ಕೆಜೆಪಿ ಶಾಸಕರ ತಪ್ಪೊಪ್ಪಿಗೆ, ಬಿಜೆಪಿಗೆ ವಾಪಸ್: ಈಶ್ವರಪ್ಪ

ಅನೇಕರು ವಾಪಸಾಗುವ ಸುಳಿವು: ಬೈಂದೂರು ಲಕ್ಷ್ಮಿನಾರಾಯಣ, ಕಡೂರು ವಿಶ್ವನಾಥ್, ಬ್ಯಾಡಗಿ ಸುರೇಶ್ ಗೌಡ ಅವರು ತಪ್ಪೊಪ್ಪಿಗೆ ನೀಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿಲ್ಲ.
ನಮ್ಮದು ಬಹುದೊಡ್ಡ ರಾಷ್ಟ್ರೀಯ ಪಕ್ಷ. ಸಣ್ಣಪುಟ್ಟ ಮನಸ್ತಾಪಗಳು ನಡೆಯುವುದು ಸಹಜ. ಆದರೆ ತಮ್ಮ ತಪ್ಪು ತಿಳಿದುಕೊಂಡು ವಾಪಸಾಗುವ ಮಾತನಾಡಿದರೆ ಅವರಿಗೆ ಸ್ವಾಗತ ಇದ್ದೇಇರುತ್ತದೆ. ಇನ್ನೂ ಅನೇಕ ಮಂದಿ ವಾಪಸಾಗುವ ಸುಳಿವು ನೀಡಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ವ್ಯಂಗ್ಯ: ಇದಕ್ಕೆ ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು ಈಶ್ವರಪ್ಪ ಬಹುದೊಡ್ಡ ನಾಯಕರು. ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.












Click it and Unblock the Notifications