ಬಿಜೆಪಿಗೆ ಮತ್ತೊಂದು ಆಘಾತ: 10ಕ್ಕೆ ಚೌಹಾಣ್ ರಾಜೀನಾಮೆ

ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ, ಜಿಲ್ಲೆಯ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ಇದೇ ಜನವರಿ 10ರಂದು ವಿಧ್ಯುಕ್ತವಾಗಿ ಬಿಜೆಪಿಗೆ ಗುಡ್ ಬೈ ಹೇಳಿ, ಕೆಜೆಪಿ ಸೇರಿಕೊಳ್ಳುವುದಾಗಿ ಇಂದು (ಜ. 2) ಪ್ರಕಟಿಸಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಜತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಶಾಸಕ ಪ್ರಭು ಚೌಹಾಣ್ ತಮ್ಮ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳು ಅಭಿವೃದ್ಧಿ ಕಾಣುತ್ತಿಲ್ಲ. ಹಾಗಾಗಿ ಬಿಜೆಪಿ ಬಿಡುತ್ತಿರುವುದಾಗಿ ಘೋಷಿಸಿದರು.
ಕಳೆದ ವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬಸವಕಲ್ಯಾಣದ ಶಾಸಕ ಬಸವರಾಜ ಪಾಟೀಲ್ ಅಟ್ಟೂರ್ ಅವರು ರಾಜೀನಾಮೆ ನೀಡಿದ್ದರು.
ಈ ಮಧ್ಯೆ, ಬಿಜೆಪಿ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಕೆಜೆಪಿ ಸದ್ಯದಲ್ಲೇ ವಾಪಸ್ ಪಡೆಯಲಿದೆ. ಕೆಜೆಪಿ ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ. ಇದರಿಂದ ಬಿಜೆಪಿ ಸರಕಾರ ಅಲ್ಪ ಮತಕ್ಕೆ ಕುಸಿಯಲಿದೆ ಎಂದು ಹಾವೇರಿಯಲ್ಲಿ ಶಾಸಕ ನೆಹರೂ ಓಲೇಕಾರ್ ಬುಧವಾರ ತಿಳಿಸಿದ್ದಾರೆ.











Click it and Unblock the Notifications