ಈ ಜನ್ಮದಲ್ಲಿ ಬಿಜೆಪಿಗೆ ಮರಳುವುದಿಲ್ಲ : ಬಿಎಸ್ ವೈ

BS Yeddyurappa Press meet Mysore
ಮೈಸೂರು, ಡಿ.13: 'ನಾನು ಈ ಜನ್ಮದಲ್ಲಿ ಮತ್ತೆ ಬಿಜೆಪಿ ಮರಳುವುದಿಲ್ಲ. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆಯೇ ಇಲ್ಲ. ಮುಂಬರುವ ಚುನಾವಣೆಯಲ್ಲಿ ಒಂದು ವೇಳೆ ಕೆಜೆಪಿ ಸೋಲು ಕಂಡರೆ, ಬಿಜೆಪಿಗೆ ಮರಳುತ್ತೀರಾ? ಎಂದು ಅನೇಕ ಬಾರಿ ಪ್ರಶ್ನೆ ಕೇಳಲಾಗಿದೆ. ನನ್ನದು ಒಂದೇ ಉತ್ತರ ಬಿಜೆಪಿಗೆ ಮರಳುವುದಿಲ್ಲ' ಎಂದು ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಖಡಕ್ ಆಗಿ ಹೇಳಿದ್ದಾರೆ.

ಮಂಗಳೂರಿನಿಂದ ಮೈಸೂರಿಗೆ ಬಂದಿರುವ ಯಡಿಯೂರಪ್ಪ ಅವರು ಗುರುವಾರ(ಡಿ.13) ಸುದ್ದಿಗೋಷ್ಠಿ ನಡೆಸಿದರು. ಇದಕ್ಕೂ ಮುನ್ನ ತಮ್ಮ ಬೆಂಬಲಿಗರ ಜೊತೆಗೆ ಮಾರ್ಗಮಧ್ಯದಲ್ಲಿ ಸಿಗುವ ಪ್ರಮುಖ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಂದರು.

ಮೊದಲಿಗೆ ಕೆಜೆಪಿ ಪ್ರಧಾನ ಕಾರ್ಯದರ್ಶಿ ಎಂಡಿ ಲಕ್ಷ್ಮಿ ನಾರಾಯಣ ಹಾಗೂ ಧನಂಜಯ್ ಕುಮಾರ್ ಅವರನ್ನು ಹಾಡಿ ಹೊಗಳಿದ ಯಡಿಯೂರಪ್ಪ, ಈ ಇಬ್ಬರು ಮಿತ್ರರು ಕೆಜೆಪಿ ಗಾಡಿಯನ್ನು ಮೊದಲಿಗೆ ಓಡಿಸಿದ್ದು, ಇವರ ನೆರವಿನಿಂದ ಕೆಜೆಪಿ ಇಂದು ಮನೆ ಮಾತಾಗಿದೆ. ಹಾವೇರಿಯಲ್ಲಿ ಬೃಹತ್ ಸಮಾವೇಶ ಸಾಕಾರಗೊಂಡಿದೆ ಎಂದರು.

ಪ್ರಾದೇಶಿಕ ಪಕ್ಷದ ಮಹತ್ವ: ನೀರಿಗಾಗಿ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶಗಳತ್ತ ತಿರುಗಿ ಭಿಕ್ಷೆ ಬೇಡಬೇಕು, ಕೇಂದ್ರದ ನಾಯಕರಿಗೆ ಸಲಾಂ ಹೊಡೆಯುತ್ತಿರಬೇಕು.

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಮತ್ತೆ ಭಿಕ್ಷಾ ಪಾತ್ರೆ ಹಿಡಿದುಕೊಂಡು ತಿರುಗಬೇಕು. ಹೋಗಲಿ ಕಲ್ಲಿದ್ದಲು ನೀಡಿ ನಾವೇ ಬೇಕಾದಷ್ಟು ಉತ್ಪಾದನೆ ಮಾಡುತ್ತೇವೆ ಎಂದರೆ ಅದಕ್ಕೂ ಕೇಂದ್ರ ಸರ್ಕಾರ ಕಲ್ಲು ಹಾಕಿಬಿಟ್ಟಿತು.

ರಾಜ್ಯದ ಸಮಸ್ಯೆಯನ್ನು ಸಮರ್ಥವಾಗಿ ಬಿಂಬಿಸಲು ರಾಷ್ಟ್ರೀಯ ಪಕ್ಷಗಳು ಅಸಮರ್ಥವಾಗಿರುವುದೇ ಇದಕ್ಕೆಲ್ಲ ಕಾರಣ. ಪ್ರಾದೇಶಿಕ ಪಕ್ಷ ಬಲಿಷ್ಠವಾಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಕರ್ನಾಟಕ ಸ್ವಾವಲಂಬಿಯಾಗಬೇಕು.

ಆಗ ಕೇಂದ್ರ ಕೂಡಾ ತಲೆ ಬಾಗಿ ಹೆಚ್ಚು ಅನುದಾನ ನೀಡುತ್ತದೆ. ಪರರ ಮುಂದೆ ಕೈ ಚಾಚುವುದು ತಪ್ಪುತ್ತದೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಪಣ ತೊಟ್ಟಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಮಿಕ್ಕಂತೆ ಅದೇ ಹಳೆ ರಾಗ : ಯಡಿಯೂರಪ್ಪ ಅವರ ಭಾಷಣದ ಪ್ರತಿ ಹಾವೇರಿ ಭಾಷಣದ ಪ್ರತಿಯ ನಕಲಿನಂತೆ ಇತ್ತು. ಪುರಸಭೆ ಅಧ್ಯಕ್ಷ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದು, ಕೃಷಿ, ರೈತರ ಅಭಿವೃದ್ಧಿ. ನಾನು ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ರೈತ ಪರ ಬಜೆಟ್....ಕಾರ್ಯಕರ್ತರ ಬೆಂಬಲದಿಂದ ನಾನು ಬೆಳದಿದ್ದು...

32 ಲಕ್ಷದಿಂದ 1 ಲಕ್ಷ ಕೋಟಿ ಬಜೆಟ್ ಮಂಡನೆ. 7 ವಿವಿ ಆರಂಭಿಸಿದೆ.. ಪ್ರತಿ ನಗರಗಳಿಗೂ ಕೋಟಿಗಟ್ಟಲೇ ದುಡ್ಡು ನೀಡಿದೆ. ಬಸವಕಲ್ಯಾಣದಿಂದ ಮತ್ತೆ ಯಾತ್ರೆ ಆರಂಭ..ಇತ್ಯಾದಿ ಇತ್ಯಾದಿ ಮಾತುಗಳನ್ನು ಪುನರುಚ್ಚರಿಸಿದರು.

engough is enough: ಮತ್ತೆ ಬಿಜೆಪಿ ವಿಚಾರ ಕೈಗೆತ್ತಿಕೊಂಡ ಬಿಎಸ್ ವೈ, enough is enough ನಾನು ಯಾರ ಮೇಲಿನ ದ್ವೇಷ ಸಾಧಿಸಲು ಪಕ್ಷ ಕಟ್ಟಿಲ್ಲ.

ಹಳೆಯದನ್ನು ಮರೆತುಬಿಡೋಣ. ಹಿಂದೆ ಇದ್ದ ಪಕ್ಷದ ಬಗ್ಗೆ ಮಾತನಾಡುವುದು ಅನವಶ್ಯಕ. ನಮ್ಮ ಮುಂದೆ ಸಾಕಷ್ಟು ಕೆಲಸಗಳಿದೆ. ಕೆಜೆಪಿಗೆ ಮೆಜಾರಿಟಿ ಬರಲಿದೆ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ. ಯಾವ ಪಕ್ಷಗಳ ಜೊತೆ ಕೈಜೋಡಿಸಿಲ್ಲ ಎಂದು ಯಡಿಯೂರಪ್ಪ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+