ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶದಿಂದ ಭುವಿಗಿಳಿದ ಸುನೀತಾ ವಿಲಿಯಮ್ಸ್

By Mahesh
|
Google Oneindia Kannada News

ಹ್ಯೂಸ್ಟನ್, ನ.19: ಸುಮಾರು ನಾಲ್ಕು ತಿಂಗಳ ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸೋಮವಾರ (ನ.19) ಮುಂಜಾನೆ ಧರೆಗಿಳಿದಿದ್ದಾರೆ.

ಮುಂಜಾನೆ 3.56ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯೆಡೆಗೆ ಪಯಣ ಆರಂಭಿಸಿ ಬೆಳಗ್ಗೆ 7.32ಕ್ಕೆ ಸರಿಯಾಗಿ ಸಹಯಾತ್ರಿಗಳ ಜೊತೆಗೆ ವಿಲಿಯಮ್ಸ್ ಸುರಕ್ಷಿತವಾಗಿ ಹಿಂದಿರುಗಿದ್ದಾರೆ.

Astronaut Sunita Williams back home after 4 months in space,
ಸಹಯಾತ್ರಿಗಳಾದ ಅಕಿ ಹೊಷಿದೆ ಹಗೂ ಯೂರಿ ಮಲೆಂಷೆಂಕೋ ಕೂಡಾ ಸುರಕ್ಷಿತವಾಗಿ ತಲುಪಿದ್ದಾರೆ. ಕಜಕಿಸ್ತಾನದ ಬೈಕನೂರು ಬಾಹ್ಯಾಕಾಶ ಕೇಂದ್ರದಲ್ಲಿ ಎಲ್ಲಾ ಗಗನಯಾತ್ರಿಗಳು ತಂಗಲಿದ್ದಾರೆ. ಹೊರ ಜಗತ್ತಿನ ಹವಾಮಾನಕ್ಕೆ ಇನ್ನೂ ಗಗನಯಾತ್ರಿಗಳು ಹೊಂದಿಕೊಳ್ಳಬೇಕಿದ್ದು, ಅಲ್ಲಿ ತನಕ ಬಾಹ್ಯಾಕಾಶ ಕೇಂದ್ರವೇ ಅವರ ಮನೆಯಾಗಲಿದೆ.

ಬೈಕಾನೂರ್ ನಿಂದ ಅಂತರಿಕ್ಷಕ್ಕೆ ಹಾರಿರುವ ಸುನಿತಾ ತನ್ನ ಹೊಸ ನೆಲೆಯಾದ ರೂಸ್ ವೆಲ್ಟ್ ಮಾಡ್ಯೂಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ ಎಸ್) ವನ್ನು ಜುಲೈ 17, 2012ಕ್ಕೆ ತಲುಪಿದ್ದರು.

ಐಎಸ್ಎಸ್ ನೌಕೆಯಲ್ಲಿ ಸುಮಾರು 195 ದಿನ ತಂಗಿದ್ದ ಸುನಿತಾ ಅಲ್ಲಿಂದಲೇ ಲಂಡನ್ ಒಲಿಂಪಿಕ್ಸ್ ವೀಕ್ಷಿಸಲು ದಿನಾಂಕ ನಿಗದಿಪಡಿಸಿಕೊಂಡಿದ್ದರು.

ನ.6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ಮಾಡುವ ಮೂಲಕ ಮತ್ತೊಂದು ವಿಕ್ರಮ ಸಾಧಿಸಿದ್ದರು. ಎಕ್ಸ್ ಪೆಡಿಷನ್ 32 ಎಂಬ ಹೆಸರಿನಲ್ಲಿ ಯಾತ್ರೆ ಕೈಗೊಂಡಿರುವ ಸುನಿತಾ ಜೊತೆ ರಷ್ಯಾದ ಯುರಿ ಮಲೆಂಚೆಂಕೊ, ಜಪಾನಿನ ಅಕಿಹಿಕೊ ಹೊಶಿದೆ ಕೂಡಾ ಇದ್ದಾರೆ. ರಷ್ಯಾ ನಿರ್ಮಿತ ಸೋಯುಜ್ ಟಿಎಂಎ-05ಎಎಂ ಬಾಹ್ಯಾಕಾಶ ನೌಕೆ ಬಳಸಲಾಗಿದೆ.

ಕಳೆದ ಬಾರಿ ತಮ್ಮ ಜೊತೆ ಗಣೇಶ ದೇವರ ಚಿತ್ರವನ್ನು ಸುನಿತಾ ಕೊಂಡೊಯ್ದಿದ್ದರು. ಈ ಬಾರಿ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ತಂಡ ಪ್ರಕೃತಿ ವಿಕೋಪ ಮುನ್ಸೂಚನೆ, ಜೀವ ವೈವಿಧ್ಯ, ಹವಾಮಾನ ಮಾಹಿತಿಯ ಬಗ್ಗೆ ಸಂಶೋಧನೆ ನಡೆಸಲಿದೆ. ಕಳೆದ ಬಾರಿ ಸುನಿತಾರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಆದರೆ, ಈ ಬಾರಿ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ.

ಅಮೆರಿಕದ ನೌಕಾದಳದಲ್ಲಿ ಅಧಿಕಾರಿ ಹಾಗೂ ನಾಸಾದಲ್ಲಿ ಗಗನಯಾತ್ರಿಯಾಗಿರುವ ಸುನಿತಾ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಏರ್ಪಡಿಸಿದ್ದ ಎಕ್ಸ್‌ಪೆಡಿಷನ್ 14ರ ಯಾನದಲ್ಲಿ ಗಗನ ಯಾತ್ರಿಗಳಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಲಾಗಿತ್ತು.

ನಂತರ ಎಕ್ಪ್‌ಪೆಡಿಷನ್ 15ರಲ್ಲೂ ಕೂಡ ಅವರನ್ನು ಬಳಸಿಕೊಳ್ಳಲಾಯ್ತು. ಅವರು ಅತಿ ಹೆಚ್ಚು ದಿನ (195 ದಿನ) ಬಾಹ್ಯಾಕಾಶ ನೌಕೆಯಲ್ಲಿ ಕಾಲ ಕಳೆದ ಮಹಿಳೆ ಎಂಬ ದಾಖಲೆಯನ್ನು ಹೊಂದಿದ್ದಾರೆ.

ನಾಸಾದ ಸಾರ್ವಜನಿಕ ವಕ್ತಾರೆಯಾಗಿರುವ ಇವರನ್ನು ಕೊಲ್‌ಬರ್ಟ್ ರಿಪೋರ್ಟ್ ಕಿರುತೆರೆ ಕಾರ್ಯಕ್ರಮದಲ್ಲಿ ISSನ Node 3ಗೆ ಸೂಚಿಸಲಾದ ಹೆಸರನ್ನು ಬಿತ್ತರಿಸಲು ಆಯ್ಕೆ ಮಾಡಲಾಗಿತ್ತು.

ಡಾ.ದೀಪಕ್ ಪಾಂಡ್ಯಾ ಮತ್ತು ಬೋನಿ ಪಾಂಡ್ಯಾ ಅವರ ಮಗಳಾಗಿ ಸುನಿತಾ ಒಹಾಯೋದಲ್ಲಿರುವ ಯುಕ್ಲಿಡ್‌ನಲ್ಲಿ ಹುಟ್ಟಿದರು. ದೀಪಕ್ ಪಾಂಡ್ಯಾ ಭಾರತದ ಗುಜರಾತ್ ಮೂಲದವರಾಗಿದ್ದು ಅವರ ಪೂರ್ವಜರು ಇನ್ನೂ ಭಾರತದಲ್ಲಿ ನೆಲೆಸಿದ್ದಾರೆ.

2007ರಲ್ಲಿ ಸುನಿತಾ ಕೂಡಾ ತಮ್ಮ ಪೂರ್ವಜರ ಹಳ್ಳಿಯಾದ ಗುಜರಾತ್‌ನ ಜುಲಾಸನ್‌ಗೆ ಭೇಟಿ ನೀಡಿದ್ದರು. ತಾಯಿಯ ಕಡೆಯಿಂದ ವಿಲಿಯಮ್ಸ್ ಸ್ಲೋವಿನ್ ಮೂಲದವರಾಗಿದ್ದಾರೆ.

English summary
It's a happy home-coming for Indian-origin astronaut Sunita Williams, who came back to Earth, after spending four-months in orbit on Monday, Nov 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X