ಕ್ರಿಕೆಟ್ಟಿಗ, ಕಾಮೆಂಟೇಟರ್ ಟೋನಿ ಗ್ರೆಗ್ ಕ್ಯಾನ್ಸರಿಗೆ ಬಲಿ
ಸಿಡ್ನಿ,
ಡಿ.29: ಮತ್ತೊಂದು ಸಾವಿನ ಸುದ್ದಿ ಬಂದಿದೆ. ಭಾರತ ಕ್ರಿಕೆಟ್ ತಂಡದ 'ಯುವರಾಜ' ಸಿಂಗ್ ಕ್ಯಾನ್ಸರ್ ಅನ್ನು ಗೆದ್ದು ಬಂದಿದ್ದರೆ ಅತ್ತ ಮಾಜಿ ಕ್ರಿಕೆಟ್ಟಿಗ, ಖ್ಯಾತ ಕಾಮೆಂಟೇಟರ್ ಟೋನಿ ಗ್ರೆಗ್ ಇಂದು ಕ್ಯಾನ್ಸರಿಗೆ ಬಲಿಯಾಗಿದ್ದಾರೆ. id="toptextpromo">ಇಂಗ್ಲಂಡ್
ತಂಡದ ಮಾಜಿ ಕ್ಯಾಪ್ಟನ್ ಖ್ಯಾತ ಕ್ರಿಕೆಟ್ ಆಟಗಾರ, 66 ವರ್ಷದ ಟೋನಿ ಗ್ರೆಗ್ ಅವರು ಕ್ಯಾನ್ಸರ್ ಹೆಮ್ಮಾರಿಗೆ ಪ್ರಾಣತೆತ್ತಿದ್ದಾರೆ. ತಮಗೆ ಕ್ಯಾನ್ಸರ್ ಇದೆ ಎಂಬುದು ಟೋನಿ ಗ್ರೆಗ್ ಅವರಿಗೆ ಕಳೆದ ಆಗಸ್ಟಿನಲ್ಲಿ ತಿಳಿದಿತ್ತು. id='are-slot-1' class='oiad oi-axt oiadv'> id='top-searched-articles'>ಕ್ರಿಕೆಟ್
ಗೆ ವಿದಾಯ ಹೇಳಿದ ಬಳಿಕ ತಮ್ಮ ಕಂಚಿನ ಕಂಠದ ಮೂಲಕ ವೀಕ್ಷಕ ವಿವರಣೆ ನೀಡುತ್ತಾ ಕ್ರಿಕೆಟ್ ಆಟಕ್ಕೆ ತಮ್ಮ ಸೇವೆಯನ್ನು ಮುಂದುವರಿಸಿದ್ದ ಟೋನಿ ಗಂಟಲು ಕ್ಯಾನ್ಸರಿಗೆ ಪ್ರಾಣತೆತ್ತಿದ್ದು ವಿಪರ್ಯಾಸವೇ ಸರಿ.











Click it and Unblock the Notifications