ್ನು ವರ್ಗಾವಣೆಗೊಳಿಸಿ, ಆ ಸ್ಥಾನಕ್ಕೆ ಎಸ್ ಕೆ ಪಟ್ನಾಯಕ್ ಅವರನ್ನು ನೇಮಿಸಲಾಗಿದೆ. ರಾಮನಗರ ಜಿಪಂ ಸಿಇಒ ಡಾ. ವೆಂಕಟೇಶ್, ಬಿದರ್ ಜಿಪಂ ಸಿಇಒ ಉಜ್ವಲ್ ಘೋಷ್, ಶಿವಮೊಗ್ಗ ಜಿಪಂ ಸಿಇಒ ಶಶಿಕಾಂತ್, ಗೋವಿಂದರಾಜು ಅವರನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ನೇಮಕಗೊಳಿಸಿ ಬಿಜೆಪಿ ತನ್ನ ಆಡಳಿತಕ್ಕೆ ಮೇಜರ್ ಸರ್ಜರಿ ನಡೆಸಿದೆ.












Click it and Unblock the Notifications