ಸಿ ಎಂ ಇಬ್ರಾಹಿಂ ಇನ್ನೂ ಬದುಕಿದ್ದಾನೆ,ದೇವೇಗೌಡ ಲೇವಡಿ

Former PM Deve Gowda statement in Koppal against C M Ibrahim
ಕೊಪ್ಪಳ, ಡಿ 28: ಪಕ್ಷ ಕಷ್ಟದಲ್ಲಿದ್ದಾಗ ಬಹಳಷ್ಟು ಜನ ನನ್ನ ನೆರವಿಗೆ ಬಂದರು. ಎಂ ಪಿ ಪ್ರಕಾಶ್ ಅವರ ನಿಧನ ನನ್ನನ್ನು ಕಾಡುತ್ತಿದೆ, ಸಿದ್ದರಾಮಯ್ಯ ಕೂಡಾ ಪಕ್ಷ ಸಂಘಟನೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರು.

ಈ ದೇವೇಗೌಡ ಹೀಗೆ ಹೇಳುತ್ತಿದ್ದೇನೆ ಎಂದು ತಪ್ಪು ತಿಳ್ಕೊಬೇಡಿ, ಆ ಸಿ ಎಂ ಇಭ್ರಾಹಿಂ ಇನ್ನೂ ಬದುಕಿದ್ದಾನೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವ್ಯಂಗ್ಯವಾಡಿದ್ದಾರೆ.

ಪಕ್ಷ ಸಂಘಟನೆಗೆ ನೆರವಾದವರನ್ನು ಸ್ಮರಿಸಿಕೊಳ್ಳುತ್ತಾ ಮಾತನಾಡುತ್ತಿದ್ದ ದೇವೇಗೌಡ, ಬಸವರಾಜ ರಾಯರೆಡ್ಡಿ ನನ್ನ ಜೊತೆ ಓಡಾಡಿಕೊಂಡಿದ್ದ, ಈಗ ಪಕ್ಷ ಬಿಟ್ಟು ಓಡಿ ಹೋಗಿದ್ದಾನೆ. ಈಗ ಎಲ್ಲಿದ್ದಾನೋ ಗೊತ್ತಿಲ್ಲ ನಾಪತ್ತೆಯಾಗಿದ್ದಾನೆ ಎಂದು ದೇವೇಗೌಡ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಜೆಡಿಎಸ್ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ದೇವೇಗೌಡ, ನನಗೆ ಲಿಂಗಾಯಿತ ವಿರೋಧಿ ಪಟ್ಟ ಕಟ್ಟಿದ್ದಕ್ಕೆ ನೋವಿದೆ.

ಈ ರಾಜಕೀಯದಲ್ಲಿ ಬಹಳಷ್ಟು ನೋವು, ಅವಮಾನ ಅನುಭವಿಸಿದ್ದೇನೆ. ಅದನ್ನೆಲ್ಲಾ ನನ್ನ ಆತ್ಮಚರಿತ್ರೆಯಲ್ಲಿ ಬರೆದಿದ್ದೇನೆ. ನಾನು ಬರೆಯುತ್ತಿರುವ ಆತ್ಮಚರಿತ್ರೆ ದೇಶದ ಯುವ ಪೀಳಿಗೆಗಾಗಿ ಎಂದು ದೇವೇಗೌಡ ಹೇಳಿದ್ದಾರೆ.

ನಾನು ಒಕ್ಕಲಿಗ ಸಮುದಾಯಕ್ಕೆ ಮೀಸಲು ಎಂದು ನನ್ನನ್ನು ಬಿಂಬಿಸಲಾಗುತ್ತಿದೆ. ಈ ಹಿಂದೆ ನನ್ನನ್ನು ಸೋಲಿಸಿದ್ದ ಪಿ ಜಿ ಆರ್ ಸಿಂಧ್ಯಾ ಅವರನ್ನು ರಾಜ್ಯದ ಗೃಹ ಮಂತ್ರಿಯನ್ನಾಗಿ ಮಾಡಿದ್ದೆ.

ನನ್ನನ್ನು ಜಾತಿವಾದಿ ಎನ್ನುವುದಕ್ಕೆ ಮುಂದೊಂದು ದಿನ ಕಾಲ ಉತ್ತರ ನೀಡುತ್ತದೆ ಎಂದು ದೇವೇಗೌಡ ಹೇಳಿದ್ದಾರೆ.

ಲಾಭದ ಉದ್ದೇಶ ಇಟ್ಟುಕೊಂಡು ಜೆಡಿಎಸ್ ಪಕ್ಷಕ್ಕೆ ಬರಬೇಡಿ. ಪಕ್ಷ ನಿಷ್ಠೆ, ಸಮಾಜಸೇವೆ ಮಾಡುವ ಇಚ್ಛೆ ಇದ್ದರೆ ಮಾತ್ರ ಪಕ್ಷಕ್ಕೆ ಬನ್ನಿ.

ರಾಜ್ಯದ ಜನತೆಗಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕೆನ್ನುವ ವ್ಯಾಮೋಹವನ್ನು ಒಗ್ಗೂಡಿಸಿಕೊಳ್ಳಿ ಎಂದು ದೇವೇಗೌಡ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+