ಚಂದ್ರಾವತಿ ವೆಂಕಟೇಶಮೂರ್ತಿ ದಂಪತಿ ಮನೆ ಮೇಲೆ ದಾಳಿ

ಮಾಜಿ ಸಚಿವ, ಬಿಜೆಪಿಯ ಹಾಲಪ್ಪ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ (2010ರ ಮೇನಲ್ಲಿ) ಚಂದ್ರಾವತಿಯ ಪತಿ ವೆಂಕಟೇಶ್ ಮೂರ್ತಿ ಅವರ ಮೇಲೆ ಈ ಸಂದರ್ಭದಲ್ಲಿ ಹತ್ಯಾಯತ್ನವೂ ನಡೆದಿದೆ ಎನ್ನಲಾಗಿದೆ. ಈ ಹಲ್ಲೆ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನಿನ್ನೆ ರಾತ್ರಿ 9.30ಕ್ಕೆ ಚಂದ್ರಾವತಿ-ವೆಂಕಟೇಶ್ ಮೂರ್ತಿ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ವೆಂಕಟೇಶ್ ಮೂರ್ತಿ ಮೇಲೆ ಹತ್ಯಾಯತ್ನ ನಡೆಸಿದೆ. ಆದರೆ ಅಪಾಯದ ಸುಳಿವರಿತ ವೆಂಕಟೇಶ್ ಮೂರ್ತಿ ಎದ್ನೋ ಬಿದ್ನೋ ಎಂದು ಮನೆಯೊಳಕ್ಕೆ ಓಡಿಹೋಗಿ ಬಾಗಿಲು ಭದ್ರ ಪಡಿಸಿಕೊಂಡಿದ್ದಾರೆ.
ಇತ್ತ ದುಷ್ಕರ್ಮಿಗಳು ಸಿಟ್ಟು, ಆಕ್ರೋಶದಿಂದ ಮನೆಯ ಮುಂದೆ ನಿಲ್ಲಿಸಿದ್ದ ಫೋರ್ಡ್ ಕಾರಿಗೆ ರಾಡ್ ನಿಂದ ಹೊಡೆದು, ಜಖಂಗೊಳಿಸಿದ್ದಾರೆ. ನಂತರ ಕ್ಷಣಾರ್ಧದಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.












Click it and Unblock the Notifications