ಮದ್ವೆಯಾಗ್ಲಿಲ್ಲಾಂತ ಬೆಂಗಳೂರು ಟೆಕ್ಕಿ ನೇಣಿಗೆ ಶರಣು
ಮೈಸೂರು,
ಜ.10: ಬೆಂಗಳೂರಿನ ಜಯನಗರದ ನಿವಾಸಿ ನರಸಿಂಹನ್ ಚಕ್ರವರ್ತಿ ಎಂಬ ಟೆಕ್ಕಿ ತನಗೆ ಮದ್ವೆಯಾಗಲಿಲ್ಲಾಂತ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. id="toptextpromo">41
ವರ್ಷದ ಚಕ್ರವರ್ತಿ ತನಗೆ ವಯಸ್ಸಾದರೂ ಇನ್ನೂ ಮದ್ವೆ ಆಗಲಿಲ್ವಲ್ಲಾ ಎಂಬ ಕೊರಗಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸೋಮವಾರ ಮಧ್ಯಾಹ್ನ ಮೈಸೂರಿಗೆ ತೆರಳಿದ್ದ ಟೆಕ್ಕಿ ಚಕ್ರವರ್ತಿ ಚಂದ್ರಗುಪ್ತ ರಸ್ತೆಯಲ್ಲಿರುವ ಗಣೇಶ್ ಪ್ಯಾಲೆಸ್ ಲಾಡ್ಜಿನಲ್ಲಿ ತಂಗಿದ್ದರು. ಆದರೆ ಮಂಗಳವಾರ ಅವರು ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. id='are-slot-1' class='oiad oi-axt oiadv'> id='top-searched-articles'>ಬೆಂಗಳೂರಿನ
ಕೋರಮಂಗಲದಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಚಕ್ರವರ್ತಿಗೆ ವಿವಾಹ ಮಾಡಿಸಲು ಮನೆಯವರು ಅನೇಕ ಸಂಬಂಧಗಳನ್ನು ನೋಡುತ್ತಿದ್ದರು. ಆದರೆ ಹುಡುಗಿಯರು ಯಾರೂ ಒಪ್ಪುತ್ತಿರಲಿಲ್ಲ. ಇದರಿಂದ ಬೇಸತ್ತು ಚಕ್ರವರ್ತಿ ಸತ್ತು ಹೋಗಿದ್ದಾರೆ.











Click it and Unblock the Notifications