ಕೊರಿಯ: ಸದ್ದಿಲ್ಲದೆ ಅತ್ಯಾಚಾರಿಯ ಪುರುಷತ್ವಕ್ಕೆ ಕೊಕ್

s-korea-court-orders-chemical-castration-child-molester
ಸೋಲ್ (ದಕ್ಷಿಣ ಕೊರಿಯ), ಜ.5: ಇತ್ತ ಭಾರತದಲ್ಲಿ ಭಯಾನಕ ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ಬಳಿಕ ಅತ್ಯಾಚಾರಿಗಳಿಗೆ ಗಲ್ಲು ಬೇಡ್ವೇ ಬೇಡ, ಅವನ ಪುರುಷತ್ವವನ್ನು ನಿ'ಖಾಲಿ' ಮಾಡಿಸಿ ಎಂಬ ಕೂಗು ಎದ್ದಿರುವಾಗ ಅತ್ತ ದಕ್ಷಿಣ ಕೊರಿಯದ ನ್ಯಾಯಾಲಯವು ಸದ್ದಿಲ್ಲದೆ ಅಂತಹ ದಿಟ್ಟ ಕ್ರಮಕ್ಕೆ ಆದೇಶಿಸಿದೆ.

31 ವರ್ಷ ಪ್ರಾಯದ ಆರೋಪಿ ಕಾಮಿಯೊಬ್ಬನ ರಾಸಾಯನಿಕ ಪುರುಷತ್ವಹರಣ ಮಾಡುವಂತೆ ಅಲ್ಲಿನ ನ್ಯಾಯಾಲಯ ಇತ್ತೀಚೆಗೆ ಆದೇಶ ನೀಡಿದೆ. ದಕ್ಷಿಣ ಕೊರಿಯ ಈ ಮಾದರಿಯ ಚಿಕಿತ್ಸೆಗೆ ಅನುಮೋದನೆ ನೀಡಿದ ಏಷ್ಯಾದ ಮೊದಲ ದೇಶವಾಗಿದೆ.

ಗಮನಾರ್ಹವೆಂದರೆ ಜರ್ಮನಿ, ಡೆನ್ಮಾರ್ಕ್, ಸ್ವೀಡನ್, ಪೋಲೆಂಡ್ ಮತ್ತು ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಈ ಮಾದರಿಯ ಚಿಕಿತ್ಸೆ/ಶಿಕ್ಷೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿವೆ.

ಇಷ್ಟೇ ಸಾಲದು ಅಂತ ಅವನಿಗೆ 15 ವರ್ಷಗಳ ಜೈಲುವಾಸ ಶಿಕ್ಷೆಯನ್ನೂ ವಿಧಿಸಿದೆ. 2011 ರಲ್ಲಿ ಆ ದೇಶದಲ್ಲಿ ಇಂತಹ ಕಾನೂನು ಜಾರಿಯಾಗಿದೆ. ಕಾಮುಕರ ಹಾವಳಿ ತಡೆಗಟ್ಟಲು ತಪ್ಪಿತಸ್ಥರಿಗೆ ಹಾರ್ಮೋನ್ ಚಿಕಿತ್ಸೆ ನೀಡುವುದಕ್ಕೆ ಅಥವಾ ರಾಸಾಯನಿಕ ಪುರುಷತ್ವಹರಣಕ್ಕೆ ಒಳಪಡಿಸಲು ಕಾನೂನಿನಲ್ಲಿ ಅವಕಾಶವಿದೆ.

ತಪ್ಪಿತಸ್ಥನು ಹದಿಹರೆಯದ 5 ಬಾಲಕಿಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ. 2011 ನವೆಂಬರ್ ಮತ್ತು 2012 ಮೇ ನಡುವೆ ಈ ಕುಕೃತ್ಯವೆಸಗಿದ್ದ.

'ಅಪರಾಧಿ ತುಂಬಾ ಸಮಯದಿಂದ ಬಾಲಕಿಯರ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಅವನೊಬ್ಬ ವಿಕೃತಕಾಮಿ ಹಾಗೂ ಅತಿ ಲೈಂಗಿಕ ಭಾವನೆಯುಳ್ಳವ ಹಾಗೂ ತನ್ನ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಿಕೊಳ್ಳಲು ಅವನಿಗೆ ಸಾಧ್ಯವಿಲ್ಲ' ಎಂದು ನ್ಯಾಯಾಲಯ ಭಾವಿಸಿ ಈ ಶಿಕ್ಷೆ ವಿಧಿಸಿದೆ.

ಅವನ ವಿಕೃತ ಲೈಂಗಿಕ ಕಾಮನೆಗಳಿಗೆ 200 ಗಂಟೆಗಳ ಕಾಲ ಚಿಕಿತ್ಸೆ ನೀಡಬೇಕು. ಸಾರ್ವಜನಿಕರಲ್ಲಿ ಇವನ ಬಗ್ಗೆ ಜಾಗೃತಿ ಮೂಡಿಸಬೇಕು. ಅವನ ವಿವರಗಳನ್ನು 10 ವರ್ಷಗಳ ಕಾಲ ಸಾರ್ವಜನಿಕವಾಗಿ ಪ್ರಕಟಿಸುತ್ತಿರಬೇಕು. ಜೈಲಿನಿಂದ ಅವನು ಬಿಡುಗಡೆಯಾದ ಬಳಿಕವೂ 20 ವರ್ಷಗಳ ಕಾಲ ಅವನ ಮೇಲೆ ನಿಗಾ ಇಡಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+