ಬೆಂಗಳೂರಿನಲ್ಲಿ 1 ಕೊಲೆ, 1 ಅನುಮಾನಾಸ್ಪದ ಸಾವು

ನೇಪಾಳದ ಮೂಲದ ಲಾಲ್ ಸಿಂಗ್ (35) ಕೊಲೆಯಾಗಿರುವ ವ್ಯಕ್ತಿ. ಆತ ದೇವಸ್ಥಾನದ ಪಕ್ಕದಲ್ಲಿರುವ ಯಾಗಶಾಲೆಯಲ್ಲಿನ ಕಟ್ಟೆಯ ಮೇಲೆ ಮಲಗುತ್ತಿದ್ದ. ಕಳೆದ 3 ತಿಂಗಳಿಂದ ಕಾವಲು ಕಾಯುವ ಕಾಯಕ ಮಾಡುತ್ತಿದ್ದ ಲಾಲ್ ಸಿಂಗ್ ಮೇಲೆ ಕಳ್ಳರ ಗ್ಯಾಂಗ್ ಎರಗಿ ಹತ್ಯೆ ಮಾಡಿದೆ. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.
ಆರ್ಟಿಓ ಏಜೆಂಟ್ ನಿಗೂಢ ಸಾವು : ಕೆಲಸಕ್ಕೆಂದು ಸ್ಕೂಟರ್ ಮೇಲೆ ಹೊರಟಿದ್ದ ಆರ್‌ಟಿಓ ಏಜೆಂಟ್ ಗಿರಿನಗರ ನಿವಾಸಿ ಕುಮಾರ್ (38) ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಶ್ರೀನಗರ ಬಸ್ ನಿಲ್ದಾಣದ ಬಳಿ ಸೋಮವಾರ ಬೆಳಗಿನ ಜಾವ ಕುಮಾರ್ ದೇಹ ದೊರೆತಿದೆ. ಅವರ ತಲೆಗೆ ಬಲವಾದ ಪೆಟ್ಟುಬಿದ್ದಿದ್ದು, ರಸ್ತೆಯೆಲ್ಲ ರಕ್ತಸಿಕ್ತವಾಗಿತ್ತು.
ಯಾವುದಾದರೂ ವಾಹನ ಡಿಕ್ಕಿ ಹೊಡೆಯಿತೋ ಅಥವಾ ಯಾರಾದರೂ ಹತ್ಯೆ ಮಾಡಿದ್ದಾರೋ ಎಂಬುದು ಇನ್ನೂ ತಿಳಿದುಬರಬೇಕಿದೆ. ಅವರ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಲಾಗಿದೆ. ಫಲಿತಾಂಶ ಬಂದನಂತರವೇ ಅವರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಹನುಮಂತನಗರ ಪೊಲೀಸರು ತಿಳಿಸಿದ್ದಾರೆ. ಅವರನ್ನು ಕಂಡರೆ ಆಗದವರು ಯಾರೋ ಅವರ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಕುಮಾರ್ ಕುಟುಂಬದವರು ದೂರಿದ್ದಾರೆ.












Click it and Unblock the Notifications