ವಿಚಿತ್ರ ಪ್ರೇಮಿಯ ವಿಶಿಷ್ಟ ವಿಭಿನ್ನ ದುರಂತಮಯ ಕಥೆ!
ಇದು ವಿಶಿಷ್ಟ, ವಿಭಿನ್ನ, ದುರಂತಮಯ ಕಥೆ. 38 ವರ್ಷದ ರಮಾಜಾನ್ ನೋಯನ್ ಕುಲುಂ ತನ್ನ ಕನಸಿನ ಕನ್ಯೆಯನ್ನು ನೋಡಲೆಂದು, ಆಕೆಯ ವಿಳಾಸ ಹುಡುಕಿ, ಏಳು ತಿಂಗಳುಗಳ ಕಾಲ 2,500 ಕಿ.ಮೀ ದೂರ ಸಮುದ್ರದಲ್ಲಿ ಕ್ರಮಿಸಿ ಬಂದಿದ್ದಾನೆ. ಇಷ್ಟು ದೂರ ಬಂದ ಪ್ರಣಯರಾಜನಿಗೆ ಕಡೆಗೆ ಸಿಕ್ಕಿದ್ದೇನು? ಪಾಸ್ಪೋರ್ಟ್, ವೀಸಾ ಇಲ್ಲದ್ದರಿಂದ ಜೈಲುವಾಸ ಮತ್ತು 'ಇವ ಯಾವ ಸೀಮೆ ರಾಜ' ಎಂಬ ಕನಸಿನ ಕನ್ಯೆಯ ತಿರಸ್ಕಾರ!
ಮೊಬೈಲ್ ಫೋನ್ ಗೇಮ್ ಕಂಪನಿಯ ಸಿಇಓ ಆಗಿರುವ ಕುಲಂ, ಏಳು ವರ್ಷಗಳ ಹಿಂದೆ ಸೈಪ್ರಸ್‌ನಲ್ಲಿ ರಜೆಗೆಂದು ಕಾಲ ಕಳೆಯಲು ಬಂದಾಗ, ಹೋಟೆಲಿನಲ್ಲಿ ಸರ್ವ್ ಮಾಡುತ್ತಿದ್ದ ಕರ್ಟ್ನಿ ಮರ್ರಿ ಎಂಬ ಸುಂದರಿಯನ್ನು ನೋಡಿ ಸೋತುಹೋಗಿದ್ದಾನೆ. ಪ್ರೇಮಿಸಿದರೆ ಅಥವಾ ಮದುವೆಯಾದರೆ ತನ್ನ ಕನಸಿನ ಕನ್ಯೆ ಕರ್ಟ್ನಿಯನ್ನೇ ಮದುವೆಯಾಗಬೇಕು ಎಂದು ಆತ ಆಗಲೇ ನಿರ್ಧರಿಸಿದ್ದ.
ಕೆಲ ದಿನಗಳಲ್ಲಿ ಆಕೆ ಬ್ರಿಟನ್ನಿಗೆ ಮರಳಿದ್ದಾಳೆ. ಆದರೆ, ಈತ ಬಿಡಬೇಕಲ್ಲ. ಆಕೆಯನ್ನು ಹುಡುಕಲು ಪ್ರಾರಂಭಿಸಿದ್ದಾನೆ. ಕೊನೆಗೆ, ಎಲ್ಲ ವ್ಯಕ್ತಿಗಳ ಅಲ್ಟಿಮೇಟ್ ತಾಣವಾಗಿರುವ ಫೇಸ್‌ಬುಕ್‌ನಲ್ಲಿ ಆಕೆಯನ್ನು ಹುಡುಕಿಬಿಟ್ಟಿದ್ದಾನೆ. ಆಗ ಆತನ ಆನಂದಕ್ಕೆ ಪಾರವೇ ಇರಲಿಲ್ಲ. ಫೇಸ್ ಬುಕ್ ನಲ್ಲಿ ತನ್ನ ಕನಸಿನ ಕನ್ಯೆಯ ವಿಳಾಸ ದೊರೆಯದಿದ್ದರೂ ಇವನು ಬಿಟ್ಟಿಲ್ಲ.
'ಕರ್ಟ್ನಿ ಮರ್ರಿಗಾಗಿ ಉಪವಾಸ ಸತ್ಯಾಗ್ರಹ' ಎಂಬ ಶೀರ್ಷಿಕೆಯ ಬ್ಲಾಗ್ ರಚಿಸಿದ್ದಾನೆ. ಅಲ್ಲಿ ತನ್ನ ಫೋಟೋ ಹಾಕಿಕೊಂಡು, "ಐ ಲವ್ ಯೂ ಮರ್ರಿ, ನನ್ನನ್ನು ಮದುವೆಯಾಗ್ತೀಯಾ?" ಎಂದು ಪ್ರಶ್ನಿಸಿ ಸಂದೇಶವನ್ನೂ ಹಾಕಿದ್ದ. ಕುಲಂನ ಸ್ನೇಹಿತರು, ಸಂಬಂಧಿಗಳು ಇಂಥ ಹುಚ್ಚಾಟ ಬಿಡು, ಆಕೆ ನಿನ್ನನ್ನು ಎಂದೂ ಮದುವೆಯಾಗುವುದಿಲ್ಲ ಎಂದು ಬೈದು ಹೇಳಿದರೂ ಈತ, ಸತ್ತರೂ ಬ್ರಿಟನ್ನಿನಲ್ಲಿಯೇ ಆಕೆಗಾಗಿ ಸಾಯುತ್ತೇನೆ ಎಂದು ಅಮರಪ್ರೇಮಿಯಾಗಲು ಪ್ರತಿಜ್ಞೆ ತೊಟ್ಟುಬಿಟ್ಟಿದ್ದ.
ತನ್ನ ಛಲವನ್ನು ಬಿಡದ ಕುಲಂ, ಏಳು ತಿಂಗಳ ಪಯಣದಲ್ಲಿ ಆಹಾರ ಖಾಲಿಯಾದರೂ, ಸಾಗರದಲ್ಲಿ ಅನೇಕ ವೈಪರೀತ್ಯಗಳನ್ನು ಎದುರಿಸಿದರೂ ಧೈರ್ಯಗುಂದದೆ ಒಂದು ದಿನ ಬ್ರಿಟನ್ ತಲುಪಿದ್ದಾನೆ. ಸದ್ಯಕ್ಕೆ ಆತ ಸಾಗಿಬಂದ ಬೋಟನ್ನು ಸಸೆಕ್ಸ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನನಗೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎಂದು ಕರ್ಟ್ನಿ ಮರ್ರಿಯೂ ಆತನನ್ನು ತಿರಸ್ಕರಿಸಿದ್ದಾಳೆ. ಇಷ್ಟು ಸಾಲದೆಂಬಂತೆ, ಇನ್ನು ಇಸ್ತಾನ್‌ಬುಲ್‌ಗೆ ಮರಳಿ ಬರಬೇಡ, ಹುಡುಗಿ ಸಿಗಲಿಲ್ಲವೆಂದರೆ ಸಮುದ್ರದಲ್ಲಿಯೇ ಮುಳುಗಿ ಸಾಯಿ ಎಂದು ಆತನ ಸ್ನೇಹಿತರು, ಬಂಧುಗಳು ಕಟ್ಟಪ್ಪಣೆ ಮಾಡಿದ್ದಾರೆ. ಈಗ ಆತ ಏನು ಮಾಡಬೇಕು ಹೇಳಿ?
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ













Click it and Unblock the Notifications