ಎಷ್ಟು ಬೇಕಾದ್ರೂ ಸಿಲಿಂಡರ್ ತಗೋಳ್ಳಿ, ಆದ್ರೆ ಬೆಲೆ?

ಎಲ್ಲ ಲೋಕಸಭಾ ಚುನಾವಣಾ ಕಾಲೇ ... ಹಿಂದೆಮುಂದೆ ನೋಡದೆ, ಗ್ರಾಹಕರ ಅಳಲನ್ನು ಕೇಳದೆ ಯುಪಿಎ ಸರ್ಕಾರ ಸಬ್ಸಿಡಿ ದರದಲ್ಲಿ ವರ್ಷವೊಂದಕ್ಕೆ ಕೇವಲ ಆರು ಸಿಲಿಂಡರ್‌ಗಳನ್ನು ನೀಡುವ ನೀತಿಯನ್ನೇನೋ ಜಾರಿಗೆ ತಂದುಬಿಟ್ಟಿದೆ. ಆದರೆ ಈಗ ತನ್ನ ನಿರ್ಧಾರದ ಬಗ್ಗೆ ತಾನೇ ಪರಿತಪಿಸುವಂತಾಗಿದೆ.
ಮುಂದಿನ ಅಕ್ಟೋಬರ್ ಹೊತ್ತಿಗೆ ಬಹುತೇಕ ನಿವಾಸಿಗಳ ಸಬ್ಸಿಡಿ ಸಿಲಿಂಡರ್ ಕೋಟಾ ಮುಗಿದಿರುತ್ತದೆ. 2014ರ ಮಾರ್ಚ್ ವೇಳೆಗೆ ಮಾರುಕಟ್ಟೆ ದರದಲ್ಲಿ ಜನರು ಸಿಲಿಂಡರ್ ಖರೀದಿಸಬೇಕಾಗುತ್ತದೆ. ಹೀಗಾಗಿ ಇದು ಚುನಾವಣೆ ವಿಷಯವಾಗುವ ಸಾಧ್ಯತೆ ಇದೆ ಎಂಬ ಆತಂಕ ಕೇಂದ್ರ ಸರಕಾರಕ್ಕಿದೆ.
2014ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಯುಪಿಎ ಸರ್ಕಾರ ಆ ವೇಳೆಗೆ ಸರಿಯಾಗಿ ಈ ನೀತಿ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಭೀತಿಯಲ್ಲಿದೆ. ಹಾಗಾಗಿ, ಸಬ್ಸಿಡಿ ಸಿಲಿಂಡರ್‌ಗಳಿಗೆ ಇರುವ (6/12) ಮಿತಿಯನ್ನೇ ರದ್ದುಪಡಿಸಿದರೆ ಹೇಗೆ? ಅದರ ಬದಲಿಗೆ ಸಿಲಿಂಡರ್ ಬೆಲೆಯನ್ನು ತಲಾ 100 ರೂ. ನಷ್ಟು ಏರಿಸಿದರೆ ಹೇಗೆ ಎಂಬ ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಹೊಸ ಲೆಕ್ಕಾಚಾರ ಹೀಗಿದೆ: ಪೆಟ್ರೋಲಿಯಂ ಸಚಿವಾಲಯದ ಅಂದಾಜಿನ ಪ್ರಕಾರ ಸಬ್ಸಿಡಿ ಸಿಲಿಂಡರ್‌ಗಳಿಗೆ 6ರ ಮಿತಿ ಹೇರಿ, ಉಳಿದ ಸಿಲಿಂಡರುಗಳನ್ನು ಮಾರುಕಟ್ಟೆ ದರದಲ್ಲಿ ಮಾರುವುದರಿಂದ ತೈಲ ಕಂಪನಿಗಳಿಗೆ 12 ಸಾವಿರ ಕೋಟಿ ರೂ. ಉಳಿತಾಯವಾಗುತ್ತದೆ. ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು 9ಕ್ಕೆ ಏರಿಸಿಬಿಟ್ಟರೆ ಉಳಿತಾಯದ ಮೊತ್ತ 2,500 ಕೋಟಿ ರೂ.ಗೆ ಕುಸಿಯುತ್ತದೆ.
ಇದರ ಬದಲು ಸಬ್ಸಿಡಿ ಸಿಲಿಂಡರುಗಳಿಗೆ ಇರುವ ಮಿತಿಯನ್ನೇ ರದ್ದುಗೊಳಿಸಿ ಎಷ್ಟು ಬಾರಿ ಬೇಕಾದರೂ ಮರುಭರ್ತಿ ಮಾಡಿಸಿಕೊಳ್ಳಲು ಅವಕಾಶ ನೀಡಿ ಸಿಲಿಂಡರ್ ಬೆಲೆಯನ್ನು 100 ರೂ. ಹೆಚ್ಚಿಸಿದರೆ ತೈಲ ಕಂಪನಿಗಳಿಗೆ 6 ಸಿಲಿಂಡರುಗಳ ಮಿತಿ ಹೇರಿದಾಗ ಉಳಿಯುತ್ತಿದ್ದಷ್ಟೇ ಹಣ ಮಿಗುತ್ತದೆ. ಹೀಗಾಗಿ ಈ ಅವಕಾಶ ಆಯ್ದುಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications