ಶಿವಸೇನೆ ಠಾಕ್ರೆಯ ಸ್ಥಿತಿ ಚಿಂತಾಜನಕ: 'ಬಾಳ' ಪುಟಗಳು

ಬಾಳಾ ಪುಟಗಳನ್ನು ತಿರುವಿ ಹಾಕಿದಾಗ...:
ದೇಶ-ವಿದೇಶಗಳ ಆಹಾರ- Continental, Chinese cuisines, Thai food. ಕುಡಿತ- Heineken beer, wine. ಸಿಗಾರ್- Marco Polo, Three Nuns, Henry, Peacock.
1954ರಲ್ಲಿ ಧೂಮಪಾನ ಚಟ ಅಂಟಿಸಿಕೊಂಡು 1995ರವರೆಗೂ ಮುಂದುವರಿಸಿದರು. ಹೆಂಡತಿ ಮತ್ತು ಮಗ (ಅಪಘಾತದಲ್ಲಿ) ಸತ್ತ ನಂತರ ಧೂಪಮಾನವನ್ನು ಬಿಟ್ಟುಬಿಟ್ಟರು.
ಕ್ರಿಕೆಟ್ ಬಲು ಇಷ್ಟ. ಹಾಗೆಯೇ, ತೆಂಡೂಲ್ಕರ್-ಗವಾಸ್ಕರ್ ಜೋಡಿ ಬಗ್ಗೆಯೂ. ಅದೂ ಪಾಕಿಸ್ತಾನದ ವಿರುದ್ಧ ಅವರಿಬ್ಬರೂ ಚೆನ್ನಾಗಿ ಆಡಿ ಭಾರತವನ್ನು ಗೆಲ್ಲಿಸಿದಾಗ ಅಲ್ಲ, ಪಾಕಿಸ್ತಾನವನ್ನು ಸೋಲಿಸಿದಾಗ ಹುಚ್ಚೆದ್ದು ಕುಣಿಯುತ್ತಿದ್ದರು!
ಸಾರ್ವಜನಿಕ ಗಣೇಶೋತ್ಸವ, ನವರಾತ್ರಿ ಅಂದರೆ ಅಚ್ಚುಮೆಚ್ಚು. ಸಾರ್ವಜನಿಕ ಸಮಾವೇಶಗಳಲ್ಲಿ ಆವೇಶದಿಂದ ಭಾಷಣ ಮಾಡುವುದು, ಮರಾಠಿ ಹೆಸರಿನಲ್ಲಿ ತನಗಿಷ್ಟ ಬಂದಂತೆ ಮುಂಬೈಅನ್ನು (ಬಾಂಬೆ ಹೆಸರನ್ನು ಅವರು ಎಂದೂ ಇಷ್ಟಪಟ್ಟಿಲ್ಲ) ಬಂದ್ ಮಾಡಿಸುವುದು ಇವರಗಿಷ್ಟ. ಬಿಜೆಪಿ ಜತೆ ಸೇರಿ ಮಹಾರಾಷ್ಟ್ರದಲ್ಲಿ ಸರಕಾರ ನಡೆಸುವಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ 'ಮಾತೋಶ್ರೀ'ನಲ್ಲಿ ಕುಳಿತು ರಿಮೋಟ್ ಕಂಟ್ರೋಲ್ ಮೇಲಿದ್ದ ತಮ್ಮ ತುದಿಬೆರಳನ್ನು ತೆಗೆಯಲಿಲ್ಲ.
ಒಮ್ಮೆ ಪತ್ರಕರ್ತರೊಬ್ಬರು 'ನಿಮ್ಮ ಹೃದಯಕ್ಕೆ white wineಗಿಂತ red wine ಒಳ್ಳೆಯದಲ್ಲವೇ?' ಎಂದು ಕೇಳಿದಾಗ 'ಯಾರು ಹೇಳಿದ್ದು, ನನಗೆ ಹೃದಯ ಇದೆಯೆಂದು' ಎಂದು ಮಾರುತ್ತರ ನೀಡಿದ್ದರು. ಅದನ್ನೇ ಮುಂದುವರಿಸಿ ಹೇಳುವುದಾದರೆ ಖಂಡಿತ ಕರ್ನಾಟಕ/ಕನ್ನಡಿಗರ ವಿಷಯದಲ್ಲಿ ಬಾಳಾಗೆ ಹೃದಯವಂತಿಕೆ ಇರಲಿಲ್ಲ.
ಬಹುಶಃ ಪಾಕಿಸ್ತಾನಕ್ಕಿಂತ ಅಥವಾ ಪಾಕಿಸ್ತಾನದಷ್ಟೇ ಅವರು ದ್ವೇಷಿಸಿದ್ದು ಅಂದರೆ ಕರ್ನಾಟಕವನ್ನು ಅದರಲ್ಲೂ ನಮ್ಮ ಗಡಿನಾಡು ಬೆಳಗಾವಿಯನ್ನು! ಏನೇ ಆದರೂ, ಬಾಳಾ ಠಾಕ್ರೆ ಶೀಘ್ರ ಗುಣಮುಖರಾಗಲಿ ಎಂಬುದು ಹೃದಯ ವೈಶಾಲ್ಯದ ಕನ್ನಡಿಗನ ಹಾರೈಕೆ...












Click it and Unblock the Notifications