ಕು. ಜಯಾ ಮದ್ವೇ ಆಗ್ದಿರೋದೆ ಕಾವೇರಿ ರಗಳೆಗೆ ಕಾರಣ

ಈ ಮಧ್ಯೆ, ಕಾವೇರಿ ನೀರಿನ ಬಗ್ಗೆ ಇಷ್ಟೆಲ್ಲ ರಗಳೆ/ರಚ್ಚೆ ಯಾಕಾಗುತ್ತಿದೆ. ಸುಪ್ರೀಂಕೋರ್ಟ್ ಸಹ ಕರ್ನಾಟಕಕ್ಕೆ ಮಾರಕವಾಗಿದೆಯಾ? ನಮ್ಮ ಕನ್ನಡದ ಹೆಣ್ಣುಮಗಳೇ ಯಾಕೆ ಈ ಪಾಟಿ ರಾದ್ಧಾಂತ ಮಾಡುತ್ತಾಳೆ ಎಂಬೆಲ್ಲ ವಿಚಾರಗಳು ಕಾವೇರಿ ತಟದ ರೈತನನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ತಮಿಳುನಾಡು ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಅವರು ಮೊನ್ನೆ ಲೀಲಾ ಪ್ಯಾಲೆಸ್ಸಿಗೆ ಬಂದಿದ್ದರು. ಆವಾಗ 'ಯಾಕವ್ವಾ ಹೀಗೆಲ್ಲ ಮಾಡ್ತಿ? ನಮ್ಗೆ ಹೆಂಡ್ರು ಮಕ್ಕಳು ಅವ್ರೆ. ನಮ್ಮ ಸಂಸಾರಗಳು ಏನಾಗಬೇಕು? ಎಂದು ನೀರಿಗೆ ಬಂದವಳನ್ನು ಕೇಳಬೇಕು ಎಂದು ಕಾವೇರಿ ರೈತರಿಗೆ ಅನ್ನಿಸಿದ್ದು ಸುಳ್ಳಲ್ಲ. ಆದರೆ ಆಕೆಯ ಜಬರದಸ್ತು ನೋಡಿ ಸಜ್ಜನ ಶೆಟ್ಟರ್ ಅವರೇ ಬಾಯ್ಮುಚ್ಚಿಕೊಂಡು ಬಿಟ್ಟರು.
ಅಂಥಾದ್ದರಲ್ಲಿ ಮೈಸೂರು ಕಡೆಯ ಹಿರಿಯ ರಾಜಕಾರಣಿ ಸಿದ್ದರಾಮಯ್ಯನೋರು 'ಜಯಲಲಿತಾ ಮೊಂಡಾಟ ಆಡುತ್ತಿರುವುದ ಏಕೆ' ಎಂದು ನಿನ್ನೆ ಬೆಳಗಾವಿಯಲ್ಲಿ ಶ್ಯಾನೆ ಅಧ್ಯಯನ ಮಾಡಿ ಉತ್ತರ ಕಂಡುಕೊಂಡಿದ್ದಾರಂತೆ.
ಅಲ್ರಪ್ಪ, ಅಯಮ್ಮ ಮದುವೆ ಆಗದಿರೋದೆ ಕಾವೇರಿ ತಗಾದೆಗೆ ಕಾರಣ. and you know that Jayalalitha is Unreasonable Woman ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಂಡುಕೊಂಡ ಹೊಸ ಸಿದ್ಧ ಸಿದ್ಧಾಂತ. ಮತ್ತು ಇದನ್ನು ವಿಧಾನಸೌಧದಲ್ಲೇ ಹೇಳಿದ್ದಾರೆ.
'ಜಯಾ ರಂಪಾಟ ನೋಡಿದರೆ ಇದು ನಿಜವಿರಲೂಬಹುದು' ಎಂದು ಅದೇ ಮಂಡ್ಯ ಕಡೆ ರೈತರು ಸಿದ್ದರಾಮಯ್ಯನವರ ಮಾತಿಗೆ ಧ್ವನಿಗೂಡಿಸಿದ್ದಾರೆ.
ಅದ್ಸರಿ, ಇದೇನಾದರೂ ಕುಮಾರಿ ಜಯಾ ಕಿವಿಗೆ ಬಿದ್ದು ಯಾವೋನೋ ಅವನು ನನ್ನ personal ವಿಷಯಗಳ ಬಗ್ಗೆ ಮಾತ್ನಬಾಡ್ತಿರೋದು ಎಂದು ತಿರುಗಿಬಿದ್ದರೆ ಸಿದ್ರಾಮಣ್ಣ ಕಥೇಯೇನು?












Click it and Unblock the Notifications