Get Updates
Get notified of breaking news, exclusive insights, and must-see stories!

ಯುದ್ಧಕಾಲದಲ್ಲಿ ಠಾಕ್ರೆ ಹುಲಿಗಳು ಒಂದಾಗಲಿದ್ದಾರೆ

ಮುಂಬೈ, ಜ.30: ಯುದ್ಧಕಾಲದಲ್ಲಿ ಸಂಧಿ ಸಂಧಾನಗಳು ನಡೆಯುವುದು ಮಾಮೂಲಿ, ಚುನಾವಣೆ ಎಂಬ ಮಹಾ ಯುದ್ಧದಲ್ಲಿ ಎದುರಾಳಿಗಳನ್ನು ಸೋಲಿಸಲು ಸಮರ್ಥವಾಗಿ ಕಾದಾಡಲು ಶಿವಸೇನೆ ನಿರ್ಧರಿಸಿದೆ. ಹೀಗಾಗಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಅವರ ಕಸಿನ್ ರಾಜ್ ಠಾಕ್ರೆ ಮತ್ತೆ ಒಂದಾಗುವ ಸೂಚನೆ ಸಿಕ್ಕಿದೆ.

ಶಿವಸೇನಾದ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು ಸಹೋದರ ಸಂಬಂಧಿ ರಾಜ್ ಠಾಕ್ರೆ ಅವರೊಡನೆ ಇರುವ ಭಿನ್ನಭಿಪ್ರಾಯಕ್ಕೆ ಇಷ್ಟರಲ್ಲೇ ಅಂತ್ಯ ಹಾಡಲಾಗುವುದು. ಇಬ್ಬರು ಕೈಜೋಡಿಸಿ ಮಹಾರಾಷ್ಟ್ರದಲ್ಲಿ ಹೊಸ ಇತಿಹಾಸ ಬರೆಯಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.

Thackeray Family Saga: Uddhav, Raj to reunite for elections?

ಬುಧವಾರ(ಜ.30) ಸಂದರ್ಶನವೊಂದರಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಅವರಿಗೆ ಮೈತ್ರಿಯಾಗಲು ಇಚ್ಚೆಯಿದ್ದರೆ ಅವರಿಗೆ ಸುಸ್ವಾಗತ ಎಂದು ಪರೋಕ್ಷವಾಗಿ ಶಿವಸೇನಾಗೆ ಆಹ್ವಾನ ನೀಡಿದ್ದಾರೆ. ಈ ಸಂಬಂಧ ರಾಜ್ ಠಾಕ್ರೆ ಮತ್ತು ನಾವು ಪರಸ್ಪರ ಮಾತಕತೆ ನಡೆಸಿ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ ಎಂದು ಉದ್ದವ್ ಠಾಕ್ರೆ ಹೇಳಿದ್ದಾರೆ.

2006ರಲ್ಲಿ ರಾಜ್ ಠಾಕ್ರೆ ಅವರು ಶಿವಸೇನಾ ಮುಖ್ಯಸ್ಥರಾಗಿದ್ದ ದಿವಂಗತ ಬಾಳಾ ಠಾಕ್ರೆ ಅವರೊಡನೆ ಸಿಟ್ಟು ಮಾಡಿಕೊಂಡು ಶಿವಸೇನಾ ತೊರೆದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಸಂಘಟನೆ ಸ್ಥಾಪಿಸಿದ್ದರು. ಶಿವಸೇನಾ ಮತ್ತು ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಸಂಘಟನೆಗಳು ಮೈತ್ರಿಯಾದರೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಭಯ ಹುಟ್ಟುತ್ತದೆ. ಮಹಾರಾಷ್ಟ್ರದಲ್ಲಿ ಎರಡು ಪಕ್ಷಗಳು ಪ್ರಬಲವಾಗಿದ್ದವು.

ರಾಜ್ ಠಾಕ್ರೆ ಹಾಗೂ ಉದ್ಧವ್ ಠಾಕ್ರೆ ಒಂದಾಗುವ ಬಗ್ಗೆ ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಕೂಡಾ ಬರೆಯಲಾಗಿದೆ. ಇಬ್ಬರ ಸಂಗಮದಿಂದ ಕುಟುಂಬ ಹಾಗೂ ರಾಜಕೀಯ ಎರಡರಲ್ಲೂ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಮರಾಠಿ ಮಾನೂಸ್ ಗಳಿಗಾಗಿ ಹೆಚ್ಚಿನ ಹೋರಾಟ ನಡೆಸಬಹುದು ಎನ್ನಲಾಗಿದೆ.ಎರಡು ಸಂಘಟನೆಗಳು ಮೈತ್ರಿಯಾಗುವುದರಿಂದ ರಾಜಕೀಯ ಪಕ್ಷಗಳಿಗೆ ಚುನಾವಣೆ ಬಗ್ಗೆ ಆತಂಕ ಹುಟ್ಟಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+