ಮಂಗಳನ ಅಂಗಳದಲ್ಲಿ ವಿಲ್ಲಾ, ವೆಜ್ಜಿಗಳಿಗೆ ಮಾತ್ರ!
ಖಾಸಗಿ ಖಗೋಳ ಉದ್ಯಮಿ ಮತ್ತು 'ಪೇಪಾಲ್' ಸಹಸಂಸ್ಥಾಪಕ ಎಲಾನ್ ಮಸ್ಕ್ ಅವರು ಸಖತ್ ಪ್ಲಾನ್ ಹಾಕಿಕೊಂಡಿದ್ದಾರೆ. ರೆಡ್ ಪ್ಲಾನೆಟ್ ಎಂದೇ ಜನಜನಿತವಾಗಿರುವ ಮಂಗಳನ ಅಂಗಳದಲ್ಲಿ 80 ಸಾವಿರ ಖಗೋಳ ಶಾಸ್ತ್ರಜ್ಞರ ಸಂಶೋಧನೆಗೆ ಅನುಕೂಲವಾಗಲೆಂದು ಒಂದು ಸಣ್ಣ ನಗರವನ್ನು ನಿರ್ಮಿಸುವ ಬೃಹತ್ ಬ್ರಹ್ಮಾಂಡ ಯೋಜನೆಯನ್ನು ರೂಪಿಸಿದ್ದಾರೆ.
ಸುದ್ದಿ ಕೇಳಿದೊಡನೆ ನಾಮುಂದು ತಾಮುಂದು ಎಂದು ಕ್ಯೂ ಹಚ್ಚುವ ಅಗತ್ಯವಿಲ್ಲ. ಈ ಸಂಕ್ರಾಂತಿಯ ಮುಂಚೆ ಪ್ರಕಟಿಸಲಾದ ಭವಿಷ್ಯದ ಆಫರ್ ನೀಡಿರುವುದು ಪಕ್ಕಾ ಸಸ್ಯಾಹಾರಿಗಳಿಗೆ ಮಾತ್ರ. ಮಾಂಸಾಹಾರಿಗಳಾಗಿದ್ದರೆ ಕನಸು ಕಾಣುವುದನ್ನು ತಕ್ಷಣ ನಿಲ್ಲಿಸಬೇಕು. ಈ ಭವಿಷ್ಯತ್ತಿನ ಯೋಜನೆ ಸಸ್ಯಾಹಾರಿಗಳಿಗೆ ಮಾತ್ರ ಎಂದು ಮಸ್ಕ್ ಅವರು ಹೇಳಿದ್ದಾಗಿ ದಿ ಸನ್ ಪತ್ರಿಕೆ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್‌ಗೆ ತಮ್ಮ ಫಾಲ್ಕನ್ 9 ರಾಕೆಟ್ ಮುಖಾಂತರ ನಾಸಾ ಕಾರ್ಗೋವನ್ನು ಪೂರೈಸುತ್ತಿರುವ 41 ವರ್ಷದ ಎಲಾನ್ ಮಸ್ಕ್ ಅವರು ರಾಯಲ್ ಏರೋನಾಟಿಕಲ್ ಸೊಸೈಟಿ ಜೊತೆ ಮಾತನಾಡುತ್ತ, ತಮ್ಮ 10 ವರ್ಷಗಳ ಕನಸಿನ ಬಗ್ಗೆ ಹಂಚಿಕೊಂಡಿದ್ದಾರೆ.
"ಮೊದಲಾಗಿದ್ದರೆ ಅಂತಹ ರಾಕೆಟ್ ಮತ್ತು ಮೂಲಭೂತ ಸೌಕರ್ಯಗಳು ಇರಲಿಲ್ಲ. ಮಂಗಳಕ್ಕೆ ಉಪಗ್ರಹ ಉಡಾಯಿಸುವ ಬಗ್ಗೆ ನಾಸಾಗೇ ಕಾಲಮಿತಿ ಇರಲಿಲ್ಲ. ಆದರೆ, ಈಗ ಕಾಲ ಅಂದಿನಂತಿಲ್ಲ. ನನ್ನಂತೆಯೇ ಅನೇಕ ಖಾಸಗಿ ಸಂಸ್ಥೆಗಳು ಈ ಕನಸನ್ನು ಕಂಡಿವೆ. ಈ ಕನಸು ನನಸಾಗುವುದು ದೂರವೇನಿಲ್ಲ" ಎಂದು ಸೋಲಾರ್ ಸಿಟಿಯ ಚೇರ್ಮನ್ ಆಗಿರುವ ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಖಗೋಳ ಸಂಶೋಧನೆಗೆ ಮಸ್ಕ್ ಅವರು ನೀಡಿರುವ ಕಾಣಿಕೆಯನ್ನು ಪರಿಗಣಿಸಿ 146 ವರ್ಷ ಹಳೆಯ ರಾಯಲ್ ಏರೋನಾಟಿಕಲ್ ಸಂಸ್ಥೆ, ಖಗೋಳ ಸಂಶೋಧನೆಗಾಗಿ 2002ರಲ್ಲಿ 'ಸ್ಪೇಸ್‌ಎಕ್ಸ್' ಎಂಬ ಸಂಸ್ಥೆ ಸ್ಥಾಪಿಸಿರುವ ದಕ್ಷಿಣ ಆಫ್ರಿಕಾ ಮೂಲದ ಮಸ್ಕ್ ಅವರಿಗೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಚಿನ್ನದ ಪದಕ ನೀಡಿ ಗೌರವಿಸಿತ್ತು.
ಅಮೆರಿಕಾದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮತ್ತು 1.25 ಮಿಲಿಯನ್ ಪೌಂಡ್ ಆಸ್ತಿಯ ಒಡೆಯರಾಗಿರುವ ಎಲಾನ್ ಮಸ್ಕ್ ಅವರು, ಮಂಗಳನ ಅಂಗಳದಲ್ಲಿ ಸ್ಪೇಸ್ ಸಿಟಿ ನಿರ್ಮಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಅದೆಲ್ಲ ಸರಿ, ಆದರೆ, ಈ ಕೊಡುಗೆಯನ್ನು ಸಸ್ಯಾಹಾರಿಗೆ ಮಾತ್ರ ಎಂದು ಹೇಳಿದ್ದೇಕೆಂಬುದು ಸದ್ಯಕ್ಕೆ ಚಿದಂಬರ ಪ್ರಶ್ನೆಯಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications