ಗ್ಯಾಂಗ್ ರೇಪ್: ದೊಡ್ಡಬಳ್ಳಾಪುರ ಯುವತಿಯ ಆತ್ಮಹತ್ಯೆ

bng-doddaballapur-garment-girl-gang-molested-suicide
ಬೆಂಗಳೂರು,ನ.15: ರಾಜಧಾನಿಯಿಂದ ಕೂಗಳೆತೆಯ ದೂರದಲ್ಲಿರುವ ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ಮಧ್ಯಾಹ್ನ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಬಾಧಿತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಆದರೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ, ಆಕೆಯನ್ನು ಸಾಯಿಸಿದ್ದಾರೆ ಎನ್ನಲಾಗಿದೆ.

'ಸ್ನೇಹಿತೆಯ ಮನೆಗೆ ಹೊರಟಿದ್ದ ತಮ್ಮ ಪುತ್ರಿ ಯಶೋಧಾಳನ್ನು (19) ನಾಲ್ವರು ಯುಕವರು ಕುರುವಿನಗೆರೆ ಕ್ರಾಸ್ ಬಳಿ ಅಪಹರಿಸಿ, ಸಮೀಪದ ಮಾವಿನ ತೋಪಿನಲ್ಲಿ ಅತ್ಯಾಚಾರ ಎಸಗಿದ್ದಾರೆ. ನಂತರ ಯಶೋಧಾಗೆ ನೇಣು ಬಿಗಿದು ಪರಾರಿಯಾಗಿದ್ದಾರೆ' ಎಂದು ಯಶೋಧಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ನರಸಿಂಹನಹಳ್ಳಿಯ ಪ್ರದೀಪ್, ಗಂಗರಾಜು, ನರಸಿಂಹಮೂರ್ತಿ ಹಾಗೂ ಮತ್ತೊಬ್ಬ ನರಸಿಂಹಮೂರ್ತಿ ಎಂಬ ಯುವಕರು ಈ ದುಷ್ಕೃತ್ಯವೆಸಗಿದ್ದಾರೆ ಎಂದು ಅವರು ಆರೋಪಿದ್ದಾರೆ.

ಘಟನೆಯ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ದೊಡ್ಡಬಳ್ಳಾಪುರ ಪೊಲೀಸರು, ಪ್ರತ್ಯಕ್ಷ ಸಾಕ್ಷಿಯ ಹೇಳಿಕೆ ಪಡೆದಿದ್ದಾರೆ. ಶವ ಪರೀಕ್ಷೆ ವರದಿ ಇಂದು ಗುರುವಾರ ಬರಲಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಸೆಟ್ಟಹಳ್ಳಿಯ ಗಾರ್ಮೆಂಟ್ಸ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಯಶೋಧಾ, ದೀಪಾವಳಿ ಹಬ್ಬದಂದು ಸ್ನೇಹಿತೆಯ ಮನೆಗೆ ಸೈಕಲ್ ತುಳಿಯುತ್ತಾ ಹೊರಟಿದ್ದಳು. ಆ ವೇಳೆ ನಾಲ್ವರು ಯುವಕರು ಆಕೆಯನ್ನು ಅಪಹರಿಸಿ, ಅತ್ಯಾಚಾರವೆಸಗಿ, ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.

ಬೆಂಗಳೂರು ಸುತ್ತಮುತ್ತ (ಕೆಂಗೇರಿಯ ಆಸುಪಾಸು) ಒಂದು ತಿಂಗಳಲ್ಲಿ ನಡೆದಿರುವ ಮೂರನೆಯ ಗ್ಯಾಂಗ್ ರೇಪ್ ಪ್ರಕರಣ ಇದಾಗಿದೆ. National Law School of India Universityಯ ನೇಪಾಳಿ ವಿದ್ಯಾರ್ಥಿನಿಯ ಮೇಲೆ (ಅ.13) ಸಾಮೂಹಿಕ ಅತ್ಯಾಚಾರ ನಡೆದಿತ್ತು. ತದನಂತರ, ಅ. 18ರಂದು ಬಾರ್ ಗರ್ಲ್ಸ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+