ಬಿಎಸ್‌ಆರ್ ಕಾಂಗ್ರೆಸ್: ಛತ್ರಿ ಆಯ್ತು, ಟೋಪಿ ಬಂತು!

ಮೊನ್ನೆಯಷ್ಟೇ 5 ಲಕ್ಷಕ್ಕೂ ಅಧಿಕ ಛತ್ರಿಗಳನ್ನು ನಾಲ್ಕಾರು ಜಿಲ್ಲೆಗಳಲ್ಲಿ ಹಂಚುವುದಾಗಿ ಘೋಷಿಸಿದ್ದ ರಾಮುಲು ಇದೀಗ ಮಿನರಲ್ ವಾಟರ್ ಮತ್ತು ಮತದಾರನ ತಲೆಗೆ ಟೋಪಿಯಿಡಲು ಮುಂದಾಗಿದ್ದಾರೆ!
ಮತದಾರರನ್ನು ಹೊಸ ರೀತಿಯಲ್ಲಿ ಆಕರ್ಷಿಸಲು ಮುಂದಾಗಿರುವ ಬಿಎಸ್‌ಆರ್ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಮಿನರಲ್ ವಾಟರ್ ಕುಡಿಸುವ ಮತ್ತು ಟೋಪಿ ಹಾಕುವ ತರಾತುರಿಯಲ್ಲಿದೆ.
ಮುಂಬೈ ಅನ್ನೇ ಹೆಚ್ಚಾಗಿ ನೆಚ್ಚಿಕೊಂಡ ರಾಮುಲು: ಮುಂಬರುವ ವಿಧಾನಸಭೆ ಚುನಾವಣೆಗಾಗಿ ಶ್ರೀರಾಮುಲು ಹೆಚ್ಚಾಗಿ ಮುಂಬೈ ಕಂಪನಿಗಳನ್ನೇ ನೆಚ್ಚಿಕೊಂಡಿದ್ದಾರೆ. ಮಿನರಲ್ ವಾಟರ್ ಬಾಟಲಿಗಳು, ಟೋಪಿಗಳು ಮತ್ತು ಛತ್ರಿಗಳ ಮೇಲೆ ಪಕ್ಷದ ಹೆಸರನ್ನು ಢಾಳಾಗಿ ಮುದ್ರಿಸಲಾಗಿದೆ. ಇದರಿಂದ ಮತದಾರನ ಮನದಲ್ಲಿ ಅಚ್ಚಳಿಯದೆ ಉಳಿಯುವುದು ರಾಮುಲು ಎಲೆಕ್ಷನ್ ಗೇಮ್ ಪ್ಲಾನ್ ಆಗಿದೆ.
ಮುಂದೆ ಟೀ ಶರ್ಟ್ ಸಹಿತ ಜನ ಬಳಕೆಯ ಇನ್ನೂ 40 ಸಾಮಗ್ರಿಗಳು ಮತದಾರನನ್ನು ತಲುಪಲಿವೆ. ಆದರೆ ಮತದಾರ ಯಾರಿಗೆ ಕೊಡೆ ಹಿಡಿಯಲಿದ್ದಾನೆ, ಯಾರಿಗೆ ನೀರು ಕುಡಿಸಲಿದ್ದಾನೆ, ಯಾರಿಗೆ ಟೋಪಿ ಹಾಕಿದ್ದಾನೆ ಎಂಬುದನ್ನು ತಿಳಿಯಲು ಮತದಾನ ದಿನದವರೆಗೂ ಕಾಯಬೇಕಿದೆ.












Click it and Unblock the Notifications