ಚೆನ್ನೈ ಸಿಟಿಎಸ್ ಟೆಕ್ಕಿ ಆತ್ಮಹತ್ಯೆ, ಪತಿ ಬಂಧನ

ಕಾಂಗ್ನಿಜೆಂಟ್ ಟೆಕ್ನಾಲಜೀಸ್ ಸಲ್ಯೂಷನ್ಸ್ ಸಂಸ್ಥೆಯ ಕಟ್ಟಡದಿಂದ ಜಿಗಿದು ಮಹಿಳಾ ಉದ್ಯೋಗಿ ಸಾವಿಗೆ ಶರಣಾಗಿದ್ದರು. ಆದರೆ, ಟೆಕ್ಕಿ ಬಗ್ಗೆ ಯಾವುದೇ ಮಾಹಿತಿಯನ್ನು ಪೊಲೀಸರು ಹೊರ ಹಾಕಿರಲಿಲ್ಲ.
ಮಹಿಳಾ ಟೆಕ್ಕಿ ಪೋಷಕರು ಕೊಟ್ಟ ದೂರಿನ ಮೇರೆಗೆ 26 ವರ್ಷದ ಕಾಂಗ್ನಿಜೆಂಟ್ ಉದ್ಯೋಗಿ ಪತಿಯನ್ನು ಬಂಧಿಸಲಾಗಿದೆ. ಆಕೆ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಚೆನ್ನೈಪೊಲೀಸರು ಹೇಳಿದ್ದಾರೆ.
ಟೆಕ್ಕಿ ಪೋಷಕರು ಕೊಟ್ಟ ದೂರಿನಲ್ಲಿ ಆಕೆ ಸಾವಿನ ನಿಖರ ಕಾರಣ ಕಂಡು ಹಿಡಿಯಲು ಕಷ್ಟವಾಗಿತ್ತು. ಮಗಳು ಅಳಿಯ ಚೆನ್ನಾಗಿದ್ದರು. ಅದರೆ, ಮದುವೆಯಾಗಿ 14 ತಿಂಗಳಾದರೂ ಮಗು ಪಡೆಯುವ ಬಗ್ಗೆ ಇಬ್ಬರಲ್ಲೂ ಆಸಕ್ತಿಯಿರಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.
ಆದರೆ, ಆತ ತನ್ನ ಪತ್ನಿಗೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎಂದು ನಂತರ ತಿಳಿದು ಬಂದಿದೆ. ಆದರೆ, ಆತನ ಬೇಡಿಕೆ ಏನಿತ್ತು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಬಗ್ಗೆ ಆಕೆ ಪೋಷಕರು ಕೂಡಾ ಏನು ಹೇಳಿಲ್ಲ. ಹೆಚ್ಚಿನ ವಿಚಾರಣೆ ನಂತರ ತಿಳಿಯಲಿದೆ ಎಂದು ಚೆನ್ನೈ ಪೊಲೀಸರು ಹೇಳಿದ್ದಾರೆ.
ಮದುವೆಯಾಗಿ 7 ವರ್ಷದೊಳಗೆ ಪತ್ನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದರಿಂದ revenue sub-divisional officer ಕೂಡಾ ಈ ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮದ್ರಾಸ್ ಎಕ್ಸ್ ಪೋರ್ಟ್ ಪ್ರೊಸೆಸಿಂಗ್ ಜೋನ್(ಎಂಇಪಿಜಡ್ಜ್) ನಲ್ಲಿರುವ ಕಾಂಗ್ನಿಜೆಂಟ್ ಟೆಕ್ನಾಲಜೀಸ್ ಸಂಸ್ಥೆಯ 6ನೇ ಮಹಡಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಹೈದರಾಬಾದಿನ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ನೀಲಿಮಾ ಆತ್ಮಹತ್ಯೆಯ ನಿಗೂಢತೆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಗುವ ಮುನ್ನವೇ ಮತ್ತೊಬ್ಬ ಇನ್ಫೋಸಿಸ್ ಟೆಕ್ಕಿ ಸಾವನ್ನಪಿರುವ ಘಟನೆ ನಡೆದಿತ್ತು.
ಜು.31 ರಂದು 27 ವರ್ಷದ ಇನ್ಫೋಸಿಸ್ ಉದ್ಯೋಗಿ ನಿಲೀಮಾ ಕಚೇರಿ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. 2011ರಲ್ಲಿ ಅಮೆರಿಕಕ್ಕೆ ತೆರಳಿದ್ದ ನಿಲೀಮಾ ಭಾರತಕ್ಕೆ ಜು.21, 2012ರಂದು ವಾಪಾಸ್ ಆಗಿದ್ದರು.
ನಂತರ ಕೆಲ ದಿನಗಳಲ್ಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಲೀಮಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಲಾಗಿದೆ ಎಂದು ನಿಲೀಮಾ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ನಂತರ 30 ವರ್ಷ ವಯಸ್ಸಿನ ಟೆಕ್ಕಿ ಗುಂಟೂರು ಮೂಲದ ಅನಿಲ್ ಕುಮಾರ್ ಅವರು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಸಾಫ್ಟ್ ವೇರ್ ಕ್ಷೇತ್ರದ ಉದ್ಯೋಗಿಗಳಿಗೆ ಆತಂಕ ಮೂಡಿತ್ತು.












Click it and Unblock the Notifications