ಕೆಜೆಪಿ ಅತೃಪ್ತ ಆತ್ಮಗಳ ಪಕ್ಷ, ಯಡಿಯೂರಪ್ಪ ಕುತಂತ್ರಿ

CT Ravi
ಚಿಕ್ಕಮಗಳೂರು, ಜ.7: ಕರ್ನಾಟಕ ಜನತಾ ಪಕ್ಷ ಎಂಬುದು ಅತೃಪ್ತ ಆತ್ಮಗಳ ಕೂಟ, ಅತೃಪ್ತ ಆತ್ಮಗಳು ಎಂದಿಗೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಯಡಿಯೂರಪ್ಪ ಅವಕಾಶವಾದಿ ರಾಜಕಾರಣಕ್ಕೆ ಜೀವಂತ ಉದಾಹರಣೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ದ್ವೇಷದಿಂದ ಪಾರ್ಟಿ ಕಟ್ಟಲು ಸಾಧ್ಯವಿಲ್ಲ. ಉದ್ದೇಶದಿಂದ ಪಾರ್ಟಿ ಕಟ್ಟಬಹುದು. ನೆಗಟಿವ್ ಆಟಿಟ್ಯೂಡ್ ಬಹಳ ಕಾಲ ಬೆಳೆಯಲು ಸಾಧ್ಯವಿಲ್ಲ ಎಂದು ರವಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಬೇರೆ ಯಾರನ್ನು ಕೂರಿಸಲು ಇಷ್ಟವಿಲ್ಲ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸಿದ್ದು ನಾನೇ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ.

ಈಗ ಬಿಜೆಪಿಯಿಂದ ಸಿಎಂ ಅಭ್ಯರ್ಥಿ ಎಂದು ಜಗದೀಶ್ ಶೆಟ್ಟರ್ ಅವರನ್ನು ಘೋಷಿಸಿರುವುದಕ್ಕೂ ಕೊಂಕು ಮಾತಿನಿಂದ ಸ್ವಾಗತ ಕೋರಿದ್ದಾರೆ. ಸುಮ್ಮನೆ ಅನಂತ್ ಕುಮಾರ್ ಅವರ ಹೆಸರೆತ್ತಿ ಆಕ್ಷೇಪಿಸುವುದು ಅವರ ಕಾಯಕವಾಗಿದೆ.

ಬಿಎಸ್ ಯಡಿಯೂರಪ್ಪ ಅವರ ಕುತಂತ್ರ ರಾಜಕಾರಣಕ್ಕೆ ಹಲವಾರು ಜನ ಬಲಿಯಾಗಿದ್ದಾರೆ. ಅವರ ಜೊತೆಗಿದ್ದರೆ ಇನ್ನಷ್ಟೂ ಜನ ಸದ್ಯದಲ್ಲೇ ಬಲಿಯಾಗುತ್ತಾರೆ ಎಂದು ಸಿಟಿ ರವಿ ಹೇಳಿದರು.

ಕೆಜೆಪಿ ಸಮಾವೇಶಕ್ಕೆ ಅಡ್ಡಿಪಡಿಸಿಲ್ಲ: ಚಿಕ್ಕಮಗಳೂರಿನಲ್ಲಿ ನಡೆದಿರುವ ಕೆಜೆಪಿ ಸಮಾವೇಶಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಿದ್ದಾರೆ. ನಗರದ ವಿವಿಧೆಡೆ ಕಟ್ಟಲಾಗಿದ್ದ ಬ್ಯಾನರ್, ಬಂಟಿಂಗ್, ಕಟೌಟ್ ಗಳನ್ನು ತೆರವುಗೊಳಿಸಿದ ಆರೋಪ ಹೊರೆಸಲಾಗಿದೆ.

ನಗರ ಪಾಲಿಕೆ ಅವರು ಅನಧಿಕೃತ ಸ್ಥಳಗಳಲ್ಲಿ ಬ್ಯಾನರ್ ಹಾಕಿದರೆ ತೆಗೆದು ಹಾಕಿರುತ್ತಾರೆ. ಇದರಲ್ಲಿ ರಾಜಕೀಯ ಏನಿದೆ ಎಂದು ರವಿ ಪ್ರಶ್ನಿಸಿದ್ದಾರೆ.

ಬಿಜೆಪಿಗೆ ಕೆಜೆಪಿ ಸಮರ್ಥವಾದ ಎದುರಾಳಿಯೇ ಅಲ್ಲ. ನಮಗೆ ಕಾಂಗ್ರೆಸ್ ಮಾತ್ರ ಪ್ರತಿಸ್ಪರ್ಧಿ ಎಂದು ರವಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+