ಇಂದಿನ ಮಾಧ್ಯಮ ಎತ್ತ ಸಾಗುತ್ತಿದೆ?

Dr. Dileep Padgaonkar
ಬೆಂಗಳೂರು, ಜ. 22 : ಮಾಧ್ಯಮ ಲೋಕದಲ್ಲಿ ಅನೇಕಾನೇಕ ಬದಲಾವಣೆಗಳಾಗಿವೆ. ಆಗುತ್ತಿವೆ. ಸಾಂಪ್ರದಾಯಿಕ ಮಾಧ್ಯಮಗಳು ಕ್ರಮೇಣ "ಹಿಂದೆ" ಸರಿಯುತ್ತಾ ಹೊಸ ಮೀಡಿಯಮ್ಮುಗಳಿಗೆ ದಾರಿ ಮಾಡಿಕೊಡುತ್ತಿವೆ. ಜಾಗತೀಕರಣ, ತಾಂತ್ರಿಕ ಪರಿಣತಿಗಳ ಪ್ರಖರತೆಯ ಎಫೆಕ್ಟ್ ಇದು. ಇದೊಂದು ಸ್ವಾಗತಾರ್ಹವಾದ "ಅಲ್ಲೋಲಕಲ್ಲೋಲ" ಮತ್ತು ಹೊಸ ಮಾಧ್ಯಮಕ್ಕೆ ಸವಾಲು ಎಂದರೆ ತಪ್ಪಲ್ಲ, ಸರಿ!

ಈ ಸವಾಲುಗಳನ್ನು ಅರ್ಥೈಸಿಕೊಳ್ಳುವ ಮತ್ತು ಮಾಧ್ಯಮಗಳ ಚಲನೆಯ ಜಾಡುಹಿಡಿದು ಹೊರಡುವುದು ಸುಲಭವಲ್ಲ. ಅದಕ್ಕೊಂದು ಪರಿಶ್ರಮ, ಒಂದು ಅಧ್ಯಯನ ಒಂದು ಮುಕ್ತ ಚರ್ಚೆ, ಒಂದು ಮಾರ್ಗದರ್ಶನ ಅಗತ್ಯವಿದೆ.

ಇಂಥ ಚರ್ಚೆಗೆ ವಿಚಾರಣ ಸಂಕಿರಣದ ವೇಷ ತೊಡಿಸುವ ಪ್ರಯತ್ನ ರೆಡಿಯಾಗಿದೆ. ತನ್ಮೂಲಕ ಮಾಧ್ಯಮ ಪ್ರಪಂಚದ ಸಂಚಲನಗಳನ್ನು ಗುರುತಿಸಿ, ಇಂದು ನಾವು ಎತ್ತ ಸಾಗುತ್ತಿದ್ದೇವೆ ಎಂಬುದಕ್ಕೆ ಟಿಪ್ಪಣಿ ಅಥವಾ ಭಾಷ್ಯ ಬರೆಯುವ "ವರ್ಕ್ ಶಾಪ್" ಬೆಂಗಳೂರಿನಲ್ಲಿ ನಡೆಯತ್ತೆ. ಕೇವಲ ಬರೆಯುವದಷ್ಟೇ ಅಲ್ಲ, ಅದನ್ನು ಮಾರುಕಟ್ಟೆಗೆ ಹೊಂದಿಸುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವವರು ಬೇಕಾಗಿದ್ದಾರೆ ಎನ್ನುವುದು ಸಂಕಿರಣದ ಉದ್ದೇಶ.

ಈ ಸಂಕಿರಣದ ಹೆಸರು CQ'13, a Seminar. ವ್ಯವಸ್ಥೆ ಮಾಡಿರುವವರು ಸಿಂಬಯಾಸಿಸ್. ಸಂಕಿರಣ ಸಂಸ್ಥೆಯ ಬೆಂಗಳೂರು ಕ್ಯಾಂಪಸ್ ನಲ್ಲಿ ಏರ್ಪಾಟಾಗಿದೆ. ದಿನಾಂಕ 24 ಜನವರಿ, ಗುರುವಾರ ಬೆಳಗ್ಗೆ 9ರಿಂದ ಸಂಜೆ 6 ರವರೆಗೆ. ಸಂಕಿರಣದ ಪ್ರಮುಖ ಆಕರ್ಷಣೆ 5 ಗೋಷ್ಠಿಗಳು. ಮಾಧ್ಯಮ ಲೋಕದ ಪರಿಣತರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ನಂತರ ಚರ್ಚೆ. ಕ್ವಿಜ್, ಸಾಂಸ್ಕೃತಿಕ ಕಾರ್ಯಕ್ರಮಗಳ ಲೇಪನವೂ ಉಂಟು.

ಮಾಧ್ಯಮ ಮತ್ತು ಮಾಧ್ಯಮ ಮಾರುಕಟ್ಟೆ ಪರಿಣತರ ಒಂದು ದೊಡ್ಡ ಪಡೆ ಸಂಕಿರಣದಲ್ಲಿ ಭಾಗವಹಿಸುತ್ತೆ. ಸಂಕಿರಣದ ಮುಖ್ಯ ಅತಿಥಿಯಾಗಿ ಪ್ರಖ್ಯಾತ ಪತ್ರಕರ್ತ ದಿಲೀಪ್ ಪಡಗಾಂವ್ ಕರ್ (ಚಿತ್ರದಲ್ಲಿರುವವರು) ಪಾಲ್ಗೊಳ್ಳುತ್ತಿದ್ದಾರೆ. ನಿಮ್ಮ ಮಾಧ್ಯಮ ವೇದಿಕೆ ಯಾವುದೇ ಇರಲಿ. ಅದರ ಬ್ರಾಂಡ್ ಇಮೇಜನ್ನು ವೃದ್ಧಿಸಿಕೊಳ್ಳ ಬಯಸುವುದಕ್ಕೆ ಈ ಸಂಕಿರಣ ಅಪೂರ್ವ ಅವಕಾಶ ಎಂದು ಸಿಂಬಯಾಸಿಸ್ ಹೇಳತ್ತೆ.

ಪತ್ರಕರ್ತರು, ಮಾಧ್ಯಮ ಲೋಕದ ಆಗುಹೋಗುಗಳನ್ನು ಕೂಲಂಕಷವಾಗಿ ಗಮನಿಸುವವರು, ವಿದ್ಯಾರ್ಥಿಗಳು, ವಿಶೇಷವಾಗಿ ಬಿಜಿನೆಸ್ ಸ್ಕೂಲ್ ವಿದ್ಯಾರ್ಥಿಗಳು ಸೆಮಿನಾರಿನಲ್ಲಿ ಇರುತ್ತಾರೆ. ನೀವೂ ಇರಿ. ಈ ಕಾರ್ಯಕ್ರಮದ ವಿವರಗಳಿಗೆ ಸಂಸ್ಥೆಯ ಫೇಸ್ ಬುಕ್ ಪುಟ ನೋಡಿರಿ ಮತ್ತು ಟ್ವಿಟ್ಟರಲ್ಲಿ ಫಾಲೋ ಮಾಡಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+