ನರ್ಸರಿ ಹಸುಳೆ ಮೇಲೆ ಬಸ್ ಕಂಡಕ್ಟರ್ ಅತ್ಯಾಚಾರ

mumbai-juhu-lkg-student-molested-school-bus-conductor
ಮುಂಬೈ, ಜ.19: ಎಲ್ ಕೆಜಿ ಓದುತ್ತಿದ್ದ ನಾಲ್ಕು ವರ್ಷದ ಹಸುಳೆಯ ಮೇಲೆ ಬಸ್ ಕಂಡಕ್ಟರ್ ಅತ್ಯಾಚಾರವೆಸಗಿದ್ದು, ಆರೋಪಿಯನ್ನು ಫೆ. 1ರವೆರಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

35 ವರ್ಷದ ಆರೋಪಿ ಕಂಡಕ್ಟರ್ ರಮೇಶ್ ರಾಜಪೂತ್ ಎಂದಿನಂತೆ ಮಗುವನ್ನು ಶಾಲಾ ಬಸ್ಸಿನಲ್ಲಿ ಕರೆದೊಯ್ಯುವಾಗ ವಾಹನದಲ್ಲೇ ಅಮಾನುಷ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಲಾಗಿದೆ. ಜುಹು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಬಾಧಿತ ಮಗು ಮನೆಗೆ ಮರಳಿದ ನಂತರ ತನ್ನ ಪೋಷಕರಿಗೆ ವಿಷಯ ತಿಳಿಸಲಾಗಿ, ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಏನಾಗಿತ್ತು?: ಮಂಗಳವಾರ ಮನೆಗೆ ಮರಳಲು ಮಗು ಶಾಲಾ ಬಸ್ ಹತ್ತಿತ್ತು. ಉಳಿದೆಲ್ಲ ಮಕ್ಕಳು ಅವರವರ ಮನೆ ಬಳಿ ಬಸ್ಸಿನಿಂದ ಇಳೀದ ಬಳಿಕ ಏಕಾಂಗಿಯಾದ ಬಾಧಿತ ಮಗುವನ್ನು ಬಸ್ಸಿನಲ್ಲಿ ಹಿಂದಿನ ಸೀಟಿಗೆ ಕರೆದೊಯ್ದು, ಚಲಿಸುತ್ತಿದ್ದ ವಾಹನದಲ್ಲಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಅತ್ಯಾಚಾರ ವಿಷಯವನ್ನು ಮನೆಯವರಿಗೆ ತಿಳಿಸಬೇಡ ಎಂದೂ ಆರೋಪಿ ಮಗುವಿಗೆ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ. ಆದರೆ ಬುಧವಾರ ಮಗು ತನ್ನ ತಾಯಿಯ ಬಳಿ ವಿಷಯ ತಿಳಿಸಿದ್ದಾಳೆ. ರಜಪೂತನನ್ನು ಬಂಧಿಸಿದ್ದು, ಬಸ್ ಚಾಲಕನನ್ನು ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಪರಿಗಣಿಸಲಾಗುವುದು. ಬಾಧಿತ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ರಜಪೂತನ ವಿರುದ್ಧ IPC sections 376 (rape), 354 (molestation), 509 (insulting modesty) ಮತ್ತು Protection of Children from Sexual Offences Act 2012 ಅನುಸಾರ ಕೇಸು ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+