ಎಸ್ಎಂ ಕೃಷ್ಣ ಪುತ್ರಿ ಶಾಂಭವಿ ಮಂಡ್ಯ ಲೋಕಸಭೆ ಕಣಕ್ಕೆ?

ಕಳೆದ 4 ಅವಧಿಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, 3 ಬಾರಿ ಸಂಸತ್ ಪ್ರವೇಶಿಸಿರುವ 'ಮಂಡ್ಯದ ಗಂಡು' ಅಂಬರೀಷ್ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಗಮನಾರ್ಹವೆಂದರೆ ಈ ಬಾರಿ ನಟ ಅಂಬರೀಷ್ ಅವರು ವಿಧಾನಸಭೆ ಪ್ರವೇಶಿಸಲು ಕಾತುರರಾಗಿದ್ದಾರೆ.
ಹಾಗಾಗಿ, ಕಾಂಗ್ರೆಸ್ ಸಹಜವಾಗಿಯೇ ಬೇರೆ ಅಭ್ಯರ್ಥಿಯ ತಲಾಶೆಯಲ್ಲಿದೆ. ಈ ಸಂಬಂಧ ನಿನ್ನೆ ಸೋಮವಾರ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಸಭೆ ನಡೆಸಿದ್ದಾರೆ. ಅಲ್ಲಿ ಶಾಂಭವಿ ಅವರ ಹೆಸರು ಪ್ರಸ್ತಾಪವಾಗಿದೆ. AICC ವೀಕ್ಷಕಿಯಾಗಿ ಸಭೆಯಲ್ಲಿ ಡಾ. ವಿಜಯಾ ಧರಣಿ ಅವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಹಚ್ಚಿನ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಕೃಷ್ನ ನಂತರದ ಸ್ಥಾನ ತುಂಬಲು ಮತ್ತು ಹಾಗೂ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ಅಭ್ಯರ್ಥಿಗೆ ಅವಕಾಶ ಮಾಡಿಕಡಲು ಇದು ಸಕಾಲ. ಪಕ್ಷದ ಬಲವರ್ಧನೆಗೂ ಇದು ಸಹಕಾರಿಯಾಗಲಿದೆ ಎಂದು ಸಭೆಯಲ್ಲಿ ಮುಖಂಡರು ಅಭಿಪ್ರಾಯಪಟ್ಟರು ಎಂದು ತಿಳಿದುಬಂದಿದೆ.
ಇನ್ನೂ ಯಾರು ಯಾರು ಕಣಕ್ಕೆ? ಕುತೂಹಲಕಾರಿಯೆಂದರೆ ಕೃಷ್ಣ ಅವರ ಕಟ್ಟಾ ಬೆಂಬಲಿಗರಾದ ವಕೀಲ ಟಿಎಸ್ ಸತ್ಯಾನಂದ, ಮಾಜಿ ಸಚಿವ ಎಂಎಸ್ ಆತ್ಮಾನಂದ, ಮಾಜಿ ಶಾಸಕ ಮಧು ಗೌಡ ಸೇರಿದಂತೆ ಇನ್ನೂ ಕೆಲವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಲೋಕಸಭೆ ಟಿಕೆಟ್ ಗೆ ಅವಕಾಶ ಗಿಟ್ಟಿಸಲು ತೆರೆಮರೆಯ ಸಂಧಾನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.












Click it and Unblock the Notifications