ಮಾಜಿ ಸಚಿವ, ಹಾಲಿ ಸಿಎಂ ಶೆಟ್ಟರೇ ನಿಮ್ಮ ಉತ್ತರವೇನು?

bhalki-pdo-vijaykumar-father-manikrao-suicide-cm-silent
ಬೀದರ್, ಜ.29: ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವಿಜಯಕುಮಾರ ಆತ್ಮಹತ್ಯೆ ಮಾಡಿಕೊಂಡ ಹದಿನಾಲ್ಕು ತಿಂಗಳ ಬಳಿಕ ಸರಕಾರದಿಂದ ಸಿಗಬೇಕಾದ ಅರ್ಹ/ಸಕಾಲಿಕ ನೆರವು/ನ್ಯಾಯ ಸಿಗದೆ ವಿಜಯಕುಮಾರನ ತಂದೆ, ಇಂಗ್ಲಿಷ್ ಉಪನ್ಯಾಸಕ ಮಾಣಿಕ್ ರಾವ್ (58) ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಾವಿಗೆ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವರಾಗಿಯೂ ಮತ್ತು ಹಾಲಿ ಮುಖ್ಯಮಂತ್ರಿಯಾಗಿಯೂ ಜಗದೀಶ್ ಶೆಟ್ಟರ್ ಅವರೇ ನೇರ ಕಾರಣರಾಗಿದ್ದಾರೆ ಎಂದು ಸಾಂದರ್ಭಿಕ ಸಾಕ್ಷ್ಯಗಳು ಒತ್ತಿ ಹೇಳುತ್ತಿವೆ.

ಪಿಡಿಒ ವಿಜಯಕುಮಾರ 2011 ನವೆಂಬರ್ 9ರಂದು ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದರು. ಆಗ, ಖುದ್ದು ತಮ್ಮ ಇಲಾಖೆಯ ಉದ್ಯೋಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ದುಃಖ ತಾಳಲಾರದೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಶೆಟ್ಟರ್ ಸಾಹೇಬರು ವಿಜಯಕುಮಾರ್ ಮನೆಗೆ ಧಾವಿಸಿ, ನಾನು ನಿಮ್ಮ ಸಂಕಷ್ಟವನ್ನು ಹೋಗಲಾಡಿಸುತ್ತೇನೆ ಎಂದು ಮನೆಯವರನ್ನು ಸಂತೈಸಿದ್ದರು.

ಮುಂದೆ ಶೆಟ್ಟರ್ ಸಾಹೇಬರು ನಾಡಿನ ದೊರೆಯೇ ಆಗಿಬಿಟ್ಟರು. ಶೆಟ್ಟರ್ ಅವರಲ್ಲಿ ನಿಜವಾದ ಕಳಕಳಿಯಿದ್ದಿದ್ದರೆ ಅವರು ಸಹಿ ಮಾಡಬೇಕಿದ್ದ ಮೊದಲು ಫೈಲು ವಿಜಯಕುಮಾರ್ ಸಂಬಂಧಪಟ್ಟಿದ್ದಾಗಿರಬೇಕಿತ್ತು. ಆದರೆ ಅವರದೂ ರಾಜಕೀಯ ಒತ್ತಡದ ಜೀವನ. ದಿನಗಂಡಾಂತರದಲ್ಲಿ ದಿನ ದೂಡುತ್ತಿರುವ ಶೆಟ್ಟರಿಗೆ ತಮ್ಮ ಕುರ್ಚಿ ಉಳಿಸಿಕೊಳ್ಳುವುದೇ ದುಸ್ತರವಾಗಿದೆ. ಅಂತಹುದರಲ್ಲಿ ಹಳೆಯ ಬಾಧ್ಯತೆಗಳ ಬಗ್ಗೆ ನೆನಪು ಎಲ್ಲಿಯದು?

ಬಹುಶಃ ಈಗಲೂ ವಿಜಯಕುಮಾರ್ ತಂದೆಯ ಆತ್ಮಹತ್ಯೆ ಸುದ್ದಿ ಕೇಳಿ ಸಜ್ಜನ ಶೆಟ್ಟರ್ ಅವರ ಮಗುಮನಸ್ಸು ಈ ಹಿಂದಿನಂತೆ ತುಡಿಯಬಹುದು. ಆದರೆ ಈ ಹಿಂದಿನದಕ್ಕಿಂತ ಅವರು ಈಗ ಹೆಚ್ಚು ಒತ್ತಡದಲ್ಲಿದ್ದಾರೆ. ಹಾಗಾಗಿ ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು... ಇನ್ನೆಷ್ಟು ಮಾಣಿಕ್ ರಾವ್, ವಿಜಯಕುಮಾರಗಳು ಈ ರಾಜಕಾರಣಿಗಳ ಬೇಜವಾಬ್ದಾರಿತನಕ್ಕೆ ಬಲಿಯಾಗಬೇಕೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+