ಸರಕಾರಕ್ಕೇನೂ ಧಕ್ಕೆಯಿಲ್ಲ: ರಾಜನಾಥ್ ಗೆ ಮನವರಿಕೆ
ನವದೆಹಲಿ,
ಜ.28: ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಕಳೆದ ವಾರ ಆಯ್ಕೆಗೊಂಡ ರಾಜನಾಥ್ ಸಿಂಗ್ ಅವರನ್ನು ಕರ್ನಾಟಕ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅಭಿನಂದಿಸಿದ್ದಾರೆ. ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಇಂದು ಬೆಳಗ್ಗೆ ಇಬ್ಬರೂ ನಾಯಕರ ಸಮಾಗಮ ನಡೆಯಿತು. id="toptextpromo">'ಕರ್ನಾಕದಲ್ಲಿ
ಬಿಜೆಪಿ ಸರಕಾರ ಸುಭದ್ರವಾಗಿದೆ. ಜಗದೀಶ್ ಶೆಟ್ಟರ್ ಒಬ್ಬ ಅನುಭವಿ ರಾಜಕಾರಣಿ. ಈ ಹಂತದಲ್ಲಿ ನಾನು ಅವರಿಗೆ ಸಲಹೆ ನೀಡುವ ಅಗತ್ಯ ಕಂಡುಬರುತ್ತಿಲ್ಲ' ಎಂದು ಶೆಟ್ಟರ್ ಭೇಟಿಯ ಬಳಿಕ ರಾಜನಾಥ್ ಸುದ್ದಿಗಾರರಿಗೆ ತಿಳಿಸಿದರು. ಇದಕ್ಕೆ ಸ್ಥಳದಲ್ಲೇ ಪ್ರತಿಕ್ರಿಯಿಸಿದ ಶೆಟ್ಟರ್ 'ನಮ್ಮ ಸರಕಾರ ಪೂರ್ಣಾವಧಿ ಪೂರೈಸಲಿದೆ. ಯಾವುದೇ ಆತಂಕವಿಲ್ಲ' ಎಂದು ಸಮರ್ಥಿಸಿಕೊಂಡರು. id='are-slot-1' class='oiad oi-axt oiadv'> id='top-searched-articles'>ಅಕ್ರಮ
ಗಣಿಗಾರಿಕೆ ಭ್ರಷ್ಟಾಚಾರದ ಆರೋಪದಲ್ಲಿ ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಿಎಸ್ ಯಡಿಯೂರಪ್ಪ ಅವರು ನಿರಂತರವಾಗಿ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಉರುಳಿಸುವ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಇದರಿಂದ ರಾಜ್ಯ ಬಿಜೆಪಿ ಆಗಾಗ ಸಂಕಷ್ಟಕ್ಕೀಡಾಗುತ್ತಿದೆ.











Click it and Unblock the Notifications