ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡೀಪುರ ಅಭಯಾರಣ್ಯದಲ್ಲಿ ಮಂಗನ ಕಾಯಿಲೆ?

By Prasad
|
Google Oneindia Kannada News

Monkey disease in Bandipur wildlife sanctuary
ಮೈಸೂರು, ನ. 28 : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಮಂಗನ ಕಾಯಿಲೆ ಹರಡಿರುವ ಶಂಕೆ ವ್ಯಕ್ತವಾಗಿದ್ದು, ಇದಕ್ಕೆ ಕಳೆದೊಂದು ವಾರದಲ್ಲಿ ಅಲೆಗೌಡನಕಟ್ಟೆ ಬೇಟೆ ನಿಗ್ರಹ ಕ್ಯಾಂಪ್‌ನಲ್ಲಿ ಎಂಟು ಬಾನೆಟ್ ಮಕಾಕ್ ಹಾಗೂ ಎರಡು ಲಂಗೂರ್ ಸಾವನ್ನಪ್ಪಿವೆ. ಸುಮಾರು ಐದಕ್ಕೂ ಹೆಚ್ಚು ಮಂದಿ ವನಪಾಲಕರು ಅಸ್ವಸ್ಥಗೊಂಡಿರುವುದು ಕೂಡ ಶಂಕೆ ವ್ಯಕ್ತವಾಗಲು ಕಾರಣವಾಗಿದೆ.

ಕೋತಿಗಳ ಸಾವಿಗೆ ಸಂಬಂಧಿಸಿದಂತೆ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲೊಜಿಗೆ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರಿನರಿ ಬಯೋಲಾಜಿಕಲ್ಸ್ ಮೂಲಕ ಕಳಿಸಲಾಗಿದೆ ಎಂದು ತಿಳಿದು ಬಂದಿದೆ.

ಕ್ಯಾಂಪ್‌ನಲ್ಲಿ ಕೆಲಸ ಮಾಡುತ್ತಿದ್ದ 5 ಅರಣ್ಯ ಸಿಬ್ಬಂದಿ ಅಸ್ವಸ್ಥವಾಗಿರುವ ಹಿನ್ನೆಲೆಯಲ್ಲಿ ಅವರಿಗೂ ಕಾಯಿಲೆ ಹರಡಿರುವ ಶಂಕೆಯಿರುವುದರಿಂದ ಅವರ ರಕ್ತ ಮಾದರಿಗಳನ್ನೂ ಕಳಿಸಲಾಗಿದ್ದು, ಅವರಿಗೆ ಗುಂಡ್ಲಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅರಣ್ಯ ಸಿಬ್ಬಂದಿಗೆ ಉಣ್ಣಿ ಹುಳದಿಂದ ದೂರವಿಡಲು ಡಿಎಂಪಿ ಎಣ್ಣೆ ಹಚ್ಚಿಕೊಳ್ಳುವುದಾಗಿ ಹಾಗೂ ಕೋತಿಗಳು ಸತ್ತ ತಕ್ಷಣ ಮೆಥಲಿನ್ ಸ್ಪ್ರೇ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ. ಈಗಾಗಲೇ ಶಿವಮೊಗ್ಗ ವಿಡಿಎಲ್‌ನಿಂದ ತಜ್ಞರ ತಂಡ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಣೆ ಮಾಡಿದ್ದು, ಮಂಗನ ಕಾಯಿಲೆ ಹರಡಿರುವುದು ಖಚಿತವಾದಲ್ಲಿ ಅರಣ್ಯ ಸಿಬ್ಬಂದಿಗೆ ಹಾಗೂ ಸ್ಥಳೀಯರಿಗೆ ಚುಚ್ಚುಮದ್ದು ನೀಡಲು ಕ್ರಮ ಕೈಗೊಳ್ಳಲಿದ್ದಾರೆ.

English summary
Five forest personnel have fallen sick due to suspected monkey disease in Bandipur wildlife sanctuary in Mysore district. Death of 10 monkeys too have died in the forest area. Blood sample has been sent to Pune for verification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X